Get Updates
Get notified of breaking news, exclusive insights, and must-see stories!

ಅಮೆರಿಕ ಪೂರ್ವ ಕಡಲ ತೀರವನ್ನು ಅಪ್ಪಳಿಸಲಿದೆ ಫ್ಲೋರೆನ್ಸ್ ಚಂಡಮಾರುತ

ವಾಷಿಂಗ್ಟನ್, ಸೆಪ್ಟೆಂಬರ್ 11: ಅಮೆರಿಕದ ಪೂರ್ವ ಕಡಲ ತೀರವನ್ನು ಅಪ್ಪಳಿಸಲಿರುವ 'ಫ್ಲೋರೆನ್ಸ್' ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ವಾಷಿಂಗ್ಟನ್ ನ ಮೇಯರ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಈ ಚಂಡಮಾರುತ ದಿಗ್ಭ್ರಮೆ ಹುಟ್ಟಿಸುವಂಥ ಅನಾಹುತಗಳನ್ನು ಮಾಡಬಹುದು ಎಂದು ರಾಷ್ಟ್ರೀಯ ಚಂಡಮಾರುತ ಕೇಂದ್ರದ ನಿರ್ದೇಶಕ ಕೆನ್ ಗ್ರಹಾಮ್ ಎಚ್ಚರಿಸಿದ್ದಾರೆ.

ಸದ್ಯ ಇದು ಬರ್ಮುಡಾದ ದಕ್ಷಿಣಕ್ಕೆ ನಾನೂರು ಮೈಲಿ ದೂರದಲ್ಲಿದ್ದು, ಗಂಟೆಗೆ 26 ಕಿ.ಮೀ. ವೇಗದಲ್ಲಿ ಸಾಗುತ್ತಿದೆ. ಗುರುವಾರ, ಶುಕ್ರವಾರ ಹಾಗೂ ಶನಿವಾರದಂದು ಹಲವು ರಾಜ್ಯಗಳಲ್ಲಿ ಜೀವಕ್ಕೆ ಹಾನಿ ಮಾಡಬಲ್ಲಂಥ ಪ್ರವಾಹ ಸ್ಥಿತಿ ಏರ್ಪಡಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಉತ್ತರ ಕರೋಲಿನಾ ಹಾಗೂ ವರ್ಜಿನಿಯಾದಲ್ಲಿ ಇನ್ನು ಒಂದು ವಾರ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಆದರೆ ಇನ್ನೂ ಕೆಲವೆಡೆ ಅದಕ್ಕಿಂತಲೂ ದೊಡ್ಡ ಪ್ರಮಾಣದ ಮಳೆ ಹಾಗೂ ಸಮುದ್ರದ ಅಲೆಗಳ ಉಬ್ಬರ, ಅದೂ ಹನ್ನೆರಡು ಅಡಿ ಎತ್ತರಕ್ಕೂ ಮೇಲ್ಪಟ್ಟು ಕಾಣಿಸಿಕೊಳ್ಳಬಹುದು ಎಂದು ಮುಂಜಾಗ್ರತೆಯಾಗಿ ತಿಳಿಸಲಾಗಿದೆ.

Hurricane

ಉತ್ತರ ಹಾಗೂ ದಕ್ಷಿಣ ಕರೋಲಿನಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಸರಕಾರದಿಂದ ಎಲ್ಲ ನೆರವು ನೀಡಲು ನಿರ್ಧರಿಸಿದ್ದು, ಗುರುವಾರ ಹಾಗೂ ಶುಕ್ರವಾರದಂದು ನಿಗದಿಯಾಗಿದ್ದ ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ.

ಎಲ್ಲಕ್ಕೂ ಸಿದ್ಧವಾಗಿರಿ, ಎಚ್ಚರವಾಗಿರಿ ಹಾಗೂ ಸುರಕ್ಷಿತವಾಗಿರಿ. ನಾವು ನಿಮಗಾಗಿಯೇ ಇದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ದಕ್ಷಿಣ ಕರೋಲಿನಾದ ಗವರ್ನರ್, ಕಡಲ ಪ್ರದೇಶದಲ್ಲಿ ಒಟ್ಟಾರೆಯಾಗಿ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಹತ್ತು ಲಕ್ಷ ಮಂದಿ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ತೆರಳುತ್ತಿದ್ದಾರೆ. ವರ್ಜಿನಿಯಾ, ಉತ್ತರ ಕರೋಲಿನಾ ಕಡಲ ತೀರದಲ್ಲೂ ಜನರ ಸ್ಥಳಾಂತರ ಮಾಡಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+