ಮಂಕಿಪಾಕ್ಸ್‌ಗೆ ಎಂಪಾಕ್ಸ್ ಎಂದು ನಾಮಕರಣ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ
ನವದೆಹಲಿ, ನವೆಂಬರ್, 29: ಮಹಾಮಾರಿ ಕೊರೊನಾ ಬಳಿಕ ಮರಿಮಾರಿ ಮಂಕಿಪಾಕ್ಸ್ ಹರಡಿ ದೇಶದ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಈಗಾಗಲೇ ಮಹಾಮಾರಿ ಕೊರೊನಾದಿಂದ ದೇಶದ ಜನರು ಎಲ್ಲಾ ಕ್ಷೇತ್ರಗಳಲ್ಲೂ ತತ್ತರಿಸಿ ಹೋಗಿದ್ದಾರೆ. ಆದರೆ ಮತ್ತೆ ಮರಿಮಾರಿ ಮಂಕಿ ಲಗ್ಗೆ ಇಟ್ಟು, ಜನರಲ್ಲಿ ಭಯದ ವಾತಾವರಣವನ್ನು ಹುಟ್ಟುಹಾಕಿತ್ತು. ಇದೀಗ ವಿಶ್ವ ಆರೋಗ್ಯ ಸಂಸ್ಥೆ (WHO) ಅದೇ ಮಂಕಿಪಾಕ್ಸ್ ಎನ್ನುವ ಹೆಸರನ್ನು ಎಂಪಾಕ್ಸ್ ಎಂದು ನಾಮಕರಣ ಮಾಡಿದೆ.
ಜಾಗತಿಕ ತಜ್ಞರೊಂದಿಗಿನ ಸರಣಿ ಸಭೆ
ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ತಜ್ಞರೊಂದಿಗಿನ ಸರದಿಯಲ್ಲಿ ಸಮಾಲೋಚನೆ ನಡೆಸಿದ್ದು, ನಂತರ ಸೋಮವಾರ ಮಂಕಿಪಾಕ್ಸ್‌ಗೆ 'ಮಂಕಿಪಾಕ್ಸ್'ಗೆ ಪರ್ಯಾಯವಾಗಿ 'ಎಂಪಾಕ್ಸ್' ಎಂಬ ಹೊಸ ಪದವನ್ನು ಘೋಷಿಸಿದೆ. ಮಾರಕ ಕಾಯಿಲೆಯ ಹೆಸರಿನ ಸುತ್ತ ಜನಾಂಗೀಯ ಮತ್ತು ಕಳಂಕಿತ ಭಾಷೆಯ ವರದಿಗಳ ಹಿನ್ನೆಲೆಯಲ್ಲಿ ಹೆಸರು ಮರುನಾಮಕರಣ ಮಾಡಲಾಗಿದೆ. ಮಂಕಿಪಾಕ್ಸ್ ಹೆಸರನ್ನು ಹಂತಹಂತವಾಗಿ ತೆಗೆದುಹಾಕುವ ಮೊದಲು ಎರಡೂ ಪದಗಳನ್ನು ಒಂದು ವರ್ಷದವರೆಗೆ ಏಕಕಾಲದಲ್ಲಿ ಬಳಸಲಾಗುತ್ತದೆ. ಗೊಂದಲದ ಬಗ್ಗೆ ತಜ್ಞರು ಎತ್ತಿರುವ ಕಳವಳಗಳನ್ನು ತಗ್ಗಿಸಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.

ಇದುವರೆಗೂ ದಾಖಲಾದ ಪ್ರಕರಣಗಳು
ಎಂಪಾಕ್ಸ್ ಒಂದು ಅಪರೂಪದ ಸಂಕ್ರಾಮಿಕ ಕಾಯಿಲೆ ಆಗಿದ್ದು, ಇದು ಮೊದಲನೇಯದಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ. ಆದರೆ ಈ ವರ್ಷ ಪ್ರಪಂಚದ ಇತರ ಭಾಗಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯದ ವಾತಾವರಣವನ್ನು ಉಂಟುಮಾಡಿತ್ತು. ಇದುವರೆಗೂ ವಿಶ್ವದಲ್ಲಿ 80,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 55 ಸಾವುಗಳು ಸಂಭವಿಸಿದೆ. 110 ದೇಶಗಳು ಈ ಸೋಂಕಿಗೆ ಒಳಗಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಸಾರ್ವಜನಿಕ ಮತ್ತು ಖಾಸಗಿ ಸಭೆಗಳಲ್ಲಿ ಹಲವಾರು ನಾಯಕರು ಮತ್ತು ದೇಶಗಳು ಮಂಕಿಪಾಕ್ಸ್ ಹೆಸರಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಅಲ್ಲದೆ ಆ ಹೆಸರಿನ ಬದಲಾವಣೆಗೆ ಪ್ರಸ್ತಾಪಿಸಲು ವಿಶ್ವ ಆರೋಗ್ಯಾ ಸಂಸ್ಥೆಯನ್ನು ಕೇಳಿದ್ದವು, ಎಂದು ವಿಶ್ವ ಸಂಸ್ಥೆ ಮರುನಾಮಕರಣದ ಬಗ್ಗೆ ಸ್ಪಷ್ಟನೆ ನೀಡಿದೆ.

ಎಂಪಾಕ್ಸ್ ಹೆಸರಿಡಲು ಪರಿಣಿತರೊಂದಿಗೆ ಚರ್ಚೆ
ಹೊಸ ಹೆಸರುಗಳಿಗೆ ಸಲಹೆಗಳನ್ನು ಸಲ್ಲಿಸಲು ಆಹ್ವಾನಿಸಲಾದ ಪರಿಣಿತರು, ಸಾರ್ವಜನಿಕರಿಂದ ವೀಕ್ಷಣೆಗಳನ್ನು ಸಂಗ್ರಹಿಸಲು ಸಮಾಲೋಚನೆಗಳನ್ನು ನಡೆಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರೊಂದಿಗಿನ ಚರ್ಚೆಯ ನಂತರ ಒಂದು ವರ್ಷದ ಪರಿವರ್ತನೆಯ ಅವಧಿಯ ನಂತರ ಮಂಕಿಪಾಕ್ಸ್ ಬದಲಿಗೆ ಪಾಕ್ಸ್ ಎನ್ನುವ ಪದವಾಗಿ ಪರಿವರ್ತಿಸಲು ಶಿಫಾರಸು ಮಾಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.












Click it and Unblock the Notifications