ಸೂರ್ಯನ ಬೆಳಕೇ ತಲುಪದ ಸಮುದ್ರದಾಳದಲ್ಲೂ ಜೀವ ವೈವಿಧ್ಯ : 180 ಮಿಲಿಯನ್ ವರ್ಷ ಹಳೆಯ ಪಳೆಯುಳಿಕೆ ಪತ್ತೆ
ಈ ಪ್ರಕೃತಿಯೇ ಹಾಗೆ ಬಗೆದಷ್ಟು ವಿಚಿತ್ರಗಳು ಹೊರ ಬರುತ್ತಲೇ ಇರುತ್ತದೆ. ಇದೀಗ ಆಳ ಸಮುದ್ರದಲ್ಲಿ ಕೆಸರು ಬಂಡೆಗಳಲ್ಲಿ ಅಸಾಮಾನ್ಯ ಸ್ವರೂಪದ ಸುರುಳಿಯಾಕಾರದ ರಚನೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇವು 180 ದಶಲಕ್ಷ ವರ್ಷಗಳ ಹಿಂದಿನ ರಚನೆಗಳು ಎಂದು ಅಂದಾಜಿಸಲಾಗಿದೆ. ಈ ರಚನೆಗಳು ಪತ್ತೆಯಾಗಿದ್ದು ಮೊರಾಕ್ಕೋದಲ್ಲಿ. ಇವು ಪೂರ್ವ-ಜುರಾಸಿಕ್ ಕಾಲದ ರಚನೆಗಳು ಎಂದು ಹೇಳಲಾಗಿದೆ. ಸೂರ್ಯನ ಕಿರಣಗಳೇ ತಲುಪು ಸಾಧ್ಯವಾಗದ ಆಳ ಸಮುದ್ರದಲ್ಲಿ ಸೂಕ್ಷ್ಮಾಣುಜೀವಿಗಳು ಬದುಕಿದ್ದವು ಎಂಬುದಕ್ಕೆ ಈ ರಚನೆಗಳು ನಿದರ್ಶನವಾಗಿವೆ. ರಸಾಯನಿಕ ಶಕ್ತಿಯನ್ನೇ ಬಳಸಿ ಈ ಸೂಕ್ಷ್ಮಾಣು ಜೀವಿಗಳು ಬದುಕುತಿದ್ದವು ಎಂಬುದನ್ನೂ ಇದು ದೃಢಪಡಿಸುತ್ತದೆ.
ಸುರುಳಿಯಾಕಾರದ ರಚನೆಗಳು 180 ಮೀಟರ್‌ಗಳಿಗಿಂತ ಹೆಚ್ಚು ಆಳದಲ್ಲಿ ರೂಪುಗೊಂಡವು.ಇದು ಸಮುದ್ರದ ಫೋಟಿಕ್ ವಲಯಕ್ಕಿಂತ ಬಹಳ ಕೆಳಗೆ. ಅಲ್ಲಿ ಸೂರ್ಯನ ಬೆಳಕು ತಲುಪಲು ಸಾಧ್ಯವೇ ಇಲ್ಲ. ಅಂದರೆ ಸೂರ್ಯನ ಬೆಳಕಿನಿಂದ ಮಾತ್ರ ಸೂಕ್ಷ್ಮಾಣುಗಳು ಬದುಕಬಲ್ಲದು ಎಂಬ ವಾದವನ್ನು ಈ ರಚನೆ ಅಲ್ಲಗಳೆಯುತ್ತಿದೆ.

ಕೀಮೋಸಿಂಥೆಸಿಸ್ ಬಳಸಿ ಆಹಾರ ತಯಾರಿಕೆ
ಇಲ್ಲಿರುವ ಸೂಕ್ಷ್ಮ ಜೀವಿಗಳು ಆಹಾರಕ್ಕಾಗಿ ದ್ಯುತಿ ಸಂಶ್ಲೇಷಣೆ ಕ್ರಿಯೆಯನ್ನು ಬಳಸುತ್ತಲೇ ಇರಲಿಲ್ಲ. ಇದಕ್ಕೆ ಬದಲಾಗಿ ಇಲ್ಲಿರುವ ಸೂಕ್ಷ್ಮ ಜೀವಿಗಳು ಕೀಮೋಸಿಂಥೆಸಿಸ್ ಬಳಸಿ ಆಹಾರ ರೂಪಿಸುತ್ತಿದ್ದವು ಎಂಬುದಕ್ಕೆ ಸಾಕ್ಷ್ಯ ಸಿಕ್ಕಿವೆ. ಈ ಸೂಕ್ಷ್ಮ ಜೀವಿಗಳಿಂದಲೇ ಸುರುಳಿಯಾಕಾರದ ರಚನೆಗಳು ಸೃಷ್ಟಿಯಾಗಿವೆ ಎಂಬುದು ವಿಜ್ಞಾನಿಗಳ ವಾದ.
ಈ ಪಳೆಯುಳಿಕೆಗಳನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಂಶೋಧಕರು ಸುರುಳಿಯಾಕಾರದ ರಚನೆಗಳ ವಿನ್ಯಾಸಗಳನ್ನುಆಧುನಿಕ ಆಳ ಸಮುದ್ರದ ಸೂಕ್ಷ್ಮಜೀವಿಯ ಮ್ಯಾಟ್‌ಗಳೊಂದಿಗೆ ಹೋಲಿಸಿದ್ದಾರೆ. ಈ ಸೂಕ್ಷ್ಮಜೀವಿಗಳು ಸೂರ್ಯನ ಬೆಳಕಿನ ಬದಲು ಆಹಾರಕ್ಕಾಗಿ ರಾಸಾಯನಿಕ ಪ್ರತಿಕ್ರಿಯೆಗಳನ್ನು ಅವಲಂಬಿಸಿವೆ. ಆಧುನಿಕ ಮತ್ತು ಪ್ರಾಚೀನ ರಚನೆಗಳ ನಡುವಿನ ಹೋಲಿಕೆಗಳು ಜುರಾಸಿಕ್ ಸುಕ್ಕುಗಳು ಒಂದೇ ರೀತಿಯ ಜೈವಿಕ ಪ್ರಕ್ರಿಯೆಗಳ ಮೂಲಕ ರೂಪುಗೊಂಡವು ಎಂದು ಹೇಳಬಹುದು.
ಈ ಸುರುಳಿಯಾಕಾರದ ರಚನೆಗಳ ಅಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲ ಇರುವ ಕುರುಹುಗಳು ಪತ್ತೆಯಾಗಿವೆ. ROV ಮೂಲಕ ಇಂದಿನ ಸಮುದ್ರದಾಳದ 'ಹೈಡ್ರೋಥರ್ಮಲ್ ವೆಂಟ್‌ಗಳಲ್ಲಿ ಇದನ್ನು ನೋಡಿದಾಗ ಪ್ರಸ್ತುತ ಇರುವ ಸೂಕ್ಷ್ಮಜೀವಿಗಳ ಜಾಲಕ್ಕೂ ಮತ್ತು ಈ ಜುರಾಸಿಕ್ ಯುಗದ ಪಳೆಯುಳಿಕೆಗಳಿಗೂ ಸಾಮ್ಯತೆ ಇರುವುದು ಕಂಡುಬಂದಿದೆ.
ಈ ಸುರುಳಿಯಾಕಾರದ ರಚನೆಗಳ ಸಂರಕ್ಷಣೆ ಅವು ರೂಪುಗೊಂಡ ಕೆಸರಿನ ಪ್ರಕಾರದಿಂದಲೇ ಸಾಧ್ಯವಾಗಿದೆ. ರಚನೆಗಳು ಟರ್ಬಿಡೈಟ್ ನಿಕ್ಷೇಪಗಳಲ್ಲಿ ಸಂಭವಿಸುತ್ತವೆ. ಭೂಕುಸಿತ, ಸವೆತ ಮತ್ತು ಕೊಳೆಯುವಿಕೆಯಿಂದ ಸೂಕ್ಷ್ಮವಾದ ಸೂಕ್ಷ್ಮಜೀವಿಯ ವಿನ್ಯಾಸಗಳು ಆಮ್ಲಜನಕದ ಮಟ್ಟ ಕಡಿಮೆ ಇರುವ ಕಾರಣದಿಂದ ಸಂರಕ್ಷಿಸಲ್ಪಟ್ಟಿದೆ. ಕೆಲವು ರಚನೆಗಳು ಸಾಮಾನ್ಯವಾಗಿ ಹೆಚ್ಚು ಹಳೆಯ ಬಂಡೆಗಳೊಂದಿಗೆ ಸಂಬಂಧ ಹೊಂದಿವೆ. ಜುರಾಸಿಕ್ ಬಂಡೆಗಳಲ್ಲಿನ ಆವಿಷ್ಕಾರವು ಪ್ರಾಣಿಗಳ ಜೀವನವು ಪ್ರಬಲವಾದ ನಂತರವೂ ಕೆಲವು ಪರಿಸರಗಳಲ್ಲಿ ಸೂಕ್ಷ್ಮಜೀವಿಯ ಮ್ಯಾಟ್‌ಗಳು ಇನ್ನೂ ಅಸ್ತಿತ್ವದಲ್ಲಿವೆ ಎಂದು ತೋರಿಸುತ್ತದೆ.
ಈ ಆವಿಷ್ಕಾರವು ಬರೀ ಭೂಮಿಯ ಇತಿಹಾಸಕ್ಕೆ ಸೀಮಿತವಾಗಿಲ್ಲ. ಸೂರ್ಯನ ಬೆಳಕು ಇಲ್ಲದೆಯೂ ಜೀವಿಗಲೂ ಬದುಕಬಲ್ಲವು ಎನ್ನುವುದಕ್ಕೆ ಇದು ಪ್ರಮುಖ ಉದಾಹರಣೆಯಾಗಿದೆ. ಈ ಸೂಕ್ಷ್ಮ ಜೀವಿಗಳ ಬಗ್ಗೆ ಅಧ್ಯಯನ ಮಾಡುವ ಮೂಲಕ ವಿಜ್ಞಾನಿಗಳು ವಿಶ್ವದ ಯಾವ ಭಾಗದಲ್ಲಿ ಇಂಥಹ ಜೀವಿಗಳನ್ನು ಕಂಡುಹಿಡಿಯಬಹುದು ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ.
ಮೊರೊಕನ್ ಸುಕ್ಕುಗಟ್ಟಿದ ಪಳೆಯುಳಿಕೆಗಳು ಭೂಮಿಯ ಮೇಲಿನ ಪ್ರಾಚೀನ ಜೀವನವು ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ವೈವಿಧ್ಯಮಯವಾಗಿತ್ತು. ಸಮುದ್ರದಾಳದಲ್ಲಿಯೂ ಸಕ್ರಿಯವಾಗಿತ್ತು ಎನ್ನುವುದನ್ನು ಸಾಬೀತುಪಡಿಸಿದೆ.


Click it and Unblock the Notifications
