ಕೆನಡಾ ದೇಶದಲ್ಲಿ ಪ್ರತಿ ಸಿಗರೇಟ್ ಮೇಲೆ ಆರೋಗ್ಯ ಹಾನಿ ಎಚ್ಚರಿಕೆ ಸಂದೇಶ

ಬೆಂಗಳೂರು, ಮೇ 01: ವಿಶ್ವಮಟ್ಟದಲ್ಲಿ ತಂಬಾಕು ನಿಯಂತ್ರಣ ವಿಚಾರದಲ್ಲಿ ಕೆನಡಾ ರಾಷ್ಟ್ರ ಮುಂದಿದೆ. 2035 ರ ವೇಳೆಗೆ ರಾಷ್ಟ್ರ ವ್ಯಾಪಿ ತಂಬಾಕು ಸೇವನೆ ಶೇಕಡಾ 5ರಷ್ಟು ತಗ್ಗಿಸಬೇಕು ಎಂಬ ಗುರಿಗೆ ಪೂರಕವಾಗಿ ಕೆನಡಾ ಪ್ರತಿ ಸಿಗರೇಟಿನ ಮೇಲೆ ಅರೋಗ್ಯ ಹಾನಿ ಎಚ್ಚರಿಕೆ ಮುದ್ರಿಸಿದ ದೇಶಗಳ ಪೈಕಿ ಮೊದಲಿದೆ.

ಪ್ರತಿ ವರ್ಷ ಮೇ 31 ಅನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಯುವ ಸಮುದಾಯವೇ ಸಿಗರೇಟಿನ ವ್ಯಸನಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ. ಈ ಸಂಬಂಧ ಸಿಗರೇಟಿನ ಮೇಲೆ ನೇರವಾಗಿ ಆರೋಗ್ಯ ಹಾನಿ ಜಾಗೃತಿ ಮೂಡಿಸುವ ಸಾಲುಗಳನ್ನು ಕೆನಡಾ ದೇಶವೇ ಮೊದಲ ಬಾರಿಗೆ ಮುದ್ರಿಸಿದೆ. ಈ ಕುರಿತು ಬುಧವಾರ ಆದೇಶಿಸಿದೆ ಎಂದು ತಿಳಿದು ಬಂದಿದೆ.

World No Tobacco Day

ಹೊಸ ತಂಬಾಕು ಉತ್ಪನ್ನಗಳ ಪ್ಯಾಕೇಟ್‌ ಮತ್ತು ಲೇಬಲಿಂಗ್ ನಿಯಮಗಳು ಕೆನಡಾ ಸರ್ಕಾರದ ಪಾಲಿಸುತ್ತಿದೆ. ಅದರ ಭಾಗಾವಾವೇ ಯುವಕರನ್ನು ಮತ್ತು ತಂಬಾಕು ಅಲ್ಲದ ಬಳಕೆದಾರರನ್ನು ನಿಕೋಟಿನ್ ವ್ಯಸನದಿಂದ ದೂರವಿಡಲು ಇಲ್ಲವೇ ರಕ್ಷಣೆ ಮಾಡಲು ನಿರ್ಧರಿಸಿದೆ. ಯುವಕರಿಗೆ ತಂಬಾಕು ಆಕರ್ಷಣೆ ಆಗದಂತೆ ತಡೆಯಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಕೆನಡಾದ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಂಬಾಕು ವ್ಯಸನ, ತಡೆ ಕ್ರಮ ಬಗ್ಗೆ ವೈದ್ಯರು ತಜ್ಞರು ಹೇಳಿದ್ದೇನು?

ಕೆನಡಾ ಆರೋಗ್ಯ ಅಧಿಕಾರಿಗಳ ಹೇಳುವಂತೆ, ಪ್ರತಿ ಸಿಗರೇಟ್ ಮೇಲೆ ಆರೋಗ್ಯ ಹಾನಿಕಾರ ಇನ್ನಿತರ ಎಚ್ಚರಿಕೆ ಲೇಬಲ್‌ಗಳು ಮುದ್ರಣದಿಂದ ಧೂಮಪಾನಿಗಳಿಗೆ ಎಚ್ಚರಿಕೆ ಸಂದೇಶಗಳಿಂದ ತಪ್ಪಿಸಿಕೊಳ್ಳದಂತೆ ಮಾಡುತ್ತದೆ ಎಂದಿದ್ದಾರೆ. ಇನ್ನು ಕೆನಡಿಯನ್ ಕ್ಯಾನ್ಸರ್‌ ಸೋಸೈಟಿಯ ಹಿರಿಯ ನೀತಿ ವಿಶ್ಲೇಶಕರಾದ ರಾಬ್ ಕನ್ನಿಂಗ್ ಹ್ಯಾಮ್ ಅವರ ಪ್ರಕಾರ, ಹೊಸ ನಿಯಮವು ಧೂಮಪಾನ ಮಾಡುವ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುತ್ತದೆ. ಇದರಿಂದ ವ್ಯಸನಕ್ಕೆ ಈಡಾಗುವವರನ್ನು ತಡೆಯಲು, ತಂಬಾಕು ಸೇವನೆ ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

World No Tobacco Day

ವಿಶ್ವದಲ್ಲಿ ತಂಬಾಕು ಉತ್ಪನ್ನಗಳ ಪ್ಯಾಕೇಟ್‌ಗಳಲ್ಲಿ ಆರೋಗ್ಯ ಸಂದೇಶವನ್ನು ಹೆಚ್ಚಿಸಬೇಕಿದೆ. ಪ್ರತಿ ದೇಶದಲ್ಲಿ ಧೂಮಪಾನಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿ ಆಯಾ ದೇಶದ ಆರೋಗ್ಯ ಸಚಿವಾಯಗಳು ಹೊಂದಿವೆ. ಸದ್ಯ ನಮ್ಮ ಕೆನಡಾ ದೇಶ ಸಿಗರೇಟ್‌ ಮೇಲೆ ಮುದ್ರಿಸಿರುವ ಜಾಗೃತಿ ಸಂದೇಶ/ಎಚ್ಚರಿಕೆ ತಂಬಾಕು ಸೇವನೆ ತಡೆ ಹೆಚ್ಚುವರಿ ಕ್ರಮಗಳಿಗೆ ಪೂರಕವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ವಿವರಿಸಿದರು.

ನೆನ್ನೆಯಷ್ಟೇ ವಿಶ್ವ ತಂಬಾಕು ನಿಷೇಧ ದಿನ ಆಚರಣೆಯಾಗಿದೆ. ಭಾರತದ ವಿವಿಧ ಆರೋಗ್ಯ ಇಲಾಖೆಗಳಲ್ಲೂ ವ್ಯಸನ ತಡೆ ಕ್ರಮ ಪರಿಣಾಮಕಾರಿ ಜಾರಿಗೆ ಸೂಚಿಸಿವೆ. ಇಲ್ಲಿ ಶಾಲಾ-ಕಾಲೇಜು, ಆಸ್ಪತ್ರೆಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ನಿಷೇಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ ನಿಷೇಧ ಸೇರಿದಂತೆ ಹಲವು ಕ್ರಮ ಜಾರಿಯಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+