Xi Jinping: ಚೀನಾದ ಇತಿಹಾಸದಲ್ಲೇ 3ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಕ್ಸಿ ಜಿನ್‌ಪಿಂಗ್
ಚೀನಾ ದೇಶದಲ್ಲಿ ಅನೇಕ ವರ್ಷಗಳ ಬಳಿಕ ಅತ್ಯಂತ ಶಕ್ತಿಶಾಲಿ ನಾಯಕ ಎನ್ನಲಾಗುತ್ತಿರುವ ಕ್ಸಿ ಜಿನ್‌ಪಿಂಗ್ ದೇಶದ ಅಧ್ಯಕ್ಷರಾಗಿ (ಪ್ರಧಾನಿ) ಶುಕ್ರವಾರ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡರು.
ಬೀಜಿಂಗ್, ಮಾರ್ಚ್ 10: ದೇಶದ ಹಲವು ತಲೆಮಾರುಗಳ ಬಳಿಕ ಅತ್ಯಂತ ಶಕ್ತಿಶಾಲಿ ನಾಯಕ ಎನ್ನಲಾಗುವ ಕ್ಸಿ ಜಿನ್‌ಪಿಂಗ್ ಅವರು ಚೀನಾದ ಅಧ್ಯಕ್ಷರಾಗಿ (ಪ್ರಧಾನಿ) ಶುಕ್ರವಾರ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ಕಮ್ಯುನಿಸ್ಟ್ ಪಕ್ಷದ (CCP) ಮುಖ್ಯಸ್ಥರಾಗಿ ಕ್ಸಿ ಮತ್ತೆ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದು ಚೀನಾದ ರಬ್ಬರ್-ಸ್ಟ್ಯಾಂಪ್ ಸಂಸತ್ತು ತಿಳಿಸಿದೆ.
69 ವರ್ಷದ ಕ್ಸಿ ಅವರ ಶೂನ್ಯ-ಕೋವಿಡ್ ನೀತಿ ಹಿಂಪಡೆದಿದ್ದರು. ಇದಾದ ಬಳಿಕ ಅಸಂಖ್ಯಾತ ಜನರ ಸಾವುಗಳ ಹೆಚ್ಚಾಗಿದ್ದರಿಂದ ಸಾರ್ವಜನಿಕರ ಪ್ರತಿಭಟನೆ ಎದರುಸಿದ್ದರು. ಕ್ಸಿ ಮತ್ತೊಮ್ಮೆ ಪ್ರಧಾನಿ ಆಗುವುದಕ್ಕೆ ತೊಂದರೆಯಾಗದ ಹಾಗೇ ಪೂರಕವಾಗಿ ಈ ವಾರದ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್ (NPC) ನಲ್ಲಿ ಪ್ರತಿಭಟನೆ ಬಗೆಗಿನ ಅಂಶಗಳನ್ನು ಉಲ್ಲೇಖಿಸಿಲ್ಲ. ಈಗಾಗಲೇ ಪ್ರಧಾನಿಯಾಗಿ ಆಡಳಿತ ನೀಡಿದ್ದ ಕ್ಸಿ ಅವರಿಗೆ ಈ ಭಾರಿ ಒಟ್ಟು 2,952 ಮತಗಳು ಸಿಗುವ ಮೂಲಕ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದ್ದಾರೆ.

ಶುಕ್ರವಾರ, ಪ್ರತಿನಿಧಿಗಳು ಸರ್ವಾನುಮತದ ಮತದಲ್ಲಿ ಕ್ಸಿ ಅವರನ್ನು ಚೀನಾದ ಅಧ್ಯಕ್ಷರಾಗಿ ಮೂರನೇ ಅವಧಿಗೆ ಆಯ್ಕೆ ಮಾಡಿದರು. ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್, ತಿಯಾನನ್‌ಮೆನ್ ಚೌಕದ, ಪ್ರಮುಖ ರಸ್ತರೆಗಳಲ್ಲವು ಕಡುಗೆಂಪು ವಿದ್ಯುತ್ ದೀಪ, ಮತದಾನದ ಬ್ಯಾನರ್‌ಗಳಿಂದ ಅಲಂಕರಿಸಲಾಗಿತ್ತು. ಮಿಲಿಟರಿ ಬ್ಯಾಂಡ್ ನಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
'ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂವಿಧಾನಕ್ಕೆ ನಿಷ್ಠರಾಗಿರಲು, ಸಂವಿಧಾನದ ಅಧಿಕಾರವನ್ನು ಎತ್ತಿಹಿಡಿಯಲು, ನನ್ನ ಶಾಸನಬದ್ಧ ಜವಾಬ್ದಾರಿ ನಿರ್ವಹಿಸಲು, ಮಾತೃಭೂಮಿಗೆ ನಿಷ್ಠರಾಗಿರಲು, ಜನರಿಗೆ ನಿಷ್ಠರಾಗಿರಲು ನಾನು ಪ್ರತಿಜ್ಞೆ ಮಾಡುತ್ತೇನೆ' ಎಂದು ಅವರು ಭರವಸೆ ನೀಡಿದರು. ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮ ಮಾಡುವುದಾಗಿ ಹೇಳಿ ಅವರು ಅಧಿಕಾರ ಸ್ವೀಕರಿಸಿದರು. ಈ ಮೂಲಕ ಕ್ಸಿ ಸಮೃದ್ಧ, ಬಲವಾದ, ಪ್ರಜಾಪ್ರಭುತ್ವ, ಸುಸಂಸ್ಕೃತ, ಸಾಮರಸ್ಯ ಮತ್ತು ಶ್ರೇಷ್ಠ ಆಧುನಿಕ ಸಮಾಜವಾದಿ ದೇಶ ನಿರ್ಮಿಸಿಸುವುದಾಗಿ ಪ್ರತಿಜ್ಞೆ ಮಾಡಿದರು ಎಂದು ಅಲ್ಲಿನ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಮತದಾನದಲ್ಲಿ ಗಮನಾರ್ಹ ಏರಿಕೆ
ಕ್ಸಿ ಅವರಿಗೆ ಮರು ಚುನಾವಣೆಯಲ್ಲಿ ಗಮನಾರ್ಹವಾಗಿ ಮತಗಳು ಬಂದಿವೆ. ಕ್ಸಿ ವಿಚಾರದಲ್ಲಿ ಇದೊಂದು ಪರಾಕಾಷ್ಠೆ ಎನ್ನಲಾಗುತ್ತಿದೆ. ಚಿನಾದ ಪ್ರಸಿದ್ಧ ಪಕ್ಷದಿಂದ ಆಡಳಿತ ವಿಚಾರವಾಗಿ ಜಾಗತಿಕ ಶಕ್ತಿಯ ನಾಯಕನ ಸ್ಥಾನಕ್ಕೆ ಅವರು ಏರಿದ್ದಾರೆ.

ಅವರ ಆಯ್ಕೆ ಮೂಲಕ ಕಮ್ಯುನಿಸ್ಟ್ ಚೀನಾದ ದೀರ್ಘಾವಧಿಯ ಅಧ್ಯಕ್ಷರಾಗಿ ಐದು ವರ್ಷ ಮುಂದುವರೆಯಲಿದ್ದಾರೆ. ಇದರ ಆಧಾರದಲ್ಲೇ ಲೇಖಕ ಆಡ್ರಿಯನ್ ಗೀಜಸ್ ಅವರು 'ಕ್ಸಿ ಜಿನ್‌ಪಿಂಗ್ ದಿ ಮೋಸ್ಟ್ ಪವರ್‌ಫುಲ್ ಮ್ಯಾನ್ ಇನ್ ದ ವರ್ಲ್ಡ್' ಎಂದು ಎಎಫ್‌ಪಿಗೆ ತಿಳಿಸಿದ್ದಾರೆ.
ಗೀಜಸ್ ಹೇಳುವ ಪ್ರಕಾರ, ಕ್ಸಿ ಅವರು ಚೀನಾ ಬಗ್ಗೆ ನೈಜವಾದ ದೃಷ್ಟಿಯನ್ನು ಹೊಂದಿದವರು. ಚೀನಾವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವಾಗಿ ನೋಡಲು ಕ್ಸಿ ಬಯಸುತ್ತಾರೆ. ದಶಕಗಳವರೆಗೆ, ಚೀನಾ ಸ್ಥಾಪಕ ನಾಯಕ ಮಾವೋ ಝೆಡಾಂಗ್‌ನ ಸರ್ವಾಧಿಕಾರಿ ಆಳ್ವಿಕೆ ಮತ್ತು ವ್ಯಕ್ತಿತ್ವದ ಆರಾಧನೆಯಿಂದ ದೇಶ ಮುಕ್ತವಾಯಿತು. ಅವರ ನಿರಂಕುಶಾಧಿಕಾರದ ನಾಯಕತ್ವದ ಪರವಾಗಿ ಏಕವ್ಯಕ್ತಿ ಆಡಳಿತವನ್ನು ತ್ಯಜಿಸಲಾಯಿತು ಎಂದು ಅವರು ಹೇಳಿದ್ದಾರೆ.
ಕ್ಸಿ ಅವರ ಪೂರ್ವವರ್ತಿಗಳಾಗಿದ್ದ ಜಿಯಾಂಗ್ ಝೆಮಿನ್ ಮತ್ತು ಹು ಜಿಂಟಾವೊ ಅವರು 10 ವರ್ಷಗಳ ಅಧಿಕಾರದ ನಂತರ ತಮ್ಮ ಅಧಿಕಾರ ತ್ಯಜಿಸಿದರು. ಆ ವೇಳೆ ಹೇರಿದ್ದ ನಿಯಮಪುಸ್ತಕವನ್ನು ಕ್ಸಿ ತಮ್ಮ ಅಧಿಕಾರವಧಿಯಲ್ಲಿ ಹರಿದು ಹಾಕಿದರು. ಅಷ್ಟೇ ಅಲ್ಲದೇ 2018 ರಲ್ಲಿ ಅವಧಿಯ ಮಿತಿಗಳನ್ನು ರದ್ದುಗೊಳಿಸಿದರು. ಇದೀಗ ಕ್ಸಿ ಅವರಿಗೆ ಅಭೂತಪೂರ್ವ ಗೆಲುವಿನ ಮೂಲಕ ಮೂರನೇ ಅವಧಿಯ ಅಧಿಕಾರ ಆರಂಭಿಸಲಿದ್ದಾರೆ. ಈ ಮೂಲಕ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಬೆಳವಣಿಗೆ ಅವರು ಕಾರಣವಾಗಲಿದ್ದಾರೆ ಗೀಜಸ್ ತಿಳಿಸಿದ್ದಾರೆ.












Click it and Unblock the Notifications