Watch: ಸೈನಿಕರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಕೀವ್, ಮಾರ್ಚ್ 13: ರಷ್ಯಾದ ಆಕ್ರಮಣದ ವಿರುದ್ಧ ಕಾರ್ಯತಂತ್ರವನ್ನು ರೂಪಿಸುವುದರ ಮಧ್ಯೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶದ ನಾಗರಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕಾಯಕ ಮಾಡುತ್ತಿದ್ದಾರೆ. ಇಂಥ ಪ್ರಯತ್ನ ಭಾಗವಾಗಿ ಝೆಲೆನ್ಸ್ಕಿ ವಿನೂತನ ಹೆಜ್ಜೆ ಇಟ್ಟಿದ್ದಾರೆ.

ಭಾನುವಾರ ಯುದ್ಧದಲ್ಲಿ ಗಾಯಗೊಂಡ ಉಕ್ರೇನಿಯನ್ ಸೈನಿಕರನ್ನು ಭೇಟಿ ಮಾಡುವುದಕ್ಕಾಗಿ ಆಸ್ಪತ್ರೆಗೆ ತೆರೆಳಿದ ವೊಲೊಡಿಮಿರ್ ಝೆಲೆನ್ಸ್ಕಿ, ದೇಶಕ್ಕಾಗಿ ಅವರ ಸಲ್ಲಿಸಿದ ಸೇವೆಯನ್ನು ಗೌರವಿಸುವ ದೃಷ್ಟಿಯಿಂದ ಪದಕಗಳನ್ನು ನೀಡಿದರು.

ಉಕ್ರೇನ್‌ನ ರಕ್ಷಣಾ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಭಾನುವಾರ ರಷ್ಯಾದ ಪಡೆಗಳ ವಿರುದ್ಧ ಹೋರಾಡುವಾಗ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಭದ್ರತಾ ಸಿಬ್ಬಂದಿಯೊಂದಿಗೆ ಝೆಲೆನ್ಸ್ಕಿ ಮಾತನಾಡುತ್ತಿರುವುದು ಮತ್ತು ಸೆಲ್ಫಿ ಕ್ಲಿಕ್ಕಿಸುತ್ತಿರುವ ಚಿತ್ರಗಳನ್ನು ಶೇರ್ ಮಾಡಲಾಗಿದೆ.

ಮರಿಯುಪೋಲ್ ನೆಲದಲ್ಲಿ ಮೃತದೇಹಗಳ ಸಮಾಧಿ:

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಈಗಾಗಲೇ 18ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ನ ಕಳೆದ 12 ದಿನಗಳಲ್ಲೇ 1500ಕ್ಕೂ ಹೆಚ್ಚು ಜನ ಪ್ರಾಣ ಬಿಟ್ಟಿದ್ದು, ಮರಿಯೋಪೋಲ್ ನಗರದಲ್ಲಿ 1582 ಮೃತದೇಹಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ. "ಇದೆಲ್ಲವೂ ಕೊನೆ ಆಗಬೇಕು ಎಂದು ನಾನು ಬಯಸುತ್ತೇನೆ. ಇಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಎಂಬುದು ನನಗೆ ಗೊತ್ತಿಲ್ಲ. ಇದನ್ನು ಶುಕು ಮಾಡಿದ್ದು ಯಾರು ಎಂಬುದೂ ನನಗೆ ತಿಳಿದಿಲ್ಲ, ಆದರೆ ಇದೆಲ್ಲವೂ ಕೊನೆಯಾಗಬೇಕು," ಎಂದು ಶವಗಳನ್ನು ಹೂಳಲು ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡಿದ ಸಾಮಾಜಿಕ ಸೇವಾ ಕಾರ್ಯಕರ್ತ ವೊಲೊಡಿಮಿರ್ ಬೈಕೊವ್ಸ್ಕಿ ಹೇಳಿದ್ದಾರೆ.

Watch: Ukraine President Volodymyr Zelenskyy Visits Hospital for Meet Wounded Soldiers in War

ರಷ್ಯಾ ಶೆಲ್ ದಾಳಿ ಸೃಷ್ಟಿಸಿದ ಭೀಕರತೆ ಚಿತ್ರಣ:

ರಷ್ಯಾ ನಡೆಸಿದ ಶೆಲ್ ದಾಳಿಯಿಂದ ಮರಿಯೋಪೋಲ್ ನಗರದಲ್ಲಿ ನೀರಿನ ಸರಬರಾಜು ಕಟ್ ಆಗಿದೆ. ನಗರದಲ್ಲಿ ಬೃಹತ್ ಕಟ್ಟಡಗಳು, ವಸತಿ ಗೃಹಗಳು ಧರೆಗೆ ಉರುಳಿವೆ. ಆಸ್ಪತ್ರೆಗಳು ಮತ್ತು ರಸ್ತೆಗಳು ನಾಶವಾಗಿವೆ. ಈ ಯುದ್ಧ ಸನ್ನಿವೇಶದ ನಡುವೆಯೂ ಉಕ್ರೇನಿಗರು ತಮ್ಮ ದೇಶ ಮತ್ತು ಪ್ರಜೆಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಪರಸ್ಪರ ಸಹಾಯ ಮಾಡಿಕೊಳ್ಳುತ್ತಿದ್ದಾರೆ.

Watch: Ukraine President Volodymyr Zelenskyy Visits Hospital for Meet Wounded Soldiers in War

"ಯುದ್ಧದಿಂದಾಗಿ ಹಾಲಿನ ಉತ್ಪಾದನೆ ಮತ್ತು ಕೃಷಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ನಮಗೆ ಕೃಷಿ ಉತ್ಪಾದನೆಗೆ ಅಗತ್ಯ ಬೀಜ, ಇಂಧನ ಮತ್ತು ರಸಗೊಬ್ಬರಗಳು ಬೇಕಾಗುತ್ತವೆ. ಬಹುಪಾಲು ರಸ್ತೆಗಳನ್ನು ಮುಚ್ಚಲಾಗಿದ್ದು, ವಿಶ್ವಾಸಾರ್ಹ ಮೂಲಗಳು ಬೇಕಾಗುತ್ತವೆ," ಎಂದು ಉಕ್ರೇನಿಯನ್ ರೈತ ಪೆಟ್ರೋ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+