Israel VS Iran: ಇಸ್ರೇಲ್ ಪರವಾಗಿ ಯುದ್ಧಕ್ಕೆ ಎಂಟ್ರಿ ಕೊಡಲಿದೆಯಾ ಅಮೆರಿಕ?

ಇಸ್ರೇಲ್ ವಿರುದ್ಧ ಇರಾನ್ ರೊಚ್ಚಿಗೆದ್ದು ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ ನಂತರ ಈಗ ಕಿಚ್ಚು ಹೊತ್ತಿಕೊಂಡಿದೆ. ನೋಡ ನೋಡುತ್ತಲೇ ಘೋರ ಯುದ್ಧಕ್ಕೆ ವೇದಿಕೆ ಸಿದ್ಧವಾಗಿ ಜನ ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದಾರೆ. ಅದ್ರಲ್ಲೂ ಅಮೆರಿಕ ಎಲ್ಲವನ್ನೂ ದೂರದಿಂದ ನಿಂತು ಗಮನಿಸುತ್ತಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೆ? ಅನ್ನೋ ಭಯ ಆವರಿಸಿದೆ. ಮತ್ತೊಂದ್ಕಡೆ ಇಸ್ರೇಲ್ ಪರವಾಗಿ ಯುದ್ಧಕ್ಕೆ ಎಂಟ್ರಿ ಕೊಡಲಿದೆಯಾ ಅಮೆರಿಕ? ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗಾದರೆ ಅಕಸ್ಮಾತ್ ಅಮೆರಿಕ ಇದೀಗ ಇಸ್ರೇಲ್ ಪರವಾಗಿ & ಇರಾನ್ ವಿರುದ್ಧ ಯುದ್ಧಕ್ಕೆ ಎಂಟ್ರಿಯಾದರೆ ಕಥೆ ಏನು?

ಇಸ್ರೇಲ್ ಸೇನೆ ಲೆಬನಾನ್ ವಿರುದ್ಧ ಭೀಕರ ದಾಳಿ ನಡೆಸುತ್ತಿದ್ದು, ಇದು ಮಧ್ಯಪ್ರಾಚ್ಯ ಭಾಗ ಹೊತ್ತಿ ಉರಿಯುವಂತೆ ಮಾಡಿದೆ. ಅದ್ರಲ್ಲೂ ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆ ಮಾಡಿದ ನಂತರ ಇಸ್ರೇಲ್ ದೊಡ್ಡ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಯಾಕಂದ್ರೆ ಇರಾನ್ ಈ ಹಿಂದೆಯಿಂದ ಕೂಡ ಹಿಜ್ಬುಲ್ಲಾ ಬಂಡುಕೋರರಿಗೆ ಎಲ್ಲಾ ರೀತಿ ಬೆಂಬಲ ನೀಡುತ್ತಿತ್ತು. ಹೀಗಿದ್ದಾಗಲೇ ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆ ಮಾಡಿದ ಇಸ್ರೇಲ್ ಸೇನೆ ವಿರುದ್ಧ ಇರಾನ್ ಇದೀಗ ನೇರ ಯುದ್ಧ ಆರಂಭ ಮಾಡಿದೆ. ಹಾಗಾದ್ರೆ ಈಗ ಅಮೆರಿಕ ಯುದ್ಧದ ಅಖಾಡಕ್ಕೆ ಎಂಟ್ರಿ ಕೊಟ್ಟರೆ ಪರಿಸ್ಥಿತಿ ಹೇಗಿರಲಿದೆ?

What Will Happen If America Enters The War Against Iran

ಅಮೆರಿಕದ ಯುದ್ಧ ನೌಕೆಗಳು ಸನ್ನದ್ಧ!

ಇಸ್ರೇಲ್ & ಅಮೆರಿಕ ನಡುವೆ ಎಂತಹ ಸ್ನೇಹ ಇದೆ, ಇಬ್ಬರೂ ಹೇಗೆ ಅನ್ಯೂನ್ಯವಾಗಿ ಜೀವನ ನಡೆಸುತ್ತಿದ್ದಾರೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಈವರೆಗೂ ಇಸ್ರೇಲ್ ಬೆನ್ನಿಗೆ ಬಲವಾಗಿ ನಿಂತಿರುವ ಏಕೈಕ ದೇಶ ಅಂದ್ರೆ ಅದು ಅಮೆರಿಕ ಮಾತ್ರ. ಹೀಗಿದ್ದಾಗ ಇರಾನ್ ದಿಢೀರ್ ಈ ರೀತಿ ಇಸ್ರೇಲ್ ವಿರುದ್ಧ ಮನಸ್ಸಿಗೆ ಬಂದಂತೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಇಸ್ರೇಲ್ ಕೂಡ ಈಗ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಕಟ್ಟೆಚ್ಚರ ವಹಿಸಿದೆ. ಇಂತಹ ಸಮಯದಲ್ಲೇ ಅಮೆರಿಕ ಸೇನೆ ಕೂಡ ಸನ್ನದ್ಧವಾಗಿ ನಿಂತಿದ್ದು, ಯಾವುದೇ ಕ್ಷಣದಲ್ಲಿ ಇಸ್ರೇಲ್ ನೆಲಕ್ಕೆ ಬಂದು ಇಳಿದು ಯುದ್ಧ ಶುರು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇರಾನ್ ಪರವಾಗಿ ರಷ್ಯಾ ಎಂಟ್ರಿ?

ಇಸ್ರೇಲ್ & ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಮತ್ತೊಂದು ಭಯವನ್ನೂ ಹುಟ್ಟು ಹಾಕಿದೆ. ಅದು ಏನು ಅಂದ್ರೆ ಅಕಸ್ಮಾತ್ ಈಗಿನ ಪರಿಸ್ಥಿತಿಯಲ್ಲಿ ಇಸ್ರೇಲ್ ಪರವಾಗಿ ಅಮೆರಿಕ ಎಂಟ್ರಿ ಕೊಟ್ಟರೆ, ಆಗ ಇರಾನ್ ಒಂಟಿಯಾಗಲಿದೆ ಎಂಬ ಭಯ ಇದೆ. ಆದರೆ ಈ ಸಮಯ ಎದುರಾದರೆ ಇರಾನ್ ಪರವಾಗಿ ಖುದ್ದು ರಷ್ಯಾ ಸೇನೆ ನುಗ್ಗುವ ಭಯ ಕೂಡ ಆವರಿಸಿದ್ದು, ಯುರೋಪ್ ದೇಶಗಳ ಎದೆ ನಡುಗಿ ಹೋಗಿದೆ. ಯಾಕಂದ್ರೆ ಈಗಾಗಲೇ ಆರ್ಥಿಕವಾಗಿ ಭಾರಿ ಹೀನಾಯ ಸ್ಥಿತಿಗೆ ತಲುಪಿರುವ ಯುರೋಪ್ ದೇಶಗಳಿಗೆ ಈ ಯುದ್ಧ ಮತ್ತಷ್ಟು ನಷ್ಟವನ್ನು ಉಂಟು ಮಾಡಲಿದೆ ಎಂಬ ಭಯ ಕಾಡುತ್ತಿದೆ.

ಇರಾನ್ ದಾಳಿಗೆ ಇಸ್ರೇಲ್ ಪರದಾಟ?

ಇಸ್ರೇಲ್‌ನ ಪ್ರಮುಖ ಪಟ್ಟಣ ಟೆಲ್‌ಅವೀವ್‌ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಭೀಕರವಾಗಿ ದಾಳಿ ನಡೆಸಿದೆ ಇರಾನ್. ದಕ್ಷಿಣ ಟೆಲ್‌ಅವೀವ್‌ ನಗರ ಮೇಲೆ ಉಗ್ರರಿಂದ ಕೂಡ ಗುಂಡಿನ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ. ದಿಢೀರ್ ಹೀಗೆ ಶತ್ರುಗಳು ಇಸ್ರೇಲ್ ವಿರುದ್ಧ ದಾಳಿ ಆರಂಭ ಮಾಡಿದ ನಂತರ ಪರಿಸ್ಥಿತಿ ಕೈಮೀರಿ ಹೊಗುತ್ತಿದೆ. ಒಂದ್ಕಡೆ ನೇರವಾಗಿ ಇಸ್ರೇಲ್ ನೆಲಕ್ಕೆ ನುಗ್ಗಿದ ಉಗ್ರರು ದಾಳಿ ಮಾಡಿರುವ ಆರೋಪ ಕೇಳಿಬಂದಿದೆ, ಇನ್ನೊಂದು ಕಡೆ ಇರಾನ್ ಕೂಡ 200ಕ್ಕೂ ಹೆಚ್ಚು ಮಿಸೈಲ್ ಹಾರಿಸಿ ಇಸ್ರೇಲ್‌ನಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+