• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರಿನಲ್ಲೇ ಮಲಗಿದ್ದ ವೃದ್ಧೆ ಎಚ್ಚರವಾಗುವಷ್ಟರಲ್ಲಿ ಕಾರೇ ಮಿಸ್ಸಿಂಗ್

|

ಹ್ಯಾಮಿಲ್ಟನ್​, ಆಗಸ್ಟ್ 30: ವೃದ್ಧೆಯೊಬ್ಬರು ಕೆಲಸದ ಮೇಲೆ ಎಲ್ಲಿಗೋ ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲಿ ತುಂಬಾ ದಣಿವಾದ ಕಾರಣ ಕಾರಿನಲ್ಲೇ ಮಲಗಿ ನಿದ್ದೆಗೆ ಜಾರಿದರು.

ಆದರೆ ಅವರಿಗೆ ಎಚ್ಚರವಾಗುವಷ್ಟರಲ್ಲಿ ಕಾರು ಇರಲಿಲ್ಲ, ಅವರು ರಸ್ತೆಯ ಪಕ್ಕದಲ್ಲೆಲ್ಲೋ ಇದ್ದರು. ಚಾಲಾಕಿ ಕಳ್ಳರು ಆಕೆಯನ್ನು ಕಾರಿನಿಂದ ಇಳಿಸಿ ಕಾರು ಕದ್ದು ಪರಾರಿಯಾಗಿದ್ದಾರೆ ಎನ್ನುವ ವಿಷಯ ತಿಳಿದು ಗಾಬರಿಗೊಂಡಿದ್ದರು.

ರಾತ್ರಿ 9ರ ಸುಮಾರಿಗೆ ಕಾರನ್ನು ಪಾರ್ಕಿಂಗ್ ಮಾಡಿ, ನಿದ್ದೆಗೆ ಜಾರಿದ್ದರು. ಬೆಳಗ್ಗೆ 4 ಗಂಟೆ ಸುಮಾರಿಗೆ ಎಚ್ಚರವಾದಾಗ ಕಾರು ಇರಲಿಲ್ಲ.

ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ವೃದ್ಧೆಯ ಮುಖದ ಮೇಲೆ ಹಲ್ಲೆ ಮಾಡಿದ ಗುರುತುಗಳು ಪತ್ತೆಯಾಗಿವೆ. ಆದರೆ, ರಾತ್ರಿ ಏನಾಯಿತು ಎಂಬುದು ಮಾತ್ರ ತಮಗೆ ಗೊತ್ತಾಗಿಲ್ಲ ಎಂದು ಅವರು ಹೇಳಿದ್ದಾರೆ.

ಕಾರು ಲಾಕ್ ಮಾಡಿದ್ದೇನೆ, ಕೀ ನನ್ನ ಬಳಿಯೇ ಇದೆ ಎಂದು ಖುಷಿ ಪಡಬೇಡಿ

ತಕ್ಷಣ ಕಾರು ಸಾಗಿರಬಹುದಾದ ಮಾರ್ಗದಲೆಲ್ಲ ಪೊಲೀಸರು ಪರಿಶೀಲಿಸಿದಾಗ ಟ್ರೆಂಟನ್​ ಎಂಬಲ್ಲಿ ಕಾರು ನಿಲುಗಡೆ ಮಾಡಿರುವ ಕಳ್ಳರು ಪರಾರಿಯಾಗಿದ್ದಾರೆ

English summary
carjacker apparently removed a sleeping 80-year-old woman from her parked car before stealing the vehicle and leaving her in the driveway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X