ಉಗ್ರರ ಪತ್ತೆಗೆ ಅಗತ್ಯಬಿದ್ದರೆ ಪಾಕಿಸ್ತಾನದ ನೆರವು ಕೇಳುತ್ತೇವೆ: ಶ್ರೀಲಂಕಾ ಪ್ರಧಾನಿ

ಕೊಲಂಬೋ,ಏ.26: ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ದಾಳಿಗೆ ಕಾರಣರಾದ ಉಗ್ರರನ್ನು ಪತ್ತೆ ಹಚ್ಚಲು ಅಗತ್ಯಬಿದ್ದರೆ ಪಾಕಿಸ್ತಾನದ ನೆರವು ಪಡೆಯುತ್ತೇವೆ ಎಂದು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಂಸಿಂಘೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ನಡೆಸಿದ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಅವರು, ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಇಲ್ಲಿಯವರೆಗೆ 253 ಮಂದಿ ಮೃತಪಟ್ಟಿದ್ದು ಅದರಲ್ಲಿ 45 ಮಂದಿ ಮಕ್ಕಳಿದ್ದರು. 76 ಮಂದಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಉಗ್ರರ ಪತ್ತೆಗೆ ಅಗತ್ಯಬಿದ್ದರೆ ಪಾಕಿಸ್ತಾನದ ನೆರವು ಕೋರುವುದಾಗಿ ತಿಳಿಸಿದರು.

ನಾವು ತನಿಖೆ ನಡೆಸುವಾಗ ಉಗ್ರರು ಇದೇ ದೇಶಕ್ಕೆ ಸೇರಿದವರು ಎಂದು ಖಚಿತವಾಗಿಲ್ಲ, ನಮ್ಮ ಆಸುಪಾಸಿರುವ ಉಳಿದ ದೇಶಗಳು ಕೂಡ ಇದೇ ರೀತಿಯ ತೊಂದರೆಯನ್ನು ಅನುಭವಿಸುತ್ತಿದೆ. ಭಾರತವು ಜಾಗತಿಕ ಉಗ್ರವದವನ್ನು ತಡೆಯುವ ಕೆಲಸ ಮಾಡುತ್ತಿದೆ.

Will seek Pakistan help to trace terrorists if needed Sri Lanka PM

ಪಾಕಿಸ್ತಾನವು ಉಗ್ರರನ್ನು ಹುಡುಕಲು ನಮಗೆ ಸಹಾಯ ಮಾಡುವುದಾಗಿ ತಿಳಿಸಿದೆ. ಸಂಪೂರ್ಣ ಬೆಂಬಲ ನೀಡುವುದಾಗಿಯೂ ಹೇಳಿದೆ. ಈ ಉಗ್ರರನ್ನು ಪತ್ತೆ ಹಚ್ಚಲು ಬೆಂಬಲ ನೀಡುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅವರ ಬೆಂಬಲ ಸದಾ ನಮ್ಮ ಮೇಲಿದೆ. ಹಾಗೆಯೇ ಭಾರತದ ಗುಪ್ತಚರ ಇಲಾಖೆಯ ಮಾಹಿತಿಗಳನ್ನು ಕೂಡ ಶ್ರೀಲಂಕಾದೊಂದಿಗೆ ಹಂಚಿಕೊಳ್ಳಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+