ಕೊರೊನಾ; ಕಡೆಗೂ ಮೋದಿ ಮಾತು ಕೇಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್, ಮಾರ್ಚ್ 14: ಕೊರೊನಾ ವೈರಸ್ ಸೋಂಕು (ಕೋವಿಡ್19) ಎಲ್ಲ ರಾಷ್ಟ್ರಗಳಿಗೆ ದಾಂಗುಡಿ ಇಡುತ್ತಿದೆ. ಚೀನಾದಲ್ಲಿ ಕಾಣಿಸಿಕೊಂಡು 120 ದೇಶಗಳಿಗೆ ವ್ಯಾಪಿಸಿದೆ. ಅದರಲ್ಲೂ ಚೀನಾದಲ್ಲಿ 3200 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೊನಾಕ್ಕೆ ಚೀನಾದ ನೆರೆಯ ರಾಷ್ಟ್ರಗಳೂ ಬೆಚ್ಚಿ ಬಿದ್ದಿವೆ.

ಈಗಾಲೇ ವಿಶ್ವಸಂಸ್ಥೆ ಕೊರೊನಾ ವೈರಸ್ ಸೋಂಕನ್ನು ಕೇವಲ ಸಾಂಕ್ರಾಮಿಕ ರೋಗ ಅಲ್ಲ, ಅದೊಂದು 'ಜಾಗತಿಕ ಪಿಡುಗು' ಎಂದು ಘೋಷಿಸಿದೆ. ಚೀನಾ ಅಮೆರಿಕ ಭಾರತ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿವೆ.

ಇತ್ತ ಭಾರದಲ್ಲಿಯೂ ತೀವ್ರ ಆತಂಕ ಹುಟ್ಟಿಹಾಕಿರುವ ಕೊರೊನಾ ವೈರಸ್‌ಗೆ ಇಬ್ಬರು ಬಲಿಯಾಗಿ, 84 ಜನರಿಗೆ ಸೋಂಕು ತಗುಲಿದೆ. ಭಾರತ ಸೇರಿದಂತೆ ನೆರೆಯ ರಾಷ್ಷ್ರಗಳಲ್ಲಿ ಕೊರೊನಾ ವೈರಸ್ ನ್ನು ಹತ್ತಿಕ್ಕಲು 'ಸಾರ್ಕ್' ರಾಷ್ಟ್ರಗಳು ಒಂದಾಗಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ಇದಕ್ಕೆ ಆರಂಭದಲ್ಲಿ ಸುಮ್ಮನಿದ್ದ ಪಾಕ್ ಈಗ ಮೋದಿ ಅವರ ಮಾತಿಗೆ ಸೈ ಎಂದಿದೆ.

ಏನಿದು ಸಾರ್ಕ್?

ಏನಿದು ಸಾರ್ಕ್?

ಸಾರ್ಕ್ ಎಂಬುದು ದಕ್ಷಿಣ ಏಷ್ಯಾ ರಾಷ್ಷ್ರಗಳ ಪರಸ್ಪರ ಸಹಕಾರ ಸಂಘಟನೆಯಾಗಿದೆ. ಸೌತ್ ಏಷಿಯನ್ ಅಸೋಷಿಯೇಷನ್ ಆಪ್ ರೀಜನಲ್ ಕೋ ಆಪರೇಷನ್ ಎಂಬುದುರ ಸಕ್ಷಿಂಪ್ತ ರೂಪ. ಈ ಸಂಘಟನೆಯಲ್ಲಿ ಭಾರತ, ಅಪ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡಿವ್ಸ್, ಶ್ರೀಲಂಕಾ, ನೇಪಾಳ ಹಾಗೂ ಪಾಕಿಸ್ತಾನ್ ರಾಷ್ಟ್ರಗಳು ಬರುತ್ತವೆ.

ಸಾರ್ಕ್ ರಾಷ್ಟ್ರಗಳಲ್ಲಿ ಎಷ್ಟು ಸೋಂಕಿತರು?

ಸಾರ್ಕ್ ರಾಷ್ಟ್ರಗಳಲ್ಲಿ ಎಷ್ಟು ಸೋಂಕಿತರು?

ಜಗತ್ತಿನ 120 ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಾರಕ ಕೊರೊನಾ ವೈರಸ್ ಸೋಂಕು ಸಾರ್ಕ್ ರಾಷ್ಟ್ರಗಳಲ್ಲಿಯೂ ತೀವ್ರ ಆತಂಕ ಹುಟ್ಟಿಹಾಕಿದೆ. ಭಾರತ 84, ಪಾಕಿಸ್ತಾನ್ 26, ಇಂಡೋನೇಷಿಯಾ 69, ಮಾಲ್ಡಿವ್ಸ್ 9, ಅಪ್ಘಾನಿಸ್ತಾನ 7, ಶ್ರೀಲಂಕಾ 9, ನೇಪಾಳ ಹಾಗೂ ಭೂತಾನ್‌ನಲ್ಲಿ ತಲಾ 1 ಹಾಗೂ ಬಾಂಗ್ಲಾದೇಶದಲ್ಲಿ 3 ಕೊರೊನೊ ಸೋಂಕಿತ ಪ್ರಕರಣಗಳು ಕಂಡು ಬಂದಿವೆ.

ಪ್ರಧಾನಿ ಮೋದಿ ಕರೆ

ಪ್ರಧಾನಿ ಮೋದಿ ಕರೆ

ಸಾರ್ಕ್ ರಾಷ್ಟ್ರಗಳಲ್ಲಿ 150 ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಕಂಡು ಬಂದಿರುವುದರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಹಾಪಿಡುಗಿನ ವಿರುದ್ಧ ಸಂಘಟನಾತ್ಮಕವಾಗಿ ಹೋರಾಡಲು ಸಾರ್ಕ್ ರಾಷ್ಟ್ರಗಳಿಗೆ ಕರೆ ಕೊಟ್ಟಿದ್ದಾರೆ. ಈ ಕುರಿತು ಕಳೆದ ಮಾ 13 ರಂದು ಟ್ವೀಟ್ ಮಾಡಿದ್ದ ಅವರು, ಜಗತ್ತಿನಲ್ಲಿ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವುದು ಸಾರ್ಕ್ ರಾಷ್ಟ್ರಗಳು. ಈಗ ಕೊರೊನಾ ಜಾಗತಿಕ ಪಿಡುಗಾಗಿರುವುದರಿಂದ ಸಾರ್ಕ್ ರಾಷ್ಟ್ರಗಳು ಒಟ್ಟಾಗಿ ಹೋರಾಡಿ ನಮ್ಮ ಜನರ ಆರೋಗ್ಯ ಕಾಪಾಡಬೇಕು. ಈ ಕುರಿತು ನೇರ ಸಮಾವೇಶ ನಡೆಸಲು ಆಗುವುದಿಲ್ಲ. ವಿಡಿಯೋ ಕಾನ್ಪರೆನ್ಸ್ ಮೂಲಕ ಕೊರೊನಾ ಹತ್ತಿಕ್ಕಲು ಸಾರ್ಕ್ ರಾಷ್ಟ್ರಗಳು ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸೋಣ ಎಂದು ಕರೆಕೊಟ್ಟಿದ್ದರು. ಭಾನುವಾರ ಸಾರ್ಕ್ ದೇಶಗಳ ವಿಡಿಯೋ ಕಾನ್ಪರೆನ್ಸ ನಿಗದಿಯಾಗಿದೆ.

ಮನವಿಗೆ ಸ್ಪಂದಿಸಿದ ಪಾಕ್

ಮನವಿಗೆ ಸ್ಪಂದಿಸಿದ ಪಾಕ್

ಮೋದಿ ಅವರ ಕರೆಗೆ ಸ್ಪಂದಿಸಿರುವ ಸಾರ್ಕ್ ರಾಷ್ಟ್ರಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಆದರೆ, ಆರಂಭದಲ್ಲಿ ನೆರೆಯ ಪಾಕಿಸ್ತಾನ ಈ ವಿಷಯದಲ್ಲಿ ಮೋದಿ ಅವರ ಮನವಿಯನ್ನು ತಿರಸ್ಕರಿಸಿರುವಂತೆ ಮುಗುಮ್ಮಾಗಿತ್ತು. ಈಗ ಪಾಕಿಸ್ತಾನದಲ್ಲೂ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸ್ವತಃ ಇಮ್ರಾನ್ ಖಾನ್ ಅವರು ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ವಕ್ತಾರರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+