ಬ್ರಿಟನ್ ಮಾಜಿ ಪ್ರಧಾನಿ ಬೆಂಗಳೂರು ಕ್ಲಬ್ ಗೆ ಬಾಕಿ ಕಟ್ಬೇಕು!
ಲಂಡನ್, ಏ. 1 : ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಬಾಕಿ ಇಟ್ಟುಕೊಳ್ಳೂವುದು ಸರ್ವೇ ಸಾಮಾನ್ಯ. ಸಚಿವರ, ಮಾಜಿ ಸಚಿವರ ಮನೆಯ ವಿದ್ಯುತ್ ಬಿಲ್ ಬಾಕಿ ಇದೆ ಎಂಬ ವರದಿಗಳು ಬಂದಿದ್ದನ್ನು ನೋಡಿದ್ದೇವೆ. ಆದರೆ ಈಗ ಹೇಳ ಹೊರಟಿರುವುದು ಬ್ರಿಟನ್ ಮಾಜಿ ಪ್ರಧಾನಿ ಬಾಕಿ ಇಟ್ಟುಕೊಂಡಿರುವ ಕತೆ.
ಬ್ರಿಟನ್ ಮಾಜಿ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಬೆಂಗಳೂರು ಸಿಟಿ ಕ್ಲಬ್ ಗೆ ಬಾಕಿ ಕೊಡಬೇಕಿದೆ, ಅದು ಬರೋಬ್ಬರಿ 13 ರೂಪಾಯಿ! ಬೆಂಗಳೂರು ಸಿಟಿ ಕ್ಲಬ್ ಗೆ ಬಾಕಿ ಹಣ ನೀಡಬೇಕಾದವರ ಪಟ್ಟಿಯಲ್ಲಿ ಚರ್ಚಿಲ್ ಹೆಸರು ಇದೆ ಎಂದು ಬಿಬಿಸಿ ವರದಿಯಲ್ಲಿ ತಿಳಿಸಿದೆ. ಯುದ್ಧದ ಕಾರಣಕ್ಕೆ ಬೇರೆಡೆ ತೆರಳುವ ಮುನ್ನ ಚರ್ಚಿಲ್ ಬೆಂಗಳೂರು ಕ್ಲಬ್ ನಲ್ಲಿ ವಾಸ್ತವ್ಯ ಹೂಡಿದ್ದರು.[ಭಾರತ-ಪಾಕ್ ಮಧ್ಯೆ ಗಡಿ ರೇಖೆ ಎಳೆದವರು ಯಾರು?]

ಕ್ಲಬ್ ಬಿಡುಗಡೆ ಮಾಡಿರುವ 17 ಜನ ಬಾಕಿದಾರ ಪಟ್ಟಿಯಲ್ಲಿ ಚರ್ಚಿಲ್ ಹೆಸರು ಇದೆ. 1899 ರಲ್ಲಿ ಚರ್ಚಿಲ್ ಕ್ಲಬ್ ಗೆ ಭೇಟಿ ನೀಡಿದ್ದ ಬಗ್ಗೆ ದಾಖಲೆಯಿದೆ. 1896 ರಲ್ಲಿ ಚರ್ಚಿಲ್ ಒಬ್ಬ ಸೇನಾಧಿಕಾರಿಯಾಗಿ ಬೆಂಗಳೂರಿಗೆ ಆಗಮಿಸಿದ್ದರು. ಮೂರು ವರ್ಚ ಕಾಲ ಬ್ರಿಟಿಷ್ ಸೈನ್ಯದೊಂದಿಗಿದ್ದ ಅವರು ನಂತರ ಇಂಗ್ಲೆಂಡ್ ಗೆ ಹಿಂದಿರುಗಿದ್ದರು.[ನೇತಾಜಿ, ನೆಹರೂ ನಂಬಿಕಸ್ತ ನಂಬಿಯಾರ್ 'ಸ್ಪೈ']
ಬೆಂಗಳೂರು ಸಿಟಿ ಕ್ಲಬ್ ನ್ನು 1868 ರಲ್ಲಿ ಬ್ರಿಟಿಷ್ ಅಧಿಕಾರಿಗಳ ಗುಂಪೊಂದು ಆರಂಭ ಮಾಡಿತ್ತು. ಭಾರತದಲ್ಲೇ ಈಗ ಇದೊಂದು ಪ್ರತಿಷ್ಠಿತ ಕ್ಲಬ್ ಆಗಿ ಬೆಳೆದಿದೆ. ಹಿಂದೆ ಸಹ ಚರ್ಚಿಲ್ ಬೆಂಗಳೂರಿ ಕ್ಲಬ್ ಗೆ ಹಣ ನೀಡಬೇಕು ಎಂದು ವರದಿಯಾಗಿತ್ತು. ಆದರೆ ಕೇವಲ 13 ರೂ. ಬಾಕಿ ಕಟ್ಟಲು ಬ್ರಿಟಿಷ್ ಸರ್ಕಾರ ಬೆಂಗಳೂರು ಕ್ಲಬ್ ನ್ನು ಸಂಪರ್ಕಿಸುವುದೇ?












Click it and Unblock the Notifications