ಬೈಡನ್‌, ಕಮಲಾಗೆ ವಿಶ್ವದೆಲ್ಲೆಡೆಯಿಂದ ಶುಭಹಾರೈಕೆಗಳ ಮಹಾಪೂರ

ಅಮೆರಿಕದ 46ನೇ ಅಧ್ಯಕ್ಷರಾಗಲು ಅರ್ಹತೆ ಪಡೆದುಕೊಂಡಿರುವ ಡೆಮಾಕ್ರಾಟಿಕ್ ಪಕ್ಷದ ಜೋಸೆಫ್ ಬೈಡನ್ ಹಾಗೂ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರೀಸ್ ಅವರತ್ತ ಶುಭಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ, ಐರ್ಲೆಂಡ್ ಪ್ರಧಾನಿ ಮೈಕಲ್ ಸೇರಿದಂತೆ ವಿಶ್ವದೆಲ್ಲೆಡೆಯಿಂದ ಅನೇಕ ಮುಖಂಡರು ಶುಭ ಹಾರೈಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.

ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಮುಗಿಯಲಿದೆ. ಬಳಿಕ ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ತಿಂಗಳ ಅಂತ್ಯಕ್ಕೆ 78ನೇ ವರ್ಷಕ್ಕೆ ಕಾಲಿಡಲಿರುವ ಬೈಡನ್, ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ. ಪೆನ್ಸಿಲ್ವೇಲಿಯಾದ ಫಲಿತಾಂಶ ಹೊರಬಂದಿದ್ದು, ಅಧ್ಯಕ್ಷರಾಗಲು ಅಗತ್ಯವಿದ್ದ ಎಲೆಕ್ಟೊರಲ್ ಮತಗಳ ಗಡಿ ದಾಟುವಲ್ಲಿ ಬೈಡೆನ್ ಅವರಿಗೆ ನೆರವಾಗಿದೆ. ಪೆನ್ಸಿಲ್ವೇನಿಯಾದ 20 ಮತಗಳೊಂದಿಗೆ ಬೈಡೆನ್ 273 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದಾರೆ.

ಭಾರತದ ಪ್ರಧಾನಿ ಮೋದಿ ಶುಭಹಾರೈಕೆ

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರೇ ಉಪಾಧ್ಯಕ್ಷರಾಗಿ ನೀವು ಭಾರತ ಹಾಗೂ ಅಮೆರಿಕದ ಬಾಂಧವ್ಯ ವೃದ್ಧಿಗೆ ಶ್ರಮಿಸಿದ್ದನ್ನು ಹತ್ತಿರದಿಂದ ನೊಡಿದ್ದೇನೆ. ನಿಮ್ಮ ಅಭೂತಪೂರ್ವ ಜಯಕ್ಕೆ ನನ್ನ ಅಭಿನಂದನೆಗಳು. ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನ ಮುಂದುವರೆಯಲಿ ಎಂದು ಮೋದಿ ಶುಭ ಹಾರೈಸಿದ್ದಾರೆ

ರಾಹುಲ್ ಗಾಂಧಿ ಅವರಿಂದ ಶುಭಹಾರೈಕೆ

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರಿಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಭ ಹಾರೈಸಿದ್ದಾರೆ. ಅಮೆರಿಕದ ಐಕ್ಯತೆಯನ್ನು ಕಾಪಾಡಿಕೊಂಡು ಉತ್ತಮ ಮಾರ್ಗದಲ್ಲಿ ದೇಶವನ್ನು ಮುನ್ನಡೆಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ರಾಹುಲ್ ಟ್ವೀಟ್ ನಲ್ಲಿ ಹೇಳಿದ್ದಾರೆ.

ಮೈಕಲ್ ಮಾರ್ಟಿನ್- ಐರ್ಲೆಂಡ್

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೈಡನ್‌ಗೆ ಐರ್ಲೆಂಡ್ ಪ್ರಧಾನಿ ಮೈಕಲ್ ಮಾರ್ಟಿನ್ ಶುಭ ಹಾರೈಸಿ, ಬೈಡನ್ ಅವರು ನಮ್ಮ ದೇಶದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರ ಜೊತೆ ಇನ್ನಷ್ಟು ವರ್ಷಗಳ ಕಾಲ ಬಾಂಧವ್ಯ ವೃದ್ಧಿಯಾಗಲಿ. ಸಮಯ, ಸಂದರ್ಭ ಬಂದಾಗ ಅವರನ್ನು ಮನೆಗೆ (ಬೈಡನ್ ಅವರ ತಾಯಿ ಐರೀಷ್) ಆಹ್ವಾನಿಸಲಾಗುವುದು ಎಂದಿದ್ದಾರೆ.

ಕೆನಡಾ ಪ್ರಧಾನಿ ಜಸ್ಟೀನ್ ರಿಂದ ಶುಭಹಾರೈಕೆ

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೈಡನ್‌ಗೆ ಐರ್ಲೆಂಡ್ ಪ್ರಧಾನಿ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಶುಭಹಾರೈಸಿದ್ದಾರೆ.

ಜೋ ಹಾಗೂ ಕಮಲಾ ಅವರಿಗೆ ಅಭಿನಂದನೆಗಳು, ನಮ್ಮ ಎರಡು ದೇಶಗಳು ಆಪ್ತ ಗೆಳೆತನ ಹೊಂದಿದ್ದು ನಮ್ಮ ಮೈತ್ರಿ ಹೀಗೆ ಮುಂದುವರೆಯಲಿದೆ. ಜಾಗತಿಕವಾಗಿ ನಮ್ಮ ಬಾಂಧವ್ಯ ವಿಶಿಷ್ಟವಾಗಿದೆ. ನಮ್ಮ ಅನುಬಂಧ ಇನ್ನಷ್ಟು ವೃದ್ಧಿಯಾಗಲಿ, ಬಾಂಧವ್ಯ ವೃದ್ಧಿಗಾಗಿ ನಿಮ್ಮೊಂದಿಗೆ ಕಾರ್ಯ ನಿರ್ವಹಿಸಲು ಕಾದಿದ್ದೇನೆ ಎಂದಿದ್ದಾರೆ.

ಬೆಲ್ಜಿಯಂ ಪ್ರಧಾನಿ

ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕೆ ಜೋ ಬೈಡನ್ ಅವರಿಗೆ ಶುಭ ಹಾರೈಕೆ, ಈ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಜನರು ಮತ ಹಾಕಿದ್ದಾರೆ. ಅಮೆರಿಕದ ರಾಜಕೀಯ ಜೀವನ ಹಾಗೂ ಪ್ರಜಾಪ್ರಭುತ್ವದ ಶಕ್ತಿಯನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಅವರು ಇತಿಹಾಸ ನಿರ್ಮಿಸಿದ್ದಾರೆ. ಹಲವಾರು ಮಂದಿಗೆ ಮಾದರಿಯಾಗಿದ್ದಾರೆ. ಗಂಡು ಹಾಗೂ ಹೆಣ್ಣು ಸಮಾನ ಹಕ್ಕು ಹೊಂದಿದ್ದಾರೆ ಎಂದು ಸಾರಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಮಾಕ್ರೋನ್ ರಿಂದ ಶುಭಹಾರೈಕೆ

ಫ್ರಾನ್ಸ್ ಅಧ್ಯಕ್ಷ ಮಾಕ್ರೋನ್ ಅವರು ಜೋ ಬೈಡನ್ ಹಾಗೂ ಕಮಲಾ ಹ್ಯಾರೀಸ್ ಅವರಿಗೆ ಶುಭ ಹಾರೈಸಿ, ನಾವು ಇನ್ನೂ ಹೆಚ್ಚಿನದ್ದನ್ನು ಸಾಧಿಸಬೇಕಿದೆ. ಒಟ್ಟಿಗೆ ಕಾರ್ಯ ನಿರ್ವಹಿಸೋಣ ಎಂದಿದ್ದಾರೆ.

ಬೋರಿಸ್ ಜಾನ್ಸನ್

ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಜೋಬೈಡನ್ ಹಾಗೂ ಕಮಲಾ ಹ್ಯಾರೀಸ್ ಅವರಿಗೆ ಶುಭ ಸಂದೇಶ ಪ್ರಕಟಣೆಯನ್ನು ಹೊರಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+