ಬಡತನವೇ ಇಲ್ಲದ ಕುಬೇರ ದೇಶಗಳು: ಭೂಮಿಯ ಮೇಲಿನ ಸ್ವರ್ಗದಂತಿರುವ ಈ ಮೂರು ಪುಟ್ಟ ರಾಷ್ಟ್ರಗಳ ರೋಚಕ ಕಥೆ

ಭೂಮಿಯ ಮೇಲೆ ಯಾವುದಾದರೂ ಒಂದು ಕಡೆ ಈ ಬಡತನ, ಹಸಿವು, ನಿರುದ್ಯೋಗ ಇಲ್ಲದ ದೇಶ ಇರಲು ಸಾಧ್ಯವಿದೆಯೇ? ಇದಕ್ಕೆ ಹೆಚ್ಚಿನವರ ಉತ್ತರ ಇಲ್ಲ ಎನ್ನುವುದೇ ಆಗಿರುತ್ತದೆ. ಇನ್ನು ಕೆಲವರಿಗೆ ಇದು ಅಸಾಧ್ಯದ ಮಾತಾಗಿ ಕಾಣುತ್ತದೆ. ಆದರೆ, ಈ ಭೂಮಿಯ ಮೇಲೆ ಕೆಲವು ದೇಶಗಳು ತಮ್ಮ ಅದ್ಭುತ ಆರ್ಥಿಕ ನೀತಿಗಳಿಂದ ಹಾಗೂ ಜನರಿಗಾಗಿ ಮಾಡಿರುವ ಕೆಲವು ಕಲ್ಯಾಣ ಯೋಜನೆಗಳ ಮೂಲಕ ಬಡತನ ಎಂಬ ಪದಕ್ಕೇ ಮುಕ್ತಿ ನೀಡಿವೆ ನೋಡಿ.

ಹೌದು, ಭೌಗೋಳಿಕವಾಗಿ ನೋಡುವುದಾದ್ರೆ ಭಾರತದ ಒಂದು ಸಣ್ಣ ಜಿಲ್ಲೆಗಿಂತಲೂ ಚಿಕ್ಕದಾಗಿರುವ ಈ ಪುಟ್ಟ ರಾಷ್ಟ್ರಗಳು, ಸಂಪತ್ತಿನ ವಿಷಯದಲ್ಲಿ ಮಾತ್ರ ಪ್ರಪಂಚದ ಅಗ್ರಸ್ಥಾನದಲ್ಲಿವೆ.ಹಾಗೆಯೇ ಆದೇಶದ ಜನರಿಗೆ ರಾಜಭೋಗದ ಜೀವನವನ್ನು ನೀಡುತ್ತಿವೆ. ಅಂತಹ ಸ್ವರ್ಗದಂತಿರುವ ಮೂರು ದೇಶಗಳಿಗೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Richest Countries

ಮೊನಾಕೊ: ಪ್ರತಿ ಮೂವರಲ್ಲಿ ಒಬ್ಬರು ಕೋಟ್ಯಾಧಿಪತಿ

ಪ್ರಪಂಚದ ಎರಡನೇ ಅತಿ ಚಿಕ್ಕ ದೇಶವಾದ ಮೊನಾಕೊ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಇವರಲ್ಲಿರುವ ಸಂಪತ್ತು ಮಾತ್ರ ಯಾವ ದೇಶಕ್ಕೂ ಸರಿಸಮಾನವಿಲ್ಲ. ಫ್ರಾನ್ಸ್ ಕರಾವಳಿಗೆ ಅಂಟಿಕೊಂಡಿರುವ ಈ ದೇಶದ ಒಟ್ಟು ಜನಸಂಖ್ಯೆ ಸುಮಾರು 39,000 ಮಾತ್ರ. ಇಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಇಲ್ಲಿ ವಾಸಿಸುವ ಪ್ರತಿ ಮೂವರಲ್ಲಿ ಒಬ್ಬರು ಮಿಲಿಯನೇರ್ ಅಥವಾ ಬಿಲಿಯನೇರ್ ಆಗಿರುತ್ತಾರೆ. ಮತ್ತೆ, ಇಲ್ಲಿ ವೈಯಕ್ತಿಕ ಆದಾಯ ತೆರಿಗೆ ಅಂದರೆ ಇನ್‌ಕಮ್‌ ಟ್ಯಾಕ್ಸ್‌ ಇಲ್ಲದಿರುವುದರಿಂದ ವಿಶ್ವದ ಖ್ಯಾತ ಕ್ರೀಡಾಪಟುಗಳು, ಹಾಲಿವುಡ್ ನಟರು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳು ಇಲ್ಲೇ ನೆಲೆಸಲು ಬಯಸುತ್ತಾರೆ.

ಇಲ್ಲಿ ಬಡತನ ಇಲ್ಲದಿರಲು ಮುಖ್ಯ ಕಾರಣ, ಸರ್ಕಾರವು ಜನರಿಗೆ ನೀಡುವ ಉನ್ನತ ಮಟ್ಟದ ಭದ್ರತೆ ಮತ್ತು ಉಚಿತ ಸೇವೆಗಳು. ಇಲ್ಲಿನ ರಸ್ತೆಗಳಲ್ಲಿ ಸಾಮಾನ್ಯ ಕಾರುಗಳು ಕಾಣಸಿಗುವುದೇ ತುಂಬ ಅಪರೂಪ. ಎಲ್ಲಿ ನೋಡಿದರೂ ಫೆರಾರಿ, ಲಂಬೋರ್ಗಿನಿಯಂತಹ ಐಷಾರಾಮಿ ಕಾರುಗಳೇ ತುಂಬಿ ತುಳುಕುತ್ತಿರುತ್ತವೆ. ಪ್ರವಾಸೋದ್ಯಮ, ಐಷಾರಾಮಿ ಕ್ಯಾಸಿನೊಗಳು ಹಾಗೂ ತೆರಿಗೆ ವಿನಾಯಿತಿಯಿಂದ ಬರುವ ಆದಾಯದ ಮೂಲಕ ಈ ಪುಟ್ಟ ದೇಶವು ತನ್ನ ಎಲ್ಲಾ ಜನರಿಗೆ ಒಳ್ಳೆಯ ಗುಣಮಟ್ಟದ ಜೀವನವನ್ನು ನೀಡುತ್ತಿದೆ.

ಲಕ್ಸೆಂಬರ್ಗ್: ಪ್ರಪಂಚದಲ್ಲೇ ಅತಿ ಹೆಚ್ಚು ವೇತನ ನೀಡುವ ದೇಶ

ಯುರೋಪ್ ಖಂಡದ ಮಧ್ಯಭಾಗದಲ್ಲಿರುವ ಲಕ್ಸೆಂಬರ್ಗ್, ಗಾತ್ರದಲ್ಲಿ ನಮ್ಮ ಗೋವಾ ರಾಜ್ಯಕ್ಕಿಂತಲೂ ಚಿಕ್ಕದು. ಆದರೆ ತಲಾ ಆದಾಯದ ವಿಷಯದಲ್ಲಿ ಇದು ಪ್ರಪಂಚದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಹೌದು, ಇಲ್ಲಿನ ಬ್ಯಾಂಕಿಂಗ್ ಹಾಗೂ ಆರ್ಥಿಕ ವ್ಯವಸ್ಥೆಯು ದೇಶವನ್ನು ಸಂಪತ್ತಿನಲ್ಲಿಯೇ ಮುಳುಗಿಸಿಬಿಟ್ಟಿದೆ. ಸರ್ಕಾರದ ನಿಯಮಗಳ ಪ್ರಕಾರ, ಇಲ್ಲಿ ಕೆಲಸ ಮಾಡುವ ಸಾಮಾನ್ಯ ಕಾರ್ಮಿಕನ ಕನಿಷ್ಠ ಮಾಸಿಕ ವೇತನವೇ ಸುಮಾರು 2,500 ಯುರೋಗಳಿಗಿಂತ ಹೆಚ್ಚಿರುತ್ತದೆ . ಅಂದರೆ ಭಾರತೀಯ ರೂಪಾಯಿಗಳಲ್ಲಿ ನೋಡುವುದಾದರೆ ಪ್ರತಿ ತಿಂಗಳಿಗೆ ರೂ. 2.2 ಲಕ್ಷಕ್ಕೂ ಹೆಚ್ಚು.

ಜನರ ಕಲ್ಯಾಣದ ವಿಷಯಕ್ಕೆ ಬಂದರೆ ಲಕ್ಸೆಂಬರ್ಗ್ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈ ದೇಶದಲ್ಲಿ ಎಲ್ಲರಿಗೂ ಬಸ್, ರೈಲು ಸೇರಿದಂತೆ ಸಾರ್ವಜನಿಕ ರಸ್ತೆ ಸಾರಿಗೆಯನ್ನ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿರುವ ಪ್ರಪಂಚದ ಏಕೈಕ ದೇಶ ಇದು. ಹಾಗೆಯೇ ಸರ್ಕಾರ ಒದಗಿಸುವ ಸಾಮಾಜಿಕ ಭದ್ರತೆ, ಗುಣಮಟ್ಟದ ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳಿಂದಾಗಿ ಇಲ್ಲಿ ಯಾರೊಬ್ಬರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೇ ಎದುರಾಗಲ್ಲ.

ಲಿಚ್ಟೆನ್‌ಸ್ಟೈನ್: ಆಲ್ಪ್ಸ್ ಪರ್ವತಗಳ ನಡುವಿನ ಶ್ರೀಮಂತ ಸಾಮ್ರಾಜ್ಯ

ಸ್ವಿಟ್ಜರ್‌ಲ್ಯಾಂಡ್‌ ಮತ್ತು ಆಸ್ಟ್ರಿಯಾ ಗಡಿಗಳಲ್ಲಿ, ಹಿಮದಿಂದ ಆವೃತವಾದ ಆಲ್ಪ್ಸ್ ಪರ್ವತಗಳ ನಡುವೆ ಅಡಗಿರುವ ಸುಂದರವಾದ ಪುಟ್ಟ ದೇಶವೇ ಲಿಚ್ಟೆನ್‌ಸ್ಟೈನ್ (Liechtenstein). ಕೇವಲ 40 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ನಿರುದ್ಯೋಗ ದರ ಶೇಕಡಾ 1ಕ್ಕಿಂತಲೂ ಕಡಿಮೆ. ಅಂದರೆ ಈ ದೇಶದಲ್ಲಿ ಕೆಲಸ ಮಾಡುವ ಸಾಮರ್ಥ್ಯವಿದ್ದು ಉದ್ಯೋಗ ಇಲ್ಲದವರು ಇಲ್ಲಿ ಬಹುತೇಕ ಯಾರೂ ಇಲ್ಲ ಎನ್ನಬಹುದು. ಪುಟ್ಟ ದೇಶವಾಗಿದ್ದರೂ, ಪ್ರಪಂಚಕ್ಕೆ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಕೈಗಾರಿಕಾ ಉತ್ಪನ್ನಗಳನ್ನ ರಫ್ತು ಮಾಡುವ ಮೂಲಕ ಅಪಾರ ವಿದೇಶಿ ವಿನಿಮಯವನ್ನ ಗಳಿಸುತ್ತಿದೆ.

ಇದರೊಂದಿಗೆ, ವಿದೇಶಿ ಹೂಡಿಕೆದಾರರನ್ನ ಆಕರ್ಷಿಸುವ ಸರಳ ತೆರಿಗೆ ನೀತಿಗಳು ಈ ದೇಶವನ್ನ ಶ್ರೀಮಂತ ರಾಷ್ಟ್ರವನ್ನಾಗಿ ಬದಲಾಯಿಸಿದೆ. ಸರ್ಕಾರವು ಗಳಿಸುವ ಆದಾಯವನ್ನು ಮರಳಿ ಜನರ ಅಭಿವೃದ್ಧಿಗೇ ಬಳಸುತ್ತದೆ. ಉಚಿತ ಉನ್ನತ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳ ಜೊತೆಗೆ ಪ್ರತಿ ಪೌರನಿಗೂ ಉತ್ತಮ ಜೀವನ ಸಿಗುವಂತೆ ಸರ್ಕಾರ ಯೋಜನೆಗಳನ್ನ ಜಾರಿಗೊಳಿಸುತ್ತದೆ.

ದೇಶದ ಜನಸಂಖ್ಯೆ ಅಥವಾ ಗಾತ್ರ ಮುಖ್ಯವಲ್ಲ, ಉತ್ತಮ ಆಡಳಿತ ನೀತಿಗಳಿದ್ದರೆ ಬಡತನ, ಹಸಿವು, ನಿರುದ್ಯೋಗವನ್ನ ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂಬುದನ್ನ ಈ ಮೂರು ದೇಶಗಳು ಇಡೀ ಪ್ರಪಂಚಕ್ಕೆ ಸಾಬೀತುಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+