ಜಾಗತಿಕ ಚರ್ಚೆಗೆ ಕಾರಣವಾದ ಸೊಮಾಲಿಲ್ಯಾಂಡ್ ಬಗ್ಗೆ ನಿಮಗೆಷ್ಟು ಗೊತ್ತು? ವಿಶ್ವಸಂಸ್ಥೆಯಿಂದ ತುರ್ತು ಸಭೆ
ಇಸ್ರೇಲ್ ನಿಂದ ನೂತನವಾಗಿ ಸ್ವತಂತ್ರ ದೇಶದ ಮಾನ್ಯತೆ ಪಡೆದ ಸೊಮಾಲಿಲ್ಯಾಂಡ್ ಜಾಗತಿಕವಾಗಿ ಕಳೆದ ಹಲವು ಘಂಟೆಗಳಿಂದ ಸುದ್ದಿಯಲ್ಲಿದೆ. ಇಸ್ರೇಲ್ ದೇಶದ ಈ ಕ್ರಮವನ್ನು ಕೆಲವು ದೇಶಗಳು ವಿರೋಧಿಸಿವೆ. ಚರ್ಚೆಯಲ್ಲಿರುವ ಈ ಸೊಮಾಲಿಲ್ಯಾಂಡ್ ಯಾವುದಿದು? ಎಲ್ಲಿಯ ದೇಶ, ಇಸ್ರೇಲ್‌ನ ಮನ್ನಣೆ ಜಾಗತಿಕ ಪ್ರತಿಕ್ರಿಯೆಯನ್ನು ಏಕೆ ಹುಟ್ಟುಹಾಕಿದೆ ಎಂಬುದರ ವಿವರ ಇಲ್ಲಿದೆ.
ದಶಕಗಳ ಹಿಂದೆ 1991ರಂದು ಸೊಮಾಲಿಯಾದಿಂದ ಬೇರ್ಪಟ್ಟ ಪ್ರದೇಶವಾದ ಸೊಮಾಲಿಲ್ಯಾಂಡ್. ಅದನ್ನೀಗ ಇಸ್ರೇಲ್ ಸ್ವತಂತ್ರ ರಾಷ್ಟ್ರವೆಂದು ಔಪಚಾರಿಕವಾಗಿ ಗುರುತಿಸಿದೆ. ಹೀಗೆ ಗುರುತಿಸಿದ ಮೊದಲ ದೇಶ ಇಸ್ರೇಲ್. ಈ ನಿರ್ಧಾರ ಹೊರ ಬೀಳುತ್ತಿದ್ದಂತೆ ಒಂದಷ್ಟು ಬೆಳವಣಿಗೆ ನಡೆದಿವೆ. ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತಾನ್ಯುಹು ಅವರು ಇಸ್ರೇಲ್ ಹೊಸ ದೇಶದೊಂದಿಗೆ ಉತ್ತಮ ಸಂಬಂಧ ಹೊಂದಲಿದೆ ಎಂದು ತಿಳಿಸಿದ್ದಾರೆ. ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿದೆ.

ಎಲ್ಲಿದೆ ಸೊಮಾಲಿಲ್ಯಾಂಡ್?
ಸೊಮಾಲಿಲ್ಯಾಂಡ್ ಇದು ಗಲ್ಫ್ ಪ್ರದೇಶಗಳ ಕೆಳಗೆ ಇದೆ. ಸೋಮಾಲಿಯಾದಿಂದ ಬೇರ್ಪಟ್ಟ ಈ ಸೊಮಾಲಿಲ್ಯಾಂಡ್ ಆಫ್ರಿಕಾದ ಹಾರ್ನ್‌ನಲ್ಲಿ ಸ್ವಯಂ ಘೋಷಿತ ರಾಜ್ಯವಾಗಿತ್ತು. ಸೊಮಾಲಿಯಾದ ವಾಯುವ್ಯದಲ್ಲಿ ಅಡೆನ್ ಕೊಲ್ಲಿಯ ಉದ್ದಕ್ಕೂ, ಯೆಮೆನ್ ಎದುರು ಮತ್ತು ಜಿಬೌಟಿಯ ಗಡಿಯಲ್ಲಿದೆ. ಇದು ಪ್ರಮುಖ ಜಾಗತಿಕ ವ್ಯಾಪಾರ ಮಾರ್ಗಗಳು ಮತ್ತು ವಿದೇಶಿ ಮಿಲಿಟರಿ ನೆಲೆಗಳಿಗೆ ಹತ್ತಿರದಲ್ಲಿದೆ.
ಸೊಮಾಲಿಲ್ಯಾಂಡ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಅಧಿಕೃತವಾಗಿ ಇಸ್ರೇಲ್ ಪ್ರಕಟಿಸಿದೆ. ಇದು ಜಾಗತಿವಾಗಿ ಸುದ್ದಿಯಾಗಿದೆ. 1991 ರಲ್ಲಿ ಸೊಮಾಲಿಯಾದಿಂದ ಸ್ವಾತಂತ್ರ್ಯ ಘೋಷಿಸಿದ ನಂತರ ಅದಕ್ಕೆ ಪ್ರತ್ಯೇಕ ರಾಷ್ಟ್ರದ ಮಾನ್ಯತೆ ನೀಡಿದ ಕೀರ್ತಿ ಇಸ್ರೇಲ್‌ಗೆ ಸಲ್ಲುತ್ತದೆ. ಇದಕ್ಕೆ ಸೊಮಾಲಿಯಾ, ಅರಬ್ ಮತ್ತು ಆಫ್ರಿಕನ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಅಲ್ಲದೇ ವಿಶ್ವಸಂಸ್ಥೆಯಲ್ಲೂ ಈ ಬಗ್ಗೆ ತ್ವರಿತ ಚರ್ಚೆಗಳಾಗುತ್ತಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಮತ್ತು ಸೊಮಾಲಿಲ್ಯಾಂಡ್ ಅಧ್ಯಕ್ಷ ಅಬ್ದಿರೆಹಮಾನ್ ಮೊಹಮ್ಮದ್ ಅಬ್ದುಲ್ಲಾಹಿ ನಡುವೆ ಸ್ವತಂತ್ರ ದೇಶದ ಘೋಷಣೆ ಸಂಬಂಧ ಸಹಿ ಹಾಕಲಾಯಿತು. ಇಂದಿನ ಈ ಬೆಳವಣಿಗೆ, ನಿರ್ಧಾರವು ಅಬ್ರಹಾಂ ಒಪ್ಪಂದಗಳ ಮನೋಭಾವಕ್ಕೆ ಹೊಂದಿಕೆಯಾಗುತ್ತದೆ ಎಂದು ಇಸ್ರೇಲ್ ಅಧ್ಯಕ್ಷರು ಅಭಿಪ್ರಾಯ ಹೊರ ಹಾಕಿದ್ದರು. ಯುಎಸ್ ಅಧ್ಯಕ್ಷರ ಜೊತೆಗೂ ಈ ಬಗ್ಗೆ ಪ್ರಸ್ತಾಪಿಸಲಾಗವುದು ಎಂದರು. ಹಾಗಾದರೆ ಅಬ್ರಹಾಂ ಒಪ್ಪಂದ ಎಂದರೇನು?
ಏನಿದು ಅಬ್ರಹಾಂ ಒಪ್ಪಂದ?
2020 ರಲ್ಲಿ ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆ ವಹಿಸಿ ಇಸ್ರೇಲ್ ಮತ್ತು ಹಲವಾರು ಅರಬ್ ರಾಷ್ಟ್ರಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಬಹ್ರೇನ್, ಮೊರಾಕೊ ಮತ್ತು ಸುಡಾನ್ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಏರ್ಪಡಿಸಿದ ಐತಿಹಾಸಿಕ ಒಪ್ಪಂದವೇ ಈ 'ಅಬ್ರಹಾಂ ಒಪ್ಪಂದ'. ಇಸ್ರೇಲ್‌ನೊಂದಿಗೆ ಮೊದಲ ಬಾರಿಗೆ ಪರ್ಷಿಯನ್ ಗಲ್ಫ್ ರಾಷ್ಟ್ರಗಳ ಸಂಬಂಧಗಳನ್ನು ಸ್ಥಾಪಿಸಿದವು. ಇಲ್ಲಿ ವ್ಯಾಪಾರ, ಪ್ರವಾಸೋದ್ಯಮ ಮತ್ತು ಭದ್ರತೆಯಲ್ಲಿ ಸಹಕಾರಕ್ಕೆ ಹೊಸ ಮಾರ್ಗಗಳನ್ನು ತೆರೆಯಲು ಈ ಒಪ್ಪಂದ ಮಹತ್ವದ ಪಾತ್ರ ವಹಿಸುತ್ತದೆ.
ತನ್ನಿಂದ ಬೇರ್ಪಟ್ಟ ಸೊಮಾಲಿಲ್ಯಾಂಡ್ ಇಂದು ಹೊಸ ದೇಶವಾಗಿದ್ದಕ್ಕೆ ಸೊಮಾಲಿಯಾವು ಈ ನಿರ್ಧಾರವನ್ನು "ಆಕ್ರಮಣಕಾರಿ" ಕೃತ್ಯ ಎಂದು ಬಣ್ಣಿಸಿದೆ. ಇಸ್ರೇಲ್ ಈ ಮಾನ್ಯತಾ ನಿರ್ಧಾರವನ್ನು ಹಿಂಪಡೆಯುವಂತೆಯೂ ಆಗ್ರಹಿಸಿದೆ. ಇತ್ತ ಸೋಮವಾರ (ಡಿಸೆಂಬರ್ 29) ಇಸ್ರೇಲ್ ನಡೆಯನ್ನು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಕರೆದಿದೆ. ಇಸ್ಲಾಮಿಕ್ ಸಹಕಾರ ಸಂಘಟನೆಯೊಂದಿಗೆ 20 ಕ್ಕೂ ಹೆಚ್ಚು ದೇಶಗಳು ಇಸ್ರೇಲ್ ಸೊಮಾಲಿಲ್ಯಾಂಡ್‌ಗೆ ನೀಡಿದ ಮಾನ್ಯತೆಯನ್ನು ತಿರಸ್ಕರಿಸಿವೆ. ಇದು ಆಫ್ರಿಕಾ ಭಾಗದಲ್ಲಿ ಮತ್ತು ಕೆಂಪು ಸಮುದ್ರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಅಸ್ಥಿರಗೊಳಿಸಬಹುದು ಎಂದು ಎಚ್ಚರಿಕೆ ನೀಡಿವೆ. ಮತ್ತೊಂದೆಡೆ ಸಿರಿಯಾ ಸಹ ಪ್ರತ್ಯೇಕವಾಗಿ ಇಸ್ರೇಲ್ ನಡೆಯನ್ನು ಖಂಡಿಸಿದೆ.
ಅಮೆರಿಕದಿಂದ ಇರುವ ಅಂತರವೆಷ್ಟು?
ಇಸ್ರೇಲ್ ಈ ನಿರ್ಧಾರ ಕೈಗೊಳ್ಳುವಾಗ ಅಮೆರಿಕಾವನ್ನು ದೂರವಿಟ್ಟಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ನಿಧಾರವನ್ನು ನಾವು ಅನುಸರಿಸುವುದಿಲ್ಲ ಎಂದು ತಿಳಿಸಿದ್ದರು. ಈ ಮಧ್ಯೆ ವಾಷಿಂಗ್ಟನ್‌ಗೆ ಲಾಭಿ ಮಾಡಲಿದೆ ಎಂದು ನೆತನ್ಯಾಹು ಆರೋಪಿಸಿದ್ದರು. ಯುಎಸ್‌ನಲ್ಲಿ ಭದ್ರತಾ ಸಮಸ್ಯೆಗಳ ಕುರಿತು ಸೊಮಾಲಿಯಾದೊಂದಿಗೆ ಅಮೆರಿಕದ ಇತ್ತೀಚಿನ ಹತಾಶೆಯ ವ್ಯಕ್ತಪಡಿಸಿತ್ತು. ಹೀಗಾಗಿ ಅಮೆರಿಕಾ ಕೊಂಚ ಮೌನ ವಹಿಸಿದೆ ಎನ್ನಲಾಗಿದೆ.
ಸೊಮಾಲಿಲ್ಯಾಂಡ್ 1960 ರಲ್ಲಿಯೇ ಸ್ವಾತಂತ್ರ್ಯ ಗಳಿಸಿತ್ತು. ಇಸ್ರೇಲ್ ಮತ್ತು ಇತರ 35 ದೇಶಗಳಿಂದ ಆ ದೇಶ ಗುರುತಿಸಲ್ಪಟ್ಟಿತು. ಆದರೆ ಬಳಿಕ ಅದು ಸ್ವಯಂ ಆಗಿ ಸೊಮಾಲಿಯಾದೊಂದಿಗೆ ಕೂಡಿಕೊಂಡಿದೆ. ಸೊಮಾಲಿಯಾ ಅಂತರ್ಯುದ್ಧಕ್ಕೆ ಕುಸಿದ ನಂತರ 1991 ರಲ್ಲಿ ಸೊಮಾಲಿಲ್ಯಾಂಡ್ ಮತ್ತೆ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಇದೀಗ ಆದೇಶಕ್ಕೆ ಸ್ವತಂತ್ರ ರಾಷ್ಟ್ರದ ಮಾನ್ಯತೆಯನ್ನು ಇಸ್ರೇಲ್ ನೀಡುವ ಮೂಲಕ ಮೊದಲ ದೇಶವಾಗಿದೆ. ಸೊಮಾಲಿಯಾಕ್ಕಿಂತ ಭಿನ್ನವಾಗಿ ಸಾಪೇಕ್ಷ ರಾಜಕೀಯ ಸ್ಥಿರತೆ ಮತ್ತು ಪ್ರಜಾಪ್ರಭುತ್ವ ಪರಿವರ್ತನೆಗಳನ್ನು ಸೊಮಾಲಿಲ್ಯಾಂಡ್ ಕಂಡುಕೊಳ್ಳಲಿದೆ ಎಂದು ಇಸ್ರೇಲ್ ವಿಶ್ವಾಸ ವ್ಯಕ್ತಪಡಿಸಿದೆ.
ದಶಕಗಳ ಹಿಂದೆ ಸ್ವಾತಂತ್ರ್ಯ ಪಡೆದರೂ ಸಹಿತ ಇಸ್ರೇಲ್ ಹೊರತುಪಡಿಸಿ ಬೇರೆ ಯಾವುದೇ ದೇಶವು ಇಲ್ಲಿಯವರೆಗೆ ಸೊಮಾಲಿಲ್ಯಾಂಡ್ ಅನ್ನು ಸ್ವತಂತ್ರ ದೇಶವಾಗಿ ಕಂಡಿಲ್ಲ. ಯುಕೆ, ಟರ್ಕಿ, ಯುಎಇ, ಡೆನ್ಮಾರ್ಕ್ ಮತ್ತು ತೈವಾನ್ ಅನೌಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಕಾಯ್ದುಕೊಂಡಿವೆ. ವಿಶ್ವದ ಅತ್ಯಂತ ಜನನಿಬಿಡ ಕಡಲ ಕಾರಿಡಾರ್‌ಗಳಲ್ಲಿ ಒಂದರ ಬಳಿ ಇರುವ ಸೊಮಾಲಿಲ್ಯಾಂಡ್ ತನ್ನ ಪ್ರಾದೇಶಿಕ ಸಮಸ್ಯೆಯಿಂದ ರಾಜಕೀಯವಾಗಿಯು ಬಲಗೊಳ್ಳಲು, ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿದೆ. ತನ್ನದೇ ಆದ ರೀತಿಯಲ್ಲಿ ಜಾಗತಿಕವಾಗಿ ಗಮನ ಸೆಳೆಯುತ್ತಿದೆ. ಒಟ್ಟಾರೆ ಸೊಮಾಲಿಲ್ಯಾಂಡ್ ಸದ್ಯ ಜಾಗತಿಕ ವಿಚಾರವಾಗಿ ಹೊರ ಹೊಮ್ಮಿದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications