• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

400ವರ್ಷ ಹಿಂದಿನ ಹಡಗಿನ ಅವಶೇಷ ಪತ್ತೆ: ಹೇಳುತ್ತೆ ಏನೇನೋ ಇತಿಹಾಸ

|

ಪೋರ್ಚುಗಲ್ ದೇಶದ ಪುರಾತತ್ವ ತಜ್ಞರು, ಸುಮಾರು ನಾಲ್ಕುನೂರು ವರ್ಷಗಳ ಹಿಂದಿನದ್ದು ಎಂದು ಅಂದಾಜಿಸಲಾಗಿರುವ ಹಡಗಿನ ಅವಶೇಷಗಳನ್ನು ಲಿಸ್ಬನ್ ಕರಾವಳಿಯ ಸಮೀಪ ಪತ್ತೆಹಚ್ಚಿದ್ದಾರೆ ಎಂದು ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಮುಳುಗು ತಜ್ಞರ ವಿಶೇಷ ತಂಡ ಹಲವು ದಿನಗಳ ಶೋಧದ ನಂತರ, ಮೆಣಸುಗಳು, ಚೀನೀ ಪಿಂಗಾಣಿ ಮತ್ತು ಕಂಚಿನ ಫಿರಂಗಿಗಳ ತುಣುಕುಗಳನ್ನು ಪತ್ತೆಹಚ್ಚಿದ್ದಾರೆ. ಈ ಹಡಗು ಹಿಂದೆ ಭಾರತ ಮತ್ತು ಯುರೋಪ್ ನಡುವೆ ಮಸಾಲೆ ಪದಾರ್ಥಗಳನ್ನು ಸಾಗಿಸುತ್ತಿತ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸಮುದ್ರದಾಳದಲ್ಲಿ ಪತ್ತೆಯಾದ 400 ವರ್ಷದ ಹಡಗಲ್ಲಿ ಭಾರತದ ಸಾಂಬಾರ ಪದಾರ್ಥ!

ಲಿಸ್ಬನ್ ನಗರದ ಪಶ್ಚಿಮಕ್ಕೆ ಸುಮಾರು ಹದಿನೈದು ನಾಟಿಕಲ್ ಮೈಲ್ ದೂರದಲ್ಲಿರುವ ಕ್ಯಾಸ್ಕೈಸ್ ಮೀನುಗಾರಿಕೆ ಬಂದರಿನ (ಉತ್ತರ ಅಟ್ಲಾಂಟಿಕ್ ಮಹಾಸಾಗರದ ಭಾಗ) ಸುತ್ತಮುತ್ತಲಿನ ಆಳಸಮುದ್ರದ ಪ್ರದೇಶದಲ್ಲಿ ಹಡಗಿನ ಅವಶೇಷಗಳು ಪತ್ತೆಯಾಗಿವೆ. ಸೆಪ್ಟಂಬರ್ ಮೊದಲ ವಾರದಿಂದ ನಡೆದ ತೀವ್ರ ಶೋಧದಿಂದ ಇದನ್ನು ಪತ್ತೆಹಚ್ಚಲಾಗಿದೆ. ಇದೊಂದು ಶತಮಾನದ 'ಮಹಾನ್ ಶೋಧ' ಎಂದು ತಜ್ಞರ ತಂಡದ ಮುಖ್ಯಸ್ಥರು ಹೇಳಿದ್ದಾರೆ.

ಹಡಗಿನ ಅವಶೇಷಗಳು ಹನ್ನೆರಡು ಮೀಟರ್ ಆಳದಲ್ಲಿ ಪತ್ತೆಯಾಗಿದ್ದು, ಸುಮಾರು ನೂರು ಮೀಟರ್ ಉದ್ದ ಮತ್ತು ಐವತ್ತು ಮೀಟರ್ ಅಗಲವನ್ನು ಹೊಂದಿದೆ. ಹಡಗಿನ ಅವಶೇಷಗಳನ್ನು ನೋಡಿದರೆ, ಇದು ಪೋರ್ಚುಗೀಸರ ವ್ಯಾಪಾರದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ ಎಂದು ತಜ್ಞರ ತಂಡದ ನಿರ್ದೇಶಕ ಜಾರ್ಜ್ ಫ್ರೀರ್ ಹೇಳಿದ್ದಾರೆ.

ನಾಪತ್ತೆಯಾಗಿ 9 ವರ್ಷದ ಬಳಿಕ ಪ್ರತ್ಯಕ್ಷವಾಯ್ತು 'ದೆವ್ವದ ಹಡಗು'!

ಹಡಗಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ, ಇದು 16ನೇ ಶತಮಾನದ ಅಂತ್ಯ ಅಥವಾ 17ನೇ ಶತಮಾನದ ಆದಿಯ ಪೋರ್ಚುಗೀಸ್ ಹಡಗು ಆಗಿರಬಹುದು. ಹಡಗು ಫಿರಂಗಿ ದಾಳಿಯಲ್ಲಿ ಹಾನಿಯಾಗಿರುವ ಬಗ್ಗೆ ಹಲವು ಕುರುಹುಗಳು ದೊರೆತಿವೆ ಎಂದು ಜಾರ್ಜ್ ಫ್ರೀರ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ವ್ಯಾಪಾರಕ್ಕಾಗಿ ಬಳಸಲಾಗುತ್ತಿದ್ದ ನಾಣ್ಯ ಪತ್ತೆ

ವ್ಯಾಪಾರಕ್ಕಾಗಿ ಬಳಸಲಾಗುತ್ತಿದ್ದ ನಾಣ್ಯ ಪತ್ತೆ

ಶೋಧನೆಯ ವೇಳೆ 1573-1619ರ ಅವಧಿಯಲ್ಲಿ ವ್ಯಾಪಾರಕ್ಕಾಗಿ ಬಳಸಲಾಗುತ್ತಿದ್ದ ನಾಣ್ಯಗಳೂ ದೊರೆತಿದೆ. ಸ್ಥಳೀಯರಿಗೆ ನಮ್ಮ ಶೋಧದ ಬಗ್ಗೆ ವಿವರಣೆಯನ್ನು ನೀಡುತ್ತಿದ್ದೇವೆ. ಈ ಹಡಗಿನ ಅವಶೇಷಗಳನ್ನು ಅವಲೋಕಿಸಿದರೆ, ಇದರ ಹಿಂದೆ ಏನೇನೋ ಇತಿಹಾಸಗಳು ಇರುವ ಸಾಧ್ಯತೆಯಿದೆ ಎಂದು ತಜ್ಞರ ತಂಡ ಹೇಳಿಕೆಯನ್ನು ನೀಡಿದೆ. (ಸಾಂದರ್ಭಿಕ ಚಿತ್ರ)

ಚೀನೀ ಪಿಂಗಾಣಿ ಮತ್ತು ಕಂಚಿನ ಫಿರಂಗಿಗಳ ತುಣುಕು

ಚೀನೀ ಪಿಂಗಾಣಿ ಮತ್ತು ಕಂಚಿನ ಫಿರಂಗಿಗಳ ತುಣುಕು

ಶೋಧನೆಯ ವೇಳೆ ಸಿಕ್ಕಂತಹ ಅವಶೇಷಗಳು, ಚೀನೀ ಪಿಂಗಾಣಿ ಮತ್ತು ಕಂಚಿನ ಫಿರಂಗಿಗಳ ತುಣುಕುಗಳನ್ನು ಪೋರ್ಚುಗೀಸ್ ಸರಕಾರಕ್ಕೆ ನೀಡಲಾಗಿದ್ದು, ಇದನ್ನೆಲ್ಲಾ ಪಾರಂಪರಿಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಬೇಕೇ ಅಥವಾ ಬೇಡವೇ ಎನ್ನುವುದನ್ನು ಸರಕಾರ ನಿರ್ಧರಿಸುತ್ತದೆ. (ಸಾಂದರ್ಭಿಕ ಚಿತ್ರ)

ತಜ್ಞರ ಸಂಶೋಧನೆಯ ಬಗ್ಗೆ ಶ್ಲಾಘನೆ

ತಜ್ಞರ ಸಂಶೋಧನೆಯ ಬಗ್ಗೆ ಶ್ಲಾಘನೆ

ಕ್ಯಾಸ್ಕೈಸ್ ನಗರದ ಮೇಯರ್, ತಜ್ಞರ ಸಂಶೋಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಾ, ಇತ್ತೀಚಿನ ದಶಕಗಳಲ್ಲಿ, ಪುರಾತತ್ವ ಇಲಾಖೆ ನಡೆಸಿದ ಅತ್ಯುತ್ತಮ ಸಂಶೋಧನೆಗಳಲ್ಲಿ ಇದೂ ಒಂದು. ಹಡಗಿನ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಸಾಧ್ಯವಾಗದೇ ಇದ್ದರೂ, ಇದು ಪೋರ್ಚುಗೀಸರು, ಯುರೋಪ್ ಮತ್ತು ಭಾರತದ ನಡುವೆ ವ್ಯಾಪಾರಕ್ಕಾಗಿ ಬಳಸಲಾಗುತ್ತಿದ್ದ ಹಡಗು ಎಂದು ಸಾಬೀತಾಗಿದೆ ಎಂದು ಮೇಯರ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

ಏಷ್ಯಾ ಮತ್ತು ಯುರೋಪ್ ಖಂಡಗಳ ನಡುವೆ ವ್ಯಾಪಾರ

ಏಷ್ಯಾ ಮತ್ತು ಯುರೋಪ್ ಖಂಡಗಳ ನಡುವೆ ವ್ಯಾಪಾರ

ಈ ಶೋಧನೆಗಳನ್ನು ಇಟ್ಟುಕೊಂಡು, ಇನ್ನಷ್ಟು ಮಾಹಿತಿ ಕಲೆಹಾಕಲು ಯತ್ನಿಸಿದರೆ, ಏಷ್ಯಾ ಮತ್ತು ಯುರೋಪ್ ಖಂಡಗಳ ನಡುವೆ ಯಾವಯಾವ ವಸ್ತುಗಳು ಆಮದು,ರಫ್ತುಗಳಾಗುತ್ತಿದ್ದವು ಮತ್ತು ಇದನ್ನು ಸಾಗಿಸಲು ಯಾವ ಯಾವ ಸಮುದ್ರ ಮತ್ತು ಬಂದರುಗಳನ್ನು ಬಳಸಲಾಗುತ್ತಿತ್ತು ಎನ್ನುವ ಕುತೂಹಲಕಾರಿ ಅಂಶವನ್ನು ಕಂಡು ಹಿಡಿಯಬಹುದು ಎಂದು ತಜ್ಞರ ತಂಡದ ನಿರ್ದೇಶಕ ಜಾರ್ಜ್ ಫ್ರೀರ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

ದೆವ್ವದ ಹಡಗು ಎಂದು ನಾಮಕರಣ

ದೆವ್ವದ ಹಡಗು ಎಂದು ನಾಮಕರಣ

ಒಂಬತ್ತು ವರ್ಷಗಳ ಹಿಂದೆ ಪೆಸಿಫಿಕ್ ಮಹಾಸಾಗರದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಹಡಗೊಂದು ಸೆಪ್ಟಂಬರ್ ಮೊದಲ ವಾರ ಹಿಂದೂ ಮಹಾಸಾಗರದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿತ್ತು. ಎಲ್ಲೋ ಮಾಯವಾಗಿದ್ದ ಹಡಗು ಇನ್ನೆಲ್ಲೋ ಪತ್ತೆಯಾಗಿರುವುದು ಕಂಡು ಮ್ಯಾನ್ಮಾರ್‌ನ ಜನರು ಆತಂಕ ವ್ಯಕ್ತಪಡಿಸಿದ್ದರು. ಕಡಲಿನ ಆಳದಿಂದ ಎದ್ದು ಬಂದಿರುವ ಹಡಗಿಗೆ 'ದೆವ್ವದ ಹಡಗು ಎಂದು ನಾಮಕರಣ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಲಬಹುದಾಗಿದೆ. (Image: Yangon Police)

English summary
Archaeologists in Portugal have discovered peppercorns, fragments of Chinese porcelain and bronze cannon among the sunken remains of a 400-year-old ship that once sailed the spice route between Europe and India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X