ಶ್ರೀಲಂಕಾ ಸ್ಫೋಟ: 9 ದಾಳಿಕೋರರಲ್ಲಿ ಮಹಿಳೆ ಇರುವ ಕುರಿತು ಮಾಹಿತಿ

ಕೊಲಂಬೋ, ಏ.24: ಶ್ರೀಲಂಕಾದ ಚರ್ಚ್‌ಗಳು ಮತ್ತು ಐಷಾರಾಮಿ ಹೋಟೆಲ್‌ಗಳ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು ಐಎಸ್‌ಐಎಸ್ ಉಗ್ರ ಸಂಘಟನೆ ಹಾಗೂ ಒಟ್ಟು 9 ಮಂದಿ ಉಗ್ರರ ಪೈಕಿ ಓರ್ವ ಮಹಿಳೆಯೂ ಇದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.

ಈಸ್ಟರ್ ದಿನದಂದು ಶ್ರೀಲಂಕಾದ ಕೊಲಂಬೋದಲ್ಲಿ ಒಟ್ಟು 8 ಕಡೆ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದ್ದು 359ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆ ದಾಳಿಕೋರರಲ್ಲಿ ಮಹಿಳೆಯೂ ಕೂಡ ಇದ್ದಳು ಎನ್ನುವುದನ್ನು ಶ್ರೀಲಂಕಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ 18 ಮಂದಿ ಶಂಕಿತರನ್ನು ಬಂಧಿಸಲಾಗಿದೆ.

ಸ್ಫೋಟಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇನ್ನೂ ಅನೇಕ ಶಂಕಿತ ಉಗ್ರರು ಬಹಿರಂಗವಾಗಿ ಓಡಾಡಿಕೊಂಡಿದ್ದಾರೆ, ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದರಬೇಕು ಎಂದು ಶ್ರೀಲಂಕಾ ಪ್ರಧಾನಿ ತಿಳಿಸಿದ್ದಾರೆ. ಶ್ರೀಲಂಕಾದ ಮೂಲೆ ಮೂಲೆಗಳಲ್ಲೂ ಸ್ಫೋಟಕಗಳು ಪತ್ತೆಯಾಗುತ್ತಿವೆ.

Woman among 9 bombers says Sri Lanka minister

ಸೋಮವಾರವಷ್ಟೇ ಮತ್ತೊಂದು ಬಾಂಬ್ ಪತ್ತೆಯಾಗಿತ್ತು, ಅದನ್ನು ನಿಷ್ಕ್ರಿಯಗೊಳಿಸಲು ತೆರಳಿದ್ದ ವೇಳೆಯಲ್ಲಿ ಅದು ಸ್ಫೋಟಗೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+