ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್‌ನ ವಾಟರ್‌ಪಾರ್ಕ್‌ನಲ್ಲಿ ಮಾಸ್ಕ್ ಇಲ್ಲದೆ ಪಾರ್ಟಿ ಜೋರು

|
Google Oneindia Kannada News

ಬೀಜಿಂಗ್, ಆಗಸ್ಟ್ 17: ಚೀನಾದ ವುಹಾನ್‌ ನಗರದಿಂದಲೇ ಕೊರೊನಾ ಸೋಂಕು ಹರಡಿದ್ದು ಎಂಬ ಆರೋಪದ ಬೆನ್ನಲ್ಲೇ, ವಾಟರ್‌ಪಾರ್ಕ್‌ನಲ್ಲಿ ಮಾಸ್ಕ್‌ ಧರಿಸದೆ ಸಾವಿರಾರು ಮಂದಿ ಪಾರ್ಟಿ ಮಾಡಿದ್ದು, ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿತ್ತು.

ರಷ್ಯಾದ ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಸಿದ್ಧ, ಯಾವಾಗ ಲಭ್ಯ?ರಷ್ಯಾದ ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಸಿದ್ಧ, ಯಾವಾಗ ಲಭ್ಯ?

ವುಹಾನ್‌ನ ಪ್ರಸಿದ್ಧ ಮಾಯಾ ಬೀಚ್‌ನ ವಾಟರ್ ಪಾರ್ಕ್‌ನಲ್ಲಿ ಸಾವಿರಾರು ಮಂದಿ ಈಜಾಡಿದ್ದಾರೆ, ಅಲ್ಲಿ ಎಲೆಕ್ಟ್ರಾನಿಕ್ ಮ್ಯೂಸಿಕ್ ಫೆಸ್ಟ್‌ ಕೂಡ ನಡೆದಿದೆ.

Without Masks Party At Wuhan

ಈ ವಾಟರ್‌ಪಾರ್ಕ್‌ ಜೂನ್ ತಿಂಗಳಿನಲ್ಲಿ ತೆರೆಯಲಾಗಿತ್ತು, 76 ದಿನಗಳ ಲಾಕ್‌ಡೌನ್ ಬಳಿಕ ಓಪನ್ ಮಾಡಲಾಗಿತ್ತು. ಕೊರೊನಾ ವೈರಸ್ ಹರಡದಿರಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಸಾಮಾನ್ಯ ದಿನಕ್ಕಿಂತ ಶೇ.50 ರಷ್ಟು ಮಂದಿ ಮಾತ್ರ ಬಂದಿದ್ದರು. ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲಾಗಿತ್ತು.ಅಲ್ಲಿ ಕೆಲವು ಮಂದಿ ನೀರಿಗೆ ಇಳಿದಿದ್ದರು, ಇನ್ನು ಕೆಲವರು ದಡದಲ್ಲಿ ಕುಳಿತು ಕಾಲನ್ನು ನೀರಿಗೆ ಇಳಿಬಿಟ್ಟಿದ್ದರು, ಇನ್ನೂ ಕೆಲವರು ಫೋಟೊವನ್ನು ತೆಗೆದುಕೊಳ್ಳುವುದರಲ್ಲಿ ಬಿಸಿಯಾಗಿದ್ದರು.

ಕೆಲವು ಮಂದಿ ಲೈಫ್ ಜಾಕೆಟ್‌ಗಳನ್ನು ಧರಿಸಿದ್ದರು. ಆದರೆ ಯಾರೂ ಕೂಡ ಫೇಸ್ ಮಾಸ್ಕ್‌ಗಳನ್ನು ಬಳಸಿರಲಿಲ್ಲ.ಸ್ಥಳೀಯ ಆರ್ಥಿಕತೆಯನ್ನು ಸುಧಾರಿಸಲು 400 ಪ್ರವಾಸಿ ತಾಣಗಳನ್ನು ಪುನಃ ತೆರೆದಿದ್ದಾರೆ. ಕೊರೊನಾ ಸೋಂಕು ಅಷ್ಟೇ ಅಲ್ಲದೆ ಪ್ರವಾಹ ಕೂಡ ಬಂದಿತ್ತು.

English summary
Thousands of partygoers packed out a water park over the weekend in the central Chinese city of Wuhan, where the coronavirus first emerged late last year, keen to party as the city edges back to normal life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X