ಅಮೆರಿಕದಲ್ಲಿ ಮತ್ತೆ ಬಿಕ್ಕಟ್ಟು, ಸರ್ಕಾರಿ ಸೇವೆ ಸ್ಥಗಿತ

ವಾಷಿಂಗ್ಟನ್, ಅ.1: ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟು ವಿಪರೀತವಾಗಿ 17 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಸೇವೆ ಸ್ಥಗಿತಗೊಂಡಿದೆ. ಸರ್ಕಾರಿ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಎಲ್ಲೆಡೆ ಸುತ್ತೋಲೆ ಹೊರಡಿಸಲಾಗಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಇದರಿಂದ ಭಾರಿ ಮುಜುಗರಕ್ಕೀಡಾಗಿದೆ.

ವಾರ್ಷಿಕ ಬಜೆಟ್ ಗೆ ಸೆನೆಟ್ ನಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳಾದ ಪೊಲೀಸ್ ಹಾಗೂ ಭದ್ರತಾ ಸೇವೆ ಹೊರತು ಪಡಿಸಿ ಉಳಿದ ಎಲ್ಲಾ ರೀತಿಯ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಮೆರಿಕದ 7,83,000 ಸರ್ಕಾರಿ ನೌಕರರಿಗೆ ವೇತನ ರಹಿತ ರಜೆ ನೀಡಲಾಗಿದೆ.

ರಿಪಬ್ಲಿಕ್ ಪಾರ್ಟಿ ಮಂಡಿಸಿದ ಮಸೂದೆಗೆ ಡೆಮಾಕೆಟ್ರಿಕ್ ಪಕ್ಷದವರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ ಹೀಗಾಗಿ ಹೆಲ್ತ್ ಕೇರ್ ಕಾನೂನು ಜಾರಿಗೆ ತರಲು ಒಮ್ಮತ ಮೂಡಿಲ್ಲ. 54-46 ಮತಗಳ ಅಂತರದಲ್ಲಿ ಮಸೂದೆ ತೂಗೂಯ್ಯಾಲೆ ಅಡುತ್ತಿದೆ.

ಸೆಪ್ಟೆಂಬರ್ 30ಕ್ಕೆ ಅಮೆರಿಕ ಬಜೆಟ್ ಅವಧಿ ಅಂತ್ಯಗೊಂಡಿತ್ತು, ಆದರೆ ನೂತನ ಬಜೆಟ್ ಗೆ ಅಮೆರಿಕ ಕಾಂಗ್ರೆಸ್ ನಲ್ಲಿ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ಥೆಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

White House orders

ಆರ್ಥಿಕ ಸಂಕಷ್ಟ ಪರಿಸ್ಥಿತಿ ತಿಳಿಗೊಳ್ಳವ ಭರವಸೆಯೂ ಸಿಗುತ್ತಿಲ್ಲ ಎಂದು ಡೆಮಾಕ್ರೆಟಿಕ್ ಪಕ್ಷದ ಸೆನೆಟರ್ ಬರ್ಬಾರಾ ಮಿಕುಲ್ಸ್ಕಿ ಹೇಳಿದ್ದಾರೆ. ಗಡಿಭಾಗದಲ್ಲಿ ಗಸ್ತು ತಿರುಗುವಿಕೆ, ಏರ್ ಟ್ರಾಫಿಕ್ ಕಂಟ್ರೋಲ್ ಮುಂತಾದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಸೇವೆಗಳು ಸ್ಥಗಿತ ಗೊಳ್ಳಲಿದೆ.

ವೀಸಾ ಕಥೆ ಏನು?: ವಿದೇಶಿಯರಿಗೆ ವೀಸಾ ನೀಡಿಕೆ ಪ್ರಕ್ರಿಯೆ ನಿಲ್ಲಿಸಲಾಗುವುದಿಲ್ಲ. ಹೀಗಾಗಿ ಎಲ್ಲೆಡೆ ವೀಸಾ ಪ್ರಕ್ರಿಯೆ ಎಂದಿನಂತೆ ಜಾರಿಯಲ್ಲಿರಲಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

ಯುಎಸ್ ಆರ್ಥಿಕ ಪರಿಸ್ಥಿತಿ ಹಾಳಾಗಿಲ್ಲ. ಸ್ವಲ್ಪ ಸಮಯದಲ್ಲೇ ಚೇತರಿಕೆ ಕಾಣಲಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭರವಸೆ ನೀಡಿದ್ದಾರೆ. ಆದರೆ, ವಾಲ್ ಸ್ಟ್ರೀಟ್ ನಲ್ಲಿ ಯುಎಸ್ ಷೇರುಗಳ ಕುಸಿತದ ಭೀತಿ ಆವರಿಸಿದೆ. ಸದ್ಯಕ್ಕೆ ಮಸೂದೆಗೆ ಒಪ್ಪಿಗೆ ಸೂಚಿಸಿ ಅಗತ್ಯ ಸೇವೆಗಳನ್ನು ಜಾರಿಗೊಳಿಸುವಂತೆ ಅನೇಕ ಸಂಸದರು ಒತ್ತಾಯಿಸಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+