US Election 2024: ಅಮೆರಿಕ ಚುನಾವಣೆಯಲ್ಲಿ ಗೆದ್ದರೂ ಕಿಮ್ ನಿಭಾಯಿಸುವುದೇ ಕಷ್ಟ ಕಷ್ಟ!

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೆಲವೇ ಕೆಲವು ಗಂಟೆಗಳು ಬಾಕಿ ಉಳಿದಿದ್ದು, ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ನಡುವೆ ಗೆಲುವಿನ ಗುದ್ದಾಟ ಬಲು ಜೋರು ಜೋರಾಗಿದೆ. ಒಂದು ಕಡೆ ಡೊನಾಲ್ಡ್ ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ಹಲವು ರೀತಿ ಆರೋಪ ಮಾಡುತ್ತಿದ್ದರೆ, ಇತ್ತ ಡೊನಾಲ್ಡ್ ಟ್ರಂಪ್ ಕೂಡ ತಮ್ಮದೇ ಶೈಲಿಯಲ್ಲಿ ಕಮಲಾ ಹ್ಯಾರಿಸ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆದರೆ ಅಸಲಿ ಮ್ಯಾಟರ್ ಇದಲ್ಲ, ಅಮೆರಿಕ ಎಲೆಕ್ಷನ್ ಗೆದ್ದರೂ ಮತ್ತೊಂದು ಮಹಾ ಸಮಸ್ಯೆ ಹೊಸ ಅಧ್ಯಕ್ಷರಿಗೆ ಎದುರಾಗಲಿದೆ!

ಅಮೆರಿಕದ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿದ್ದು, ಅಮೆರಿಕದ ಅರ್ಥಿಕತೆ ಮೇಲೂ ಚುನಾವಣೆ ದೊಡ್ಡ ಪರಿಣಾಮ ಬೀರಲಿದೆ. ಹೀಗಾಗಿ ಜಗತ್ತಿನ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿರುವ ಅಮೆರಿಕದ ಎಲೆಕ್ಷನ್ ಮೇಲೆ ಎಲ್ಲರೂ ಗಮನ ಇಟ್ಟು ಕಾಯುತ್ತಿದ್ದಾರೆ. ಈ ಸಮಯದಲ್ಲೇ ಅಮೆರಿಕದ ಹೊಸ ಅಧ್ಯಕ್ಷರಿಗೆ ದೂರದ ಉತ್ತರ ಕೊರಿಯಾದಲ್ಲಿ ಒಬ್ಬ ವ್ಯಕ್ತಿ ದೊಡ್ಡ ಸವಾಲು ಎಸೆಯಲು ಸಜ್ಜಾಗಿದ್ದಾನೆ, ಆತ ಬೇರೆ ಯಾರೋ ಅಲ್ಲ ಸರ್ವಾಧಿಕಾರಿಯ ಪಟ್ಟ ಕಟ್ಟಿಕೊಂಡಿರುವ ಕಿಮ್ ಜಾಂಗ್ ಉನ್!

Who Can Handle North Korean Leader Kim Jong Un After Winning In US Presidential Election

ಕಿಮ್ ನಿಭಾಯಿಸುವುದೇ ಕಷ್ಟ ಕಷ್ಟ!

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವುದು ಈಗ ಮುಖ್ಯವಲ್ಲ, ಆದರೆ ಅಮೆರಿಕ ಚುನಾವಣೆಯಲ್ಲಿ ಗೆದ್ದ ನಂತರ ನಿಜವಾದ ಕಷ್ಟ ಎದುರಾಗಲಿದೆ. ಒಂದು ಕಡೆ ಉಕ್ರೇನ್ & ರಷ್ಯಾ ವಾರ್ ನಡೆಯುತ್ತಿದೆ, ಇನ್ನೊಂದು ಕಡೆ ಇಸ್ರೇಲ್ ಮತ್ತು ಮಧ್ಯಪ್ರಾಚ್ಯ ಯುದ್ಧಗಳು ಜೋರಾಗುತ್ತಿವೆ. ಇಂತಹ ಸಮಯದಲ್ಲಿ ಕಿಮ್ ಜಾಂಗ್ ಉನ್ ಎಂಬ ಸರ್ವಾಧಿಕಾರಿ ಇದೀಗ ನ್ಯೂಕ್ಲಿಯರ್ ಸಾಮರ್ಥ್ಯ ಇರುವ ಮಿಸೈಲ್ ಪರೀಕ್ಷೆ ನಡೆಸಿ, ಅಮೆರಿಕದ ಸೇನೆಗೂ ಸವಾಲು ಎಸೆದಿದ್ದಾನೆ.

ಹೀಗೆ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗುವವರಿಗೆ ಸಾಲು ಸಾಲು ಸವಾಲು ಈಗ ಎದುರಾಗಲಿವೆ. ಒಂದು ಕಡೆ ಕಮಲಾ ಹ್ಯಾರಿಸ್ ಗೆದ್ದರೂ ಬೆಟ್ಟದಷ್ಟು ಸವಾಲು ಇರಲಿದ್ದು, ಇನ್ನೊಂದು ಕಡೆ ಡೊನಾಲ್ಡ್ ಟ್ರಂಪ್ ಗೆದ್ದರೂ ಸಾಲು ಸಾಲು ಸಮಸ್ಯೆ ಎದುರಾಗಲಿದೆ. ಈ ಹಿನ್ನೆಲೆ ಮತದಾರರು ಎಲ್ಲವನ್ನೂ ಅಳೆದು & ತೂಗಿ ಈಗ ವೋಟ್ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮತದಾನ ಮಾಡಲು ಅಂತಿಮ ಹಂತದ ಸಿದ್ಧತೆ ಸಾಗಿದೆ.

ಉತ್ತರ ಕೊರಿಯಾ ಸೈಲೆಂಟ್ ಆಗುತ್ತಾ?

ಈ ಲೆಕ್ಕಾಚಾರದಲ್ಲಿ ಕಿಮ್ ಜಾಂಗ್ ಉನ್ ಅಮೆರಿಕ ಪಾಲಿಗೆ, ಈಗಿನ ದೊಡ್ಡ ತಲೆನೋವು ಎಂಬ ಮಾತು ಜಾಗತಿಕ ವಲಯದಲ್ಲಿ ಚರ್ಚೆಗೆ ಬಂದಿದೆ. ಆದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದರೆ ಕಿಮ್ ಜಾಂಗ್ ಉನ್ ಜೊತೆ ವ್ಯವಹರಿಸುವುದು ಸುಲಭ ಎಂಬ ಮಾತುಗಳು ಕೇಳಿಬಂದಿವೆ. ಹೀಗಿದ್ದರೂ ಕಿಮ್ & ಟ್ರಂಪ್ ಭೇಟಿ ಮಾಡಿ ಹಲವು ವರ್ಷ ಕಳೆದು ಹೋಗಿವೆ, ಹೀಗಾಗಿ ಕಿಮ್ ಜಾಂಗ್ ಉನ್ ಈಗ ಬದಲಾಗಿದ್ದಾನಾ? ಟ್ರಂಪ್ ಜೊತೆ ಸರಿಯಾಗಿ ಮಾತುಕತೆ ನಡೆಸುತ್ತಾನಾ? ಎಂಬ ಪ್ರಶ್ನೆಗಳು ಕಾಡುತ್ತಿವೆ. ಒಟ್ನಲ್ಲಿ ಯಾರೇ ಗೆದ್ದರೂ ಅಮೆರಿಕ ಸಮಸ್ಯೆ ಎದುರಿಸುವುದು ತಪ್ಪಲ್ಲ, ಹೀಗಾಗಿ ನವೆಂಬರ್ 5ರ ಚುನಾವಣೆ ಸಾಕಷ್ಟು ಗಮನ ಸೇಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+