ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ನಿನಲ್ಲಿ ತಿಂಡಿಪೋತರ ಫೆವರಿಟ್ ಸಮೋಸಾ ಉತ್ಸವ

By Prasad
|
Google Oneindia Kannada News

ಲಂಡನ್, ಮಾರ್ಚ್ 22 : ಇಂದು ವಿಶ್ವ ನೀರು ದಿನ, ನಿನ್ನೆ ವಿಶ್ವ ಅರಣ್ಯ ದಿನ, ಮೊನ್ನೆ ವಿಶ್ವ ಸಂತಸದ ದಿನ. ಹೀಗೆ ಪ್ರತಿದಿನ ಏನಾದರೊಂದು ವಿಶೇಷ ದಿನವಿದ್ದೇ ಇರುತ್ತದೆ. ಈ ಆಚರಣೆಗಳಿಗೆ ಒಂದು ಅರ್ಥವಿದ್ದರೆ, ಸಾರ್ಥಕತೆಯಿದ್ದರೆ ಇನ್ನೂ ಚೆಂದ.

ಅದೇ ರೀತಿ, ತಿಂಡಿ ತಿನಿಸುಗಳಿಗೆ ಕೂಡ ಒಂದೊಂದು ದಿನವನ್ನು ಮೀಸಲಿಡಲಾಗಿದೆ. ಚಾಕಲೇಟಿಗೊಂದು ದಿನವಿದ್ದ ಹಾಗೆ, ಕಡ್ಲೆಕಾಯಿಗೊಂದು ದಿನವೂ ಇದೆ. ಬೇಕಿದ್ದರೆ ಗೂಗಲನ್ನು ಹುಡುಕಾಡಿ ನೋಡಿ. ಅದರಂತೆ, ತಿಂಡಿಪೋತರ ಫೆವರಿಟ್ ಆಗಿರುವ ಸಮೋಸಕ್ಕೂ ಒಂದು ದಿನವಲ್ಲ, ಒಂದಿಡೀ ವಾರವನ್ನು ಮೀಸಲಿಡಲಾಗಿದೆ.

2017ರ ಫೇವರಿಟ್ : ಚಿಕನ್ ಬಿರಿಯಾನಿಗೆ ಚಿನ್ನ, ಮಸಾಲೆ ದೋಸೆಗೆ ಬೆಳ್ಳಿ2017ರ ಫೇವರಿಟ್ : ಚಿಕನ್ ಬಿರಿಯಾನಿಗೆ ಚಿನ್ನ, ಮಸಾಲೆ ದೋಸೆಗೆ ಬೆಳ್ಳಿ

ಸಮೋಸಾದ ಮೂಲ ಯಾವುದು ಯಾರಿಗ್ಗೊತ್ತು? ಆದರೂ ಏಷ್ಯಾದಲ್ಲಿ ಅಂತ್ಯಂತ ಜನಪ್ರಿಯವಾಗಿರುವ ಈ ಜಾಗತಿಕ ತಿನಿಸಿನ ಬಗ್ಗೆ ಜಾಗೃತಿ ಮೂಡಿಸಲು, ಅದರ ಹಿಂದಿನ ಸಂಸ್ಕೃತಿ ಮತ್ತು ರುಚಿಯ ಗುಟ್ಟನ್ನು ತಿಳಿಸಲು ಲಂಡನ್ ನ ಲೀಸೆಸ್ಟರ್ ನಲ್ಲಿ ಹಬ್ಬವನ್ನೇ ಹಮ್ಮಿಕೊಳ್ಳಲಾಗಿದೆ.

Week long Samosa festival in London

ಸಮೋಸಾ ಹೆಸರು ಕೇಳಿದ ಕೂಡಲೆ ಕೆಲವರ ಬಾಯಲ್ಲಿ ನೀರೂರಲು ಆರಂಭಿಸಿರುತ್ತದೆ, ಕೆಲವರ ಹೊಟ್ಟೆ ಚುರುಗುಟ್ಟಲು ಶುರುವಾಗಿರುತ್ತದೆ. ಸಖತ್ತಾಗಿ ಕರಿದ ಗರಿಗರಿ ಸಮೋಸಾದಲ್ಲಿರುವ ರುಚಿಯೇ ಅಂತಹುದು. ಆದ್ದರಿಂದ ಏಪ್ರಿಲ್ 9ರಿಂದ 13ರವರೆಗೆ ಲೀಸೆಸ್ಟರ್ ಕರಿ ಅವಾರ್ಡ್ಸ್ ಸಮೋಸಾ ಫೆಸ್ಟಿವಲ್ ಆಯೋಜಿಸಿದೆ.

ಬರ್ಗರ್ ನಿಂದ ಹಿಡಿದು ಬಿಯರ್ ವರೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಉತ್ಸವ ಆಚರಿಸಲಾಗುತ್ತದೆ. ಹೀಗಾಗಿ, ಆಲೂಗಡ್ಡೆಯನ್ನು ಹೊಟ್ಟೆ ತುಂಬ ತುಂಬಿಕೊಂಡು, ತಿಂಡಿಪೋತರ ಹೊಟ್ಟೆಯನ್ನೂ ತುಂಬಿಸುವ ಸಮೋಸಾ ಉತ್ಸವ ಏಕೆ ಆಚರಿಸಬಾರದು ಎಂದು ರೊಮೇಲ್ ಗುಲ್ಜಾರ್ ಎಂಬುವವರಿಗೆ ಹೊಳೆದ ಐಡಿಯಾ ಫಲವಾಗಿಯೇ ಈ ಉತ್ಸವ ಆಯೋಜನೆಯಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸಮೋಸಾವನ್ನು ಆಲೂಗಡ್ಡೆಯಲ್ಲಿ ಮಾತ್ರವಲ್ಲ, ಮಟನ್ ನಿಂದಲೂ ತಯಾರಿಸುತ್ತಾರೆ. ಒಂದು ಅಂದಾಜಿನ ಪ್ರಕಾರ, ಸಂಬೋಸಗ್ ಅಥವಾ ಸಂಬೋಸಾ ಎಂದು ಪರ್ಶಿಯನ್ ಭಾಷೆಯಲ್ಲಿ ಸಮೋಸಾವನ್ನು ಕರೆಯುತ್ತಾರೆ. 9ನೇ ಶತಮಾನದ ಕವನವೊಂದರಲ್ಲಿ ಈ ಸ್ವಾದಿಷ್ಟಕರ ತಿನಿಸಿನ ಉಲ್ಲೇಘವಿದೆ. 10ನೇ ಶತಮಾನದಲ್ಲಿ ಸಮೋಸಾದ ತಿನಿಸಿನ ವಿವರಗಳಿರುವ ಪುಸ್ತಕ ಕೂಡ ಬಂದಿದ್ದವು.

ನಮ್ಮೂರಿನ ಇಟ್ಟುಮುನಿಗ, ಮುದ್ದಿಗಳ ಸೊಣ್ಣಪ್ಪರ ಊಟದ ಸಾಹಸಗಳುನಮ್ಮೂರಿನ ಇಟ್ಟುಮುನಿಗ, ಮುದ್ದಿಗಳ ಸೊಣ್ಣಪ್ಪರ ಊಟದ ಸಾಹಸಗಳು

English summary
If there can be events and days dedicated to chocolates and cheese, why can't we celebrate the mouth watering samosa? A National Samosa Week has been launched in England's Leicester city to create an awareness about South Asian food and culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X