iPhone Duo: ₹3 ಲಕ್ಷದ ಐಫೋನ್‌ ಡ್ಯುವೊಗೆ ಭಾರತೀಯರಿಗೇಕೆ ಇಷ್ಟೊಂದು ಕ್ರೇಜ್? ಈ ಹಣದಲ್ಲಿ ಭಾರತದಲ್ಲಿ ಏನೆಲ್ಲಾ ಖರೀದಿಸಬಹುದು ?

ಹೊಸಾದೊಂದು ಐಫೋನ್‌ ಬರುತ್ತೆ (iPhone Duo) ಅಂದರೆ ಭಾರತದ ಶ್ರೀಮಂತರು, ಮೇಲ್‌ ಮಧ್ಯಮ ವರ್ಗದ ಜನ ಅದನ್ನು ಕೊಳ್ಳಲು ಕ್ಯೂ ನಿಲ್ಲುತ್ತಾರೆ. ಭಾರತದಲ್ಲಿ ಅದರ ಬೆಲೆ ದುಬಾರಿ. ಆ ಹಣದಿಂದ ಅಮೆರಿಕ ಪ್ರವಾಸ ಮಾಡಿ ಅದೇ ಫೋನ್‌ ಕೊಂಡು ಬರಬಹುದು. ಆದರೂ ಜನ ಮುಂಬಯಿ, ಬೆಂಗಳೂರಿನ ಆಪಲ್‌ ಶೋರೂಂಗಳ ಎದುರು ಕ್ಯೂ ನಿಲ್ಲುತ್ತಾರೆ.

ಇದೀಗ ಹೊಸ ಐಫೋನ್‌ ಡ್ಯುವೊ ಸುದ್ದಿ. 512ಜಿಬಿಯ ಐಫೋನ್‌ ಡ್ಯುವೊ (iPhone Duo) ಮಾರ್ಕೆಟ್‌ಗೆ ಬಂದಿದೆ. ಅಮೆರಿಕದಲ್ಲಿ ಇದರ ಬೆಲೆ 1,999 ಡಾಲರ್‌. ಭಾರತದಲ್ಲಿ ಇದರ ಬೆಲೆ 3,24,900 ರೂಪಾಯಿ! ಇಷ್ಟು ಬೆಲೆ ಕೊಟ್ಟು ಮೊದಲ ದಿನವೇ ಖರೀದಿಸುವವರು ಲಕ್ಷ ಸಂಖ್ಯೆಯಲ್ಲಿದ್ದಾರೆ. ಈ ಹಣದಿಂದ ಮಧ್ಯಮ ವರ್ಗದವರುಮ ಕೆಳಮಧ್ಯಮವರ್ಗದವರು ಒಂದೊಳ್ಳೇ ಲ್ಯಾಪ್‌ಟಾಪ್‌ ಖರೀದಿಸಬಹುದು, ಒಂದು ಕಾರಿನ ಡೌನ್‌ಪೇಮೆಂಟ್‌ ಮಾಡಬಹುದು. ಮೊದಲಾಗಿದ್ದರೆ ನ್ಯಾನೋ ಕಾರು ಖರೀದಿಸಬಹುದಿತ್ತು. ಸಾಕಷ್ಟು ಚಿನ್ನ ಕೊಳ್ಳಬಹುದು.

Why Are Indians Crazy About the latest 3 Lakh iPhone Duo What Else Can You Buy With That Money

ಇದರ ಬೆಲೆಗೆ ಭಾರತದಲ್ಲಿ ಏನೆಲ್ಲಾ ತಗೋಬಹುದು ನೋಡೋಣ!

256 ಜಿಬಿಯ ಮ್ಯಾಕ್‌ಬುಕ್‌ ಏರ್‌ ಎಂ4, ಐಪ್ಯಾಡ್‌ ಏರ್‌ ಎಂ3, ಐಫೋನ್‌ 17, ಆಪಲ್‌ ವಾಚ್‌ ಸೀರೀಸ್‌ 12 ತಗೊಂಡರೂ ಮತ್ತೆ 3000 ರೂ. ಉಳಿಯುತ್ತೆ. ಒಂದು ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬುಲೆಟ್‌ ಖರೀದಿಸಿ ಇಡೀ ಹಿಮಾಲಯ ಸುತ್ತಾಡಬಹುದು. ಫುಲ್‌ ಗೇಮಿಂಗ್‌ ಸೆಟ್‌ ತಗೊಂಡರೂ ಮತ್ತಷ್ಟು ಸಾವಿರ ಉಳಿಯುತ್ತೆ. 20 ಗ್ರಾಂನಷ್ಟು ಚಿನ್ನ ಖರೀದಿಸಬಹುದು. 12 ಶೇಕಡದಷ್ಟು ಬಡ್ಡಿ ಸಿಗುವ ಯಾವುದಾದರೂ ಇಂಡೆಕ್ಸ್‌ ಫಂಡ್‌ನಲ್ಲಿ ಆ ಹಣ ಹಾಕಿ ಇಟ್ಟರೆ. ಹದಿನೈದು ವರ್ಷದಲ್ಲಿ ಆ ಹಣಕ್ಕೆ ಬಡ್ಡಿ ಸೇರಿ 17,78,000 ರೂಪಾಯಿ ಆಗುತ್ತದೆ. ನಿಮ್ಮ ಮನೆಗೆ ಡಬಲ್‌ ಡೋರ್‌ ಫ್ರಿಜ್‌, ಮೈಕ್ರೋವೇವ್‌, ಎಸಿ, ವಾಷಿಂಗ್‌ ಮಶೀನ್‌, ರೋಬೋ ವ್ಯಾಕ್ಯೂಂ ಕ್ಲೀನರ್‌ ಎಲ್ಲಾ ತರಿಸಿದರೂ ಒಂದಿಷ್ಟು ಸಾವಿರ ಉಳಿಯುತ್ತೆ.

ಆದರೂ 3 ಲಕ್ಷದ ಐಫೋನ್‌ಗೆ ಭಾರತದವರು (india) ಯಾಕೆ ಕ್ರೇಜಿಯಾಗಿ ಆಡ್ತಾರೆ? iPhone Duo ಬಿಡುಗಡೆಯಾದ ಮರುದಿನ ಭಾರತೀಯ ಮೀಡಿಯಾಗಳನ್ನು ನೋಡಿದರೆ, ದೇಶದ ಅತ್ಯಂತ ದೊಡ್ಡ ರಾಷ್ಟ್ರೀಯ ಸಮಸ್ಯೆ ಇದೇ ಎನ್ನುವಂತೆ ಕಾಣುತ್ತದೆ! ಯಾವ ಡಿಸ್ಪ್ಲೇ? ಎಷ್ಟು ಕ್ಯಾಮೆರಾ? ಎಷ್ಟು ತೆಳು? ಬೆಲೆ ಎಷ್ಟು? ಭಾರತದಲ್ಲಿ ಯಾವಾಗ ಸಿಗುತ್ತದೆ? ಯಾರು ಖರೀದಿಸ್ತಾರೆ? ಯಾವ ಐಫೋನ್‌ ಜೊತೆ ಹೋಲಿಸಬೇಕು? ಇದೇ ಚರ್ಚೆ.

ವಿಶೇಷ ಅಂದರೆ, ಅಮೆರಿಕದಲ್ಲೂ ಅದರ ಬಗ್ಗೆ ಇಷ್ಟು ಚರ್ಚೆ ಆಗೋಲ್ಲ. ಯುರೋಪ್‌ ಅಥವಾ ಇತರ ಜಾಗತಿಕ ಮಾಧ್ಯಮಗಳಲ್ಲೂ ಇಷ್ಟು ಸುದ್ದಿ ಇರೋಲ್ಲ. ಹಾಗಾದರೆ ಭಾರತೀಯರಿಗೆ ಐಫೋನ್‌ ಮೇಲೆ ಇಷ್ಟೊಂದು ಕ್ರೇಜ್‌ ಏಕೆ?

ಪ್ರತಿಷ್ಠೆಯ ಸಂಕೇತ

ನಮಗೆ ಐಫೋನ್‌ ಅನ್ನೋದು ಒಂದು ಪ್ರತಿಷ್ಠೆಯ ಸಂಕೇತ. ಭಾರತದಲ್ಲಿ ಬಹಳ ಕಾಲ ದುಬಾರಿ ವಸ್ತುಗಳನ್ನು ಖರೀದಿಸುವುದು ಕೇವಲ ಅವುಗಳ ಉಪಯೋಗಕ್ಕಾಗಿ ಆಗಿರಲಿಲ್ಲ. ದೊಡ್ಡ ಕಾರು, ಬ್ರಾಂಡೆಡ್‌ ವಾಚ್‌, ದುಬಾರಿ ಬೈಕ್‌, ವಿದೇಶ ಪ್ರವಾಸ... ಇವೆಲ್ಲವೂ ಒಂದು ರೀತಿಯ ಸಾಮಾಜಿಕ ಸಂದೇಶವನ್ನು ಹೊತ್ತಿರುತ್ತವೆ.

ಐಫೋನ್‌ ಕೂಡ ಅದೇ ಪಟ್ಟಿಗೆ ಸೇರಿದೆ. "ನನ್ನ ಬಳಿ ಐಫೋನ್‌ ಇದೆ" ಎನ್ನುವುದು ಪ್ರತಿಷ್ಠೆ. "ನನಗೆ ಈ ಮಟ್ಟದ ವಸ್ತುವನ್ನು ಖರೀದಿಸುವ ಸಾಮರ್ಥ್ಯವಿದೆ" ಎನ್ನುವ ಸಂದೇಶ. ಸೋಶಿಯಲ್‌ ಮೀಡಿಯಾಗಳು ಅದನ್ನು ಹಲವು ಪಟ್ಟು ಹೆಚ್ಚಿಸಿವೆ. Instagramನಲ್ಲಿ, YouTube ( youtube) ವಿಡಿಯೋದಲ್ಲಿ, ಸೆಲ್ಫಿಯಲ್ಲಿ, ಕಾಫಿ ಶಾಪ್‌ನಲ್ಲಿ ಎಲ್ಲ ಕಡೆ ಆ ಫೋನ್‌ ಕಾಣುತ್ತದೆ. ಅಂದರೆ ಐಫೋನ್‌ ಸಾರ್ವಜನಿಕ ಪ್ರದರ್ಶನದ ವಸ್ತುವಾಗಿರುತ್ತೆ.

"ನನಗೂ ಬೇಕು" ಎನ್ನುವ ಮನೋವಿಜ್ಞಾನ

ಐಫೋನ್‌ನ ಮತ್ತೊಂದು ದೊಡ್ಡ ಶಕ್ತಿ ಎಂದರೆ ಅದರ ಬ್ರ್ಯಾಂಡ್‌ ನಿರ್ಮಾಣ. ನೀವು ₹30,000 ಅಥವಾ ₹40,000ದ Android ಫೋನ್‌ ಖರೀದಿಸಿದಾಗ ಅದರ ವೈಶಿಷ್ಟ್ಯಗಳನ್ನು ಕೇಳುವವರು ಇರಬಹುದು. ಆದರೆ ಐಫೋನ್‌ ಖರೀದಿಸಿದಾಗ ಬ್ರ್ಯಾಂಡ್‌ ಸ್ವತಃ ಮಾತನಾಡುತ್ತದೆ. ಇದು Appleನ ದಶಕಗಳ ಬ್ರ್ಯಾಂಡ್‌ ನಿರ್ಮಾಣದ ಫಲ. "ಇದು ಒಳ್ಳೆಯ ಫೋನ್‌" ಎನ್ನುವುದಕ್ಕಿಂತ "ಇದು ಐಫೋನ್‌" ಎನ್ನುವುದೇ ಭಾರತೀಯ ಮಾರುಕಟ್ಟೆಯಲ್ಲಿ ಪ್ರತ್ಯೇಕ ಅರ್ಥ ಪಡೆದುಕೊಂಡಿದೆ.

ಕ್ರೇಜ್‌ ಇದ್ದರೂ iphone ಖರೀದಿಸೋರು ಎಷ್ಟು?

ಭಾರತದ ಬಹುಪಾಲು ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಇನ್ನೂ ಕಡಿಮೆ ಮತ್ತು ಮಧ್ಯಮ ಬೆಲೆಯ Android ಫೋನ್‌ಗಳ ಮೇಲಿದೆ. ಆದರೆ ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್‌ ವಿಭಾಗವೂ ವೇಗವಾಗಿ ಬೆಳೆಯುತ್ತಿದೆ.

2026ರ ಮೊದಲ ತ್ರೈಮಾಸಿಕದಲ್ಲಿ iPhone 17 ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಮಾದರಿಯಾಗಿದೆ ಎಂದು Counterpoint Research ಅಂಕಿ-ಅಂಶಗಳು ವರದಿ ಮಾಡಿವೆ. ಅಂದರೆ ಭಾರತದಲ್ಲಿ "ಬೆಲೆ ಹೆಚ್ಚಿದ್ದರೂ ಒಳ್ಳೆಯದೇ ಬೇಕು" ಎನ್ನುವ ಹೊಸ ಗ್ರಾಹಕ ವರ್ಗವೂ ಬೆಳೆದಿದೆ.

EMI ಕೂಡ ಸಿಗುತ್ತೆ

ದುಬಾರಿ ಫೋನ್‌ ಇದ್ದರೂ ಎಲ್ಲರೂ ಒಂದೇ ಸಲಕ್ಕೆ 3 ಲಕ್ಷ ರೂ ಕೊಟ್ಟು ಖರೀದಿಸುವುದಿಲ್ಲ. ಇಎಂಐ ಇದೆ. ಕ್ರೆಡಿಟ್‌ ಕಾರ್ಡ್‌ ಇದೆ. ಎಕ್ಸ್‌ಚೇಂಜ್‌ ಇದೆ. ಬ್ಯಾಂಕ್‌ ಆಫರ್‌ಗಳಿವೆ. ಹಳೆಯ ಐಫೋನ್‌ ಮಾರಾಟದ ಹಣ ಇದೆ. ಹೀಗಾಗಿ ಕಣ್ಣಿಗೆ ₹3 ಲಕ್ಷದ ವಸ್ತುವಾದರೂ, ಖರೀದಿದಾರನ ಮನಸ್ಸಿನಲ್ಲಿ ಅದು ತಿಂಗಳಿಗೆ ಇಂತಿಷ್ಟು ಎಂದು ಬದಲಾಗುತ್ತದೆ. ಇದು ದುಬಾರಿ ವಸ್ತುಗಳ ಮಾರುಕಟ್ಟೆಯಲ್ಲಿರುವ ಅತ್ಯಂತ ಪರಿಣಾಮಕಾರಿ ಮನೋವಿಜ್ಞಾನ. ಬೆಲೆ ದೊಡ್ಡದಾಗಿದ್ದರೂ, ಮಾಸಿಕ ಪಾವತಿ ಚಿಕ್ಕದಾಗಿ ಕಾಣುತ್ತದೆ.

ಮರುಮಾರಾಟ ಮೌಲ್ಯ

ಭಾರತದಲ್ಲಿ ಐಫೋನ್‌ ಜನಪ್ರಿಯವಾಗಲು ರಿಸೇಲ್‌ ವ್ಯಾಲ್ಯೂ ಕೂಡ ಒಂದು ಕಾರಣ. ದುಬಾರಿ Android ಫೋನ್‌ ಖರೀದಿಸಿ ಎರಡು-ಮೂರು ವರ್ಷಗಳ ನಂತರ ಮಾರಾಟ ಮಾಡಲು ಹೋದಾಗ ಅದರ ಬೆಲೆ ವೇಗವಾಗಿ ಕುಸಿಯಬಹುದು. ಐಫೋನ್‌ಗಳ ವಿಷಯದಲ್ಲಿ ಸಾಮಾನ್ಯವಾಗಿ ಮರುಮಾರಾಟದ ಮೌಲ್ಯ ಉತ್ತಮವಾಗಿರುತ್ತದೆ. ಹೀಗಾಗಿ ಕೆಲವರು ಅದನ್ನು ₹1.5 ಲಕ್ಷದ ಫೋನ್‌ ಎಂದು ನೋಡುವುದಿಲ್ಲ. ರು ವರ್ಷ ಬಳಸುತ್ತೇನೆ. ನಂತರ ಮಾರುತ್ತೇನೆ. ಮತ್ತೆ ಹೊಸದಕ್ಕೆ ಹೋಗುತ್ತೇನೆ ಎಂದು ಲೆಕ್ಕ ಹಾಕುತ್ತಾರೆ. ಅಂದರೆ ಐಫೋನ್‌ ಕೆಲವರ ಲೆಕ್ಕದಲ್ಲಿ ಬಳಕೆಯ ಆಸ್ತಿ.

ಇನ್ನೊಂದು ದೊಡ್ಡ ಬದಲಾವಣೆ YouTube, Instagram ಮತ್ತು short-video ಸಂಸ್ಕೃತಿಯಿಂದ ಬಂದಿದೆ. ಇವರಿಗೆ ಕ್ಯಾಮೆರಾ ಮುಖ್ಯ, ವಿಡಿಯೋ ಮುಖ್ಯ, ಮೈಕ್ರೋಫೋನ್‌, ಎಡಿಟಿಂಗ್‌, ಸೋಶಿಯಲ್‌ ಮೀಡಿಯಾ ಅಪ್‌ಲೋಡ್‌ ಎಲ್ಲವೂ ಮುಖ್ಯ. ಈ ಜಗತ್ತಿನಲ್ಲಿ ಐಫೋನ್‌ ಬಹಳ ಬೇಗ ಒಂದು ಕ್ರಿಯೇಟರ್‌ ಟೂಲ್‌ ಆಗಿ ತನ್ನ ಸ್ಥಾನ ಕಂಡುಕೊಂಡಿದೆ. ಕೆಲವರಿಗೆ ಅದು ಕೆಲಸದ ಸಾಧನವೂ ಹೌದು.

iPhone Duo ಏಕೆ?

ಆಪಲ್‌ ಮೊದಲ ಬಾರಿಗೆ ಫೋಲ್ಡೇಬಲ್‌ ಐಫೋನ್‌ ಕ್ಷೇತ್ರಕ್ಕೆ ಕಾಲಿಟ್ಟಿದೆ. iPhone Duo ತೆರೆದಾಗ 7.6 ಇಂಚಿನ ಒಳಗಿನ ಡಿಸ್ಪ್ಲೇ ಮತ್ತು ಹೊರಗೆ 5.4 ಇಂಚಿನ ಡಿಸ್ಪ್ಲೇ ಹೊಂದಿರುವ ಪಾಸ್‌ಪೋರ್ಟ್‌ ಸ್ಟೈಲ್‌ ಫೋಲ್ಡೇಬಲ್‌ ವಿನ್ಯಾಸವನ್ನು ತಂದಿದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ ₹2,99,900.

ಸ್ಯಾಮ್‌ಸಂಗ್‌ ಮತ್ತು ಇತರ ಕಂಪನಿಗಳು ವರ್ಷಗಳಿಂದ ಮಡಚುವ ಫೋನ್‌ಗಳ ಮೇಲೆ ಪ್ರಯೋಗ ಮಾಡುತ್ತಿವೆ. ಆಪಲ್‌ ಮಾತ್ರ ಇಲ್ಲಿಯವರೆಗೆ ಕಾಯುತ್ತಿತ್ತು. ಹೀಗಾಗಿ ಐಫೋನ್‌ ಡ್ಯುವೊ ಖರೀದಿಸುವವರಿಗೆ ಒಂದು ಹೆಚ್ಚುವರಿ ಆಕರ್ಷಣೆ, "ನನ್ನ ಬಳಿ ಮೊದಲ foldable iPhone ಇದೆ" ಎಂಬುದು.

Appleಗೂ ಈ ಉತ್ಪನ್ನದ ಅಗತ್ಯವಿತ್ತು. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಇನ್ನೋವೇಶನ್‌ ನಿಧಾನವಾಗಿ ಹೆಚ್ಚುತ್ತಿದೆ. ಹೊಸ ಕ್ಯಾಮೆರಾ, ಹೊಸ ಚಿಪ್‌, ಉತ್ತಮ ಬ್ಯಾಟರಿ, ಇನ್ನಷ್ಟು ತೆಳುವಾದ ಬಾಡಿ- ಬೇಕಿದೆ. ಆದರೆ ಮಡಚುವ ಫೋನ್‌ ಸಂಪೂರ್ಣ ಹೊಸ ರೂಪದ ಅನುಭವ ನೀಡುತ್ತದೆ. ಹೀಗಾಗಿ ಆಪಲ್‌ಗೂ ಇದು ಹೊಸ ಅನುಭವ.

$1,999 ಬೆಲೆಯೊಂದಿಗೆ ಆರಂಭವಾಗುವ iPhone Duo ಭಾರತದಲ್ಲಿ ₹2,99,900ಕ್ಕೆ ಬರುತ್ತಿದೆ. ಈ ಬೆಲೆ ಎಲ್ಲರಿಗಾಗಿ ಅಲ್ಲ. ಕಡಿಮೆ ಸಂಖ್ಯೆಯ ಜನರಿಂದ ಹೆಚ್ಚು ಆದಾಯ ಪಡೆಯುವ ಪ್ರೀಮಿಯಂ ಸ್ಟ್ರಾಟಜಿ ಇಲ್ಲಿ ಕೆಲಸ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+