ಬ್ರಿಟನ್ ಪ್ರಧಾನಿ ಹೆಸರಿನಲ್ಲಿ ಪೋಲಿ ಚಿತ್ರದ ನಟಿಗೆ ಬಿಟ್ಟಿ ಪ್ರಚಾರ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಫೆಬ್ರವರಿ 2: ಇತ್ತೀಚೆಗೆ ಬ್ರಿಟನ್ ನ ಪ್ರಧಾನ ಮಂತ್ರಿ ತೆರೆಸಾ ಮೇ ಅಮೆರಿಕಕ್ಕೆ ಭೇಟಿ ನೀಡಿದ್ದರು. ಬ್ರಿಟನ್ ದೇಶ ಐರೋಪ್ಯ ಒಕ್ಕೂಟದಿಂದ ಹೊರ ನಡೆಯಬೇಕೆಂದು ನಿರ್ಧರಿಸಿದ ನಂತರ ಹಾಗೂ ಟ್ರಂಪ್ ಅಧಿಕಾರ ಸ್ವೀಕರಿಸಿದ ನಂತರ ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧಗಳನ್ನು ಬಲಿಷ್ಠಗೊಳಿಸಲು ಪ್ರಯತ್ನಿಸುತ್ತಿವೆ.

ಆದರೆ, ಇತ್ತೀಚೆಗೆ ಒಂದು ಅಚಾತುರ್ಯ ನಡೆದುಹೋಗಿದೆ. ಶ್ವೇತಭವನದ ಅಧಿಕೃತ ಮೆಮೋನಲ್ಲಿ ತೆರೆಸಾ ಮೇ ಅವರ ಹೆಸರನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ಕಾಕತಾಳೀಯ ಎಂಬಂತೆ ಇದೇ ಹೆಸರಿನ ಒಬ್ಬ ಪೋಲಿ ಚಿತ್ರಗಳ ನಟಿಯೊಬ್ಬಳಿದ್ದಾಳೆ. ಇದು ಕೇವಲ ಒಮ್ಮೆ ನಡೆದಿದ್ದಲ್ಲ. ಉಪರಾಷ್ಟ್ರಪತಿ ಮೈಕ್ ಪೆಂಸ್ ಅವರ ಕಚೇರಿಯಿಂದ ಹೊರಬಂದ ಮೆಮೋವಿನಲ್ಲೂ ಇದೇ ತಪ್ಪು ಮಾಡಲಾಗಿದೆ.[10 ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಕ್ಷಿಪಣಿ ಪರೀಕ್ಷೆ ಮಾಡಿದ ಚೀನಾ]

White House misspells British PM’s name

ಎರಡೂ ತಪ್ಪುಗಳನ್ನು ತುಸು ಹೊತ್ತಿನ ನಂತರ ಸರಿಮಾಡಲಾಗಿದೆ. ಆದರೆ ವಿವಿಧ ವಲಯಗಳಲ್ಲಿ ಇದನ್ನು ಬ್ರಿಟನ್ ಗೆ ಮಾಡಿದ ಅವಮಾನ ಎಂದೇ ಬಣ್ಣಿಸಲಾಗುತ್ತಿದೆ. ಇತ್ತ ಆ ಪೋಲಿ ಚಿತ್ರಗಳ ನಟಿ ತನಗೆ ಸಿಗುತ್ತಿರುವ ಬಿಟ್ಟಿ ಪ್ರಚಾರದಿಂದ ಸಾಕು ಸಾಕಾಗಿದ್ದಾಳೆ.[ಟ್ರಂಪ್ ಎಚ್ಚರಿಕೆಗೆ ಕ್ಯಾರೇ ಅನ್ನದೆ ಇರಾನ್ ನಿಂದ ಕ್ಷಿಪಣಿ ಪರೀಕ್ಷೆ]

ತೆರೆಸಾ ಮೇ ಅವರು ಬ್ರಿಟನ್ ಪ್ರಧಾನ ಮಂತ್ರಿ ಆಗುತ್ತಾರೆ ಎಂದು ಕಳೆದ ವರ್ಷದ ಜುಲೈ ತಿಂಗಳಲ್ಲಿ ಅಚಾನಕ್ಕಾಗಿ ಘೋಷಿಸಿದಾಗಲೂ ಇದೇ ರೀತಿ ಅನೇಕ ಜನ ತಪ್ಪು ಉಲ್ಲೇಖ ಮಾಡಿದ್ದರು. ಆದರೆ ಈಗಿನ ಅಚಾತುರ್ಯ ಶ್ವೇತ ಭವನದಲ್ಲಿ ನಡೆದಿರುವುದು ಬಹಳ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major gaffe, the White House misspelled British Prime Minister Theresa May’s name three times in an official schedule of her visit to the US.
Please Wait while comments are loading...