Donald Trump: ಶೀತಲ ಸಮರ ಮತ್ತೆ ಶುರು? ಅಮೆರಿಕ & ರಷ್ಯಾ ನಡುವೆ ನಡೆಯುತ್ತಿದೆ ಈ ಭಯಾನಕ ಹೋರಾಟ!

ಅಮೆರಿಕ ಇದೀಗ ಜಗತ್ತಿನಲ್ಲಿ ಮತ್ತೊಮ್ಮೆ ತನ್ನ ಶಕ್ತಿ & ಸಾಮರ್ಥ್ಯ ಏನು? ಅನ್ನೋದನ್ನ ತೋರಿಸಲು ಸಜ್ಜಾಗಿದೆ. ಜಗತ್ತಿನ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಇದೇ ಅಮೆರಿಕಗೆ ಸಾಲು ಸಾಲು ಸಂಕಷ್ಟಗಳ ಸರಮಾಲೆ ಎದುರಾಗುತ್ತಲೇ ಇದ್ದು, ಈಗಾಗಲೇ ಆರ್ಥಿಕವಾಗಿ ಕೂಡ ಇದೇ ಅಮೆರಿಕ ಬೀದಿಗೆ ಬೀಳುವ ವಾತಾವರಣ ನಿರ್ಮಾಣ ಆಗಿದೆ. ಈ ಸಮಯದಲ್ಲಿ ಮತ್ತೊಮ್ಮೆ ಶೀತಲ ಸಮರ ಶುರುವಾಯ್ತಾ? ಇದೀಗ ಅಮೆರಿಕ & ರಷ್ಯಾ ನಡುವೆ ಶುರುವಾಗಿರುವ ಹೋರಾಟ ಎಂತಹದ್ದು?

ಪಾಶ್ಚಿಮಾತ್ಯ ದೇಶಗಳ ಬಳಿ ನೆರವು ಪಡೆದು ಮುಂದೆ ನುಗ್ತಿರುವ ಉಕ್ರೇನ್ ಸೇನೆ ಈಗ ಏನೇನೋ ಪ್ಲಾನ್ ಮಾಡ್ತಿದೆ. ರಷ್ಯಾ & ಉಕ್ರೇನ್ ಈ ರೀತಿ ಭಾರಿ ಘೋರ ಯುದ್ಧಕ್ಕೆ ನಿಂತಿದ್ದು, ಒಂದು ಕಡೆ ಉಕ್ರೇನ್ ದಾಳಿ ಮಾಡಿದೆ ಅಂತಾ ರಷ್ಯಾ ಅಟ್ಯಾಕ್ ಮಾಡಿದ್ರೆ ಇನ್ನೊಂದು ಕಡೆ ರಷ್ಯಾ ದಾಳಿ ಮಾಡಿದೆ ಅಂತಾ ಉಕ್ರೇನ್ ಅಟ್ಯಾಕ್ ಮಾಡಿ ಭಯ ಹುಟ್ಟಿಸುತ್ತಿದೆ. ಇದೀಗ ರಷ್ಯಾ ಸೇನೆಯ ಪರಮಾಣು ಪಡೆಗಳನ್ನು ಬೆಂಬಲಿಸುವ ಜಾಗದ ಮೇಲೆ ದಾಳಿ ಮಾಡಲು ಉಕ್ರೇನ್ ಸ್ಕೆಚ್ ಹಾಕಿದೆ ಎಂಬ ಆರೋಪದ ನಡುವೆ ಮತ್ತೊಂದು, ಮಹತ್ವದ ಘಟನೆ ನಡೆದಿದೆ.

What s Going On Now After Donald Trump And Vladimir Putin Meet

ಅಮೆರಿಕ ಅಧ್ಯಕ್ಷರ ಜೊತೆಗೆ ಮಾತುಕತೆ

ಟ್ರಂಪ್ ಕಂಡ ಕಂಡ ದೇಶಗಳ ವಿರುದ್ಧ ತೆರಿಗೆ ಯುದ್ಧ ಮಾಡಿಕೊಂಡು ಓಡಾಡುತ್ತಿರುವ ಸಮಯದಲ್ಲೇ ಜಾಗತಿಕ ಆರ್ಥಿಕತೆ ಸೂಕ್ಷ್ಮ ಸ್ಥಿತಿ ತಲುಪಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಜಗತ್ತು ಮತ್ತೊಂದು ಘೋರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಅಪಾಯ ಇದೆ. ಆದ್ರೆ ಇದು ಗೊತ್ತಿದ್ದು ಡೊನಾಲ್ಡ್ ಟ್ರಂಪ್ ಮಾತ್ರ ಮನಸ್ಸಿಗೆ ಬಂದಂತೆ ತೆರಿಗೆ ಹೇರಿಕೆಯ ಮಾಡುತ್ತಿದ್ದಾರೆ. ಭಾರತವೂ ಸೇರಿದಂತೆ ಚೀನಾ, ಬ್ರೆಜಿಲ್ ರೀತಿಯ ದೊಡ್ಡ ದೊಡ್ಡ ದೇಶಗಳನ್ನೇ ಟಾರ್ಗೆಟ್ ಮಾಡಿ ಟ್ರಂಪ್ ಹೀಗೆಲ್ಲಾ ಆಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇಷ್ಟೆಲ್ಲದರ ನಡುವೆ ಮತ್ತೊಂದು ಶೀತಲ ಸಮರ ಕೂಡ ಆರಂಭ ಆಗಿದೆ ಅಂತಿದ್ದಾಗಲೇ ಸಂಚಲನ ಸೃಷ್ಟಿಯಾಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+