ಪುಟಿನ್ ಭೇಟಿಯ ವೇಳೆ ಪ್ರಧಾನಿ ಮೋದಿ ವಿಶ್ವಕ್ಕೆ ನೀಡಿದ ಸಂದೇಶವೇನು?
ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ಮುಗಿದಿವೆ. ಮೂರನೇ ಬಾರಿಗೆ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶ್ವದ ಎಲ್ಲ ನಾಯಕರೂ ಸಹ ಪ್ರಧಾನಿಗೆ ಶುಭ ಕೋರಿದ್ದರು. ಇದೇ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹ ಪ್ರಧಾನಿ ಮೋದಿಗೆ ಶುಭ ಕೋರಿದ್ದರು. ಈಗ ಪ್ರಧಾನಿ ಮೋದಿ 2019ರ ನಂತರ ಇದೆ ಮೊದಲ ಬಾರಿಗೆ ರಷ್ಯಾ ಭೇಟಿ ನಡೆಸಿದ್ದಾರೆ.
ರಷ್ಯಾ ಉಕ್ರೇನ್ ನಡುವಣ ಯುದ್ಧದ ಬಳಿಕವೂ ಪ್ರಧಾನಿ ಮೋದಿ ಮೊದಲ ಭೇಟಿ ಇದಾಗಿದೆ. ಹೀಗಾಗಿ ಈ ಭೇಟಿಯ ಮೇಲೆ ವಿಶ್ವದ ಚಿತ್ತ ನೆಟ್ಟಿವೆ. ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿ, ರಷ್ಯಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನೋವಿನ ಅರಿವಿದೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ, ರಷ್ಯಾ ಮಾಡಿದ ಸಹಾಯ ಏನು?
ಮುಂದಿನ ದಿನಗಳಲ್ಲಿ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಗಟ್ಟಿಯಾಗಲಿವೆ. ರಷ್ಯಾ ನೆರವಿನಿಂದ ಭಾರತಕ್ಕೆ ಅಗ್ಗದ ತೈಲ ಸಿಗುತ್ತಿದೆ. ಈ ಆತ್ಮೀಯ ಸ್ವಾಗತ ಮತ್ತು ಗೌರವಕ್ಕಾಗಿ ಕೃತಜ್ಞ. ಭಾರತವು ಕಳೆದ 40-50 ವರ್ಷಗಳಿಂದ ಭಯೋತ್ಪಾದನೆಯನ್ನು ಎದುರಿಸುತ್ತಿದೆ, ಭಯೋತ್ಪಾದನೆ ಎಷ್ಟು ಭೀಕರವಾಗಿದೆ ಎಂಬುದರ ಅರಿವು ನಮಗಿದೆ. ಕಳೆದ 40 ವರ್ಷಗಳಿಂದ ನಾವು ಅದನ್ನು ಎದುರಿಸುತ್ತಿದ್ದೇವೆ ಎಂದು ಭಾರತದ ಪ್ರಧಾನಿ ಹೇಳಿದರು.
ಎಷ್ಟು ಬಾರಿ ಉಭಯ ನಾಯಕ ಭೇಟಿ ನಡೆದಿದೆ?
ಭಾರತ, ರಷ್ಯಾದೊಂದಿಗೆ ಕಳೆದ ಎರಡೂವರೆ ದಶಕದಿಂದ ಯಾವ ರೀತಿ ಸಂಬಂಧ ಹೊಂದಿದೆ ತಿಳಿದಿದೆ. ಒಂದೇ ದಶಕದಲ್ಲಿ ನಾವಿಬ್ಬರು ಪರಸ್ಪರ 17 ಬಾರಿ ಭೇಟಿ ಆಗಿದ್ದೇವೆ. ಕಳೆದ 25 ವರ್ಷಗಳಲ್ಲಿ ಉಭಯ ದೇಶಗಳ ನಡುವೆ 22 ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದೇವೆ. ಇದು ಉಭಯ ದೇಶಗಳ ನಡುವಣ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ವಿಶ್ವಕ್ಕೆ ಭಾರತ ನೀಡುವ ಸಂದೇಶ ಏನು?
ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಕಳೆದ ಕೆಲವು ವರ್ಷಗಳಲ್ಲಿ ಭಾರತಕ್ಕೆ ರಷ್ಯಾ ನೀಡಿದ ಸಹಾಯವನ್ನು ನೆನದರು. ಇಡೀ ವಿಶ್ವದಲ್ಲಿ ಇಂಧನದ ಅಭಾವ ಎದುರಾಗಿತ್ತು. ಆಗ ರಷ್ಯಾ ಸರ್ಕಾರ ಭಾರತಕ್ಕೆ ನೇರವು ನೀಡಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಭಾರತ-ರಷ್ಯಾ ನಡುವಿನ ಒಪ್ಪಂದ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.
ಭಾರತ ಮೊದಲಿನಿಂದಲೂ ಶಾಂತಿಯ ನಾಡು. ಶಾಂತಿಯ ಮಂತ್ರವನ್ನೇ ಸಾರುತ್ತಾ ಬಂದಿದೆ. ರಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ. ಭಾರತ ಶಾಂತಿಯ ಪರವಾಗಿದೆ ಎಂದು ವಿಶ್ವ ಸಮುದಾಯಕ್ಕೆ ಮೋದಿ ಭರವಸೆ ನೀಡಿದರು.
ಔತಣ ಕೂಟ
ಪ್ರಧಾನಿ ಮೋದಿ ಸೋಮವಾರ ಎರಡು ದಿನಗಳ ರಷ್ಯಾ ಪ್ರವಾಸಕ್ಕೆ ತೆರಳಿದ್ದಾರೆ. ಇದೇ ವೇಳೆ ಮೋದಿ ರಷ್ಯಾದ ಹಲವು ನಾಯಕರನ್ನು ಭೇಟಿ ಮಾಡಿದ್ದಾರೆ. 22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಮೋದಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಸೋಮವಾರ ರಾತ್ರಿ ಮಾಸ್ಕೋದ ಹೊರವಲಯದಲ್ಲಿರುವ ತಮ್ಮ ಅಧಿಕೃತ ನಿವಾಸ 'ನೊವೊ-ಒಗರಿಯೋವೊ'ದಲ್ಲಿ ಪುಟಿನ್ ಅವರು ಮೋದಿಯವರಿಗೆ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದರು.












Click it and Unblock the Notifications