Ukraine War: ಯುದ್ಧ ನಿಂತರೆ ರಷ್ಯಾ & ಉಕ್ರೇನ್‌ಗೆ ಏನೇನು ಲಾಭ?
ಜಗತ್ತು ಶಾಂತಿಯಿಂದ ಇತ್ತು, ಆದರೆ ಯಾವಾಗ ರಷ್ಯಾ & ಉಕ್ರೇನ್ ಯುದ್ಧ ಶುರುವಾಯ್ತೋ ಕಳೆದ 3 ವರ್ಷದಿಂದ ಪ್ರಪಂಚದ ಮೂಲೆ ಮೂಲೆಯಲ್ಲೂ ಏನಾದರೂ ಒಂದು ಹಿಂಸೆಯು ಕಾಡುತ್ತಿದೆ. ಅದರಲ್ಲೂ ಮಧ್ಯಪ್ರಾಚ್ಯ & ಯುರೋಪ್ ದೇಶಗಳ ನೆಮ್ಮದಿ ಹಾಳಾಗಿ ಹೋಗಿ ಜನರು ಚಿಂತೆ ಮಾಡುವಂತೆ ಆಗಿತ್ತು. ಇಂತಹ ಸಮಯದಲ್ಲೇ ದಿಢೀರ್ ರಷ್ಯಾ & ಉಕ್ರೇನ್ ಯುದ್ಧಕ್ಕೆ ಕೊನೆಯ ಮೊಳೆ ಹೊಡೆಯುವುದು ಗ್ಯಾರಂಟಿ ಆಗಿದೆ.
ರಷ್ಯಾ ಸೇನೆಯ ಎದುರು ಹೋಲಿಕೆ ಮಾಡಿದರೆ ಉಕ್ರೇನ್ ಮಿಲಿಟರಿ ಏನಕ್ಕೂ ಸಾಲುವುದಿಲ್ಲ. ಉಕ್ರೇನ್ ಭೂಮಿ ಈಗಾಗಲೇ ಭಾಗಶಃ ನಾಶ ಮಾಡಿರುವ ರಷ್ಯಾ ಸೇನೆ, ಯಾರೆ ಕೆಮ್ಮಿದರೂ ಕಥೆ ಮುಗಿಸುತ್ತಿದೆ. ಒಂದೊಂದು ಹಂತದಲ್ಲೂ ಉಕ್ರೇನ್‌ಗೆ ಕರೆಂಟ್ ಶಾಕ್ ಕೊಟ್ಟು ರಷ್ಯಾ ಸೇನೆಯು ಮುಂದೆ ನುಗ್ಗುತ್ತಿದೆ. ಶತ್ರುಪಡೆ ತನ್ನ ನೆಲದೊಳಗೆ ನುಗ್ಗಿ ಬಂದ್ರೂ ಅಸಹಾಯಕ ಪರಿಸ್ಥಿತಿಯಲ್ಲಿ ಉಕ್ರೇನ್ ನರಳುತ್ತಿದ್ದು, ಸೋಲು ಒಪ್ಪಿಕೊಂಡಂತೆ ಕಾಣುತ್ತಿತ್ತು. ಇಷ್ಟಾದರೂ ಎರಡೂ ದೇಶದ ನಾಯಕರು ಕೂತು ಮಾತನಾಡಿ ಯುದ್ಧ ನಿಲ್ಲಿಸಲು ಮುಂದಾಗಿರಲಿಲ್ಲ. ಇಷ್ಟೆಲ್ಲದರ ನಡುವೆ ದಿಢೀರ್ ರಷ್ಯಾ ಅಧ್ಯಕ್ಷ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹಾಗಾದ್ರೆ ಈ ಯುದ್ಧವನ್ನ ನಿಲ್ಲಿಸುವುದರಿಂದ ಯಾರಿಗೆ ಹೆಚ್ಚು ಲಾಭ?

ಯಾರಿಗೆ ಹೆಚ್ಚು ಲಾಭ ಆಗಲಿದೆ?
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವುದು ಇದೀಗ ಉಕ್ರೇನ್‌ಗೆ ಹೆಚ್ಚು ಲಾಭ ತಂದುಕೊಡುವ ಜೊತೆಗೆ ಬದುಕಲು ಮತ್ತೊಂದು ಅವಕಾಶ ಕೊಟ್ಟಂತೆ ಆಗಲಿದೆ. ಯಾಕಂದ್ರೆ ಈಗಾಗಲೇ ಈ ದೇಶ ಅಂದ್ರೆ ಉಕ್ರೇನ್ ತನ್ನ ನೆಲವನ್ನು ಕಳೆದುಕೊಂಡು ನರಳುತ್ತಿದೆ, ಇಂತಹ ಸ್ಥಿತಿಯಲ್ಲೇ ಮತ್ತೊಂದು ಅವಕಾಶ ಸಿಗಬೇಕು ಎಂದರೆ ರಷ್ಯಾ ಯುದ್ಧ ನಿಲ್ಲಿಸಬೇಕಿತ್ತು. ಅದು ನಡೆಯುವ ಸಮಯ ಬಂದಿದ್ದು, ಮೇ 15ರ ನಂತರ ಮಹತ್ವದ ಸಭೆಗಳು ನಡೆಯಲಿವೆ. ಆ ನಂತರದಲ್ಲಿ ಯುದ್ಧ ನಿಲ್ಲುವುದು ಗ್ಯಾರಂಟಿ ಆಗಿದೆ.
ಶಾಂತಿ... ಶಾಂತಿ... ಶಾಂತಿ...
ಉಕ್ರೇನ್ ಇದೀಗ ರಷ್ಯಾ ವಿರುದ್ಧ ಮಾತ್ರವಲ್ಲದೆ, ರಷ್ಯಾಗೆ ಸಹಾಯವನ್ನ ಮಾಡುತ್ತಿರುವ ಎಲ್ಲಾ ದೇಶಗಳಿಗೂ ಪಾಠ ಕಲಿಸಲು ತೀರ್ಮಾನ ಮಾಡಿದಂತೆ ಕಾಣುತ್ತಿದೆ. ಈ ಕಾರಣಕ್ಕೆ ರಷ್ಯಾ ಬೆನ್ನಿಗೆ ನಿಂತಿರುವ ಚೀನಾ ವಿರುದ್ಧ ಕೂಡ ತೊಡೆತಟ್ಟಿ ನಿಂತಿರುವ ಉಕ್ರೇನ್, ಚೀನಾದ ವಿರುದ್ಧ ಕೂಡ ಗಂಭೀರ ಆರೋಪ ಮಾಡಿತ್ತು. ಅದ್ರಲ್ಲೂ ಉಕ್ರೇನ್ ಮಿಲಿಟರಿ ಸೆರೆಹಿಡಿದ ಚೀನಾ ಸೈನಿಕರನ್ನು ಕರೆದುಕೊಂಡು ಬಂದು ಪರೇಡ್ ಮಾಡಿಸಿ ಚೀನಾಗೆ ದೊಡ್ಡ ಆಘಾತ ನೀಡಿತ್ತು. ಹೀಗೆ ದೊಡ್ಡ ಮಟ್ಟದಲ್ಲಿ ಈ ಯುದ್ಧ ತಲುಪುತ್ತಿದೆ ಎಂಬ ಭಯ ಮೂಡಿರುವ ಸಮಯದಲ್ಲೇ, ಶಾಂತಿಯ ಮಾತುಕತೆ ಬಗ್ಗೆ ಚರ್ಚೆ ಕೂಡ ಶುರುವಾಗಿದೆ.












Click it and Unblock the Notifications