Israel-Iran War: ಇಸ್ರೇಲ್ & ಇರಾನ್ ನಡುವೆ ಘೋರ ಯುದ್ಧ ನಡೆದರೆ ಯಾರಿಗೆ ನಷ್ಟ? ಯಾರಿಗೆ ಲಾಭ?
ಇಸ್ರೇಲ್ & ಇರಾನ್ ನಡುವೆ ಯುದ್ಧ ನಡೆಯುತ್ತೆ ಅನ್ನೋ ಭಯ ಈಗ ಇಡೀ ಜಗತ್ತು ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಯಾಕಂದ್ರೆ ಇಸ್ರೇಲ್ & ಇರಾನ್ ನಡುವೆ ಯುದ್ಧ ಘೋರವಾದರೆ ಪರಿಸ್ಥಿತಿ ಕೈಮೀರಿ ಹೋಗಿ, ಕೋಟ್ಯಂತರ ಜನ ನರಳುವ ವಾತಾವರಣ ನಿರ್ಮಾಣ ಆಗಲಿದೆ. ಯಾಕಂದ್ರೆ ಇಸ್ರೇಲ್ ಕೂಡ ಜಾಗತಿಕ ಆರ್ಥಿಕತೆ ಮೇಲೆ ಪ್ರಭಾವ ಬೀರಲಿದೆ, ಮತ್ತೊಂದು ಕಡೆ ಇರಾನ್ ದೇಶ ತೈಲ ಉತ್ಪಾದನೆಯಲ್ಲಿ ಮುಂದೆ ಇದ್ದು ಇಲ್ಲಿ ಯುದ್ಧವಾದರೆ ತೈಲ ಉತ್ಪಾದನೆ ಏರುಪೇರು ಆಗಲಿದೆ. ಹಾಗಿದ್ರೆ, ಇಸ್ರೇಲ್ & ಇರಾನ್ ನಡುವೆ ಘೋರ ಯುದ್ಧ ನಡೆದರೆ ಯಾರಿಗೆ ನಷ್ಟ? ಯಾರಿಗೆ ಲಾಭ?
ಹಿಜ್ಬುಲ್ಲ ಬಂಡುಕೋರ ಸಂಘಟನೆ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ ಮಾಡಿದ್ದ ಇಸ್ರೇಲ್ ಸೇನೆ ಇರಾನ್‌ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿತ್ತು. ಅಲ್ಲದೆ ಇರಾನ್ ಮೇಲೆ ಕೂಡ ಭೀಕರ ದಾಳಿ ನಡೆಯಬಹುದು ಎಂಬ ಆತಂಕ ಆವರಿಸಿತ್ತು. ಇದೇ ಕಾರಣಕ್ಕೆ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಬಂಕರ್ ಸೇರಿ ತಮ್ಮ ಜೀವ ಉಳಿಸಿಕೊಂಡರು ಎಂಬ ಮಾತು ಹರಡಿತ್ತು. ಇಂತಹ ಸಮಯದಲ್ಲೇ ದಿಢೀರ್ ಇಸ್ರೇಲ್ ವಿರುದ್ಧ 200ಕ್ಕೂ ಹೆಚ್ಚು ಕ್ಷಿಪಣಿಗಳ ಮೂಲಕ ದಾಳಿ ಮಾಡಿತ್ತು ಇರಾನ್. ಆ ನಂತರವೇ ಪರಿಸ್ಥಿತಿ ಕೈಮೀರಿ ಹೋಗಿದ್ದು, ಇದೀಗ ಇಬ್ಬರ ನಡುವೆ ಘೋರ ಯುದ್ಧ ಶುರುವಾಗುವ ಭಯ ಕಾಡುತ್ತಿದೆ!

ಯಾರಿಗೆ ನಷ್ಟ? ಯಾರಿಗೆ ಲಾಭ?
ಭೂಮಿ ಮೇಲೆ ಯುದ್ಧ ಒಂದು ಶುರುವಾದರೆ ಅದರಲ್ಲಿ ಮೊದಲು ಚರ್ಚೆಯಾಗುವ ವಿಚಾರ ಅಂದ್ರೆ ಲಾಭ & ನಷ್ಟ. ಯಾಕಂದ್ರೆ ಯುದ್ಧಗಳು ನಡೆಯುವುದು ಲಾಭಕ್ಕಾಗಿ, ಆದರೆ ಇಲ್ಲಿ ಯಾರು ಗೆಲುವನ್ನ ಸಾಧಿಸುತ್ತಾರೋ ಅವರಿಗೆ ಲಾಭ ಸಿಗಲಿದೆ. ಆದರೆ ಯಾರು ಯುದ್ಧದಲ್ಲಿ ಸೋತು ಹೋಗುತ್ತಾರೋ ಅವರಿಗೆ ನಷ್ಟವಾಗಲಿದೆ. ಹೀಗಿದ್ದಾಗಲೇ ಇಸ್ರೇಲ್ & ಇರಾನ್ ನಡುವೆ ಘೋರ ಯುದ್ಧ ನಡೆದರೆ ಯಾರಿಗೆ ನಷ್ಟ? ಯಾರಿಗೆ ಲಾಭ? ಎಂಬ ಚರ್ಚೆ ಜೋರಾಗಿದೆ. ಈ ಪ್ರಶ್ನೆಗೆ ಉತ್ತರ ಹುಡುಕುವುದಾದ್ರೆ, ಇಸ್ರೇಲ್ & ಇರಾನ್ ನಡುವಿನ ಯುದ್ಧದಿಂದ ಪ್ರಪಂಚದಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿ. ಇದೇ ಕಾರಣಕ್ಕೆ ಈ ಯುದ್ಧ ನಡೆಯಬಾರದು ಎಂಬ ಮಾತು ಕೇಳಿಬರುತ್ತಿದೆ.
3ನೇ ಮಹಾಯುದ್ಧದ ಭಯ...
ಇಸ್ರೇಲ್ & ಇರಾನ್ ನಡುವೆ ಘೋರ ಯುದ್ಧ ನಡೆದರೆ ಯಾರಿಗೂ ಲಾಭ ಆಗುವುದಿಲ್ಲ. ಯಾಕೆ ಅಂದ್ರೆ ಇಬ್ಬರ ನಡುವಿನ ಯುದ್ಧ ಮುಂದೆ 3ನೇ ಮಹಾಯುದ್ಧಕ್ಕೆ ಬದಲಾಗಲಿದೆ. ಆಗಲೇ ನೋಡಿ ಶುರುವಾಗುವುದು ಅಸಲಿ ಕಹಾನಿ, ಈಗಿನ ಪರಿಸ್ಥಿತಿಯಲ್ಲಿ 3ನೇ ಮಹಾಯುದ್ಧವನ್ನ ಶುರು ಮಾಡಿದರೆ ಮುಂದೆ ಬಯೋ ವಾರ್ & ನ್ಯೂಕ್ಲಿಯರ್ ವಾರ್ ಶುರುವಾಗಲಿದೆ. ಹೀಗಾಗಿ ಮನುಷ್ಯರು ರೋಗಗಳಿಂದ, ವಾತಾವರಣ ವಿನಾಶದಿಂದ ನಾಶವಾಗಿ ಹೋಗುತ್ತಾರೆ ಎನ್ನುವ ಭಯ ಕಾಡುತ್ತಿದೆ. ಈ ಕಾರಣಕ್ಕೆ ಇಸ್ರೇಲ್ & ಇರಾನ್ ನಡುವೆ ಯುದ್ಧ ನಿಲ್ಲಬೇಕು, ಮಾತುಕತೆ ಮೂಲಕ ಇಬ್ಬರೂ ಸಮಸ್ಯೆ ಸರಿ ಮಾಡಿಕೊಳ್ಳಬೇಕು ಎಂದು ಭಾರತ ಸಲಹೆಯನ್ನ ನೀಡುತ್ತಿದೆ.












Click it and Unblock the Notifications