War: ವಿಶ್ವಸಂಸ್ಥೆ ತುರ್ತು ಸಭೆ: ಇರಾನ್ ಮೇಲಿನ ಜಂಟಿ ವೈಮಾನಿಕ ದಾಳಿಗೆ ಬೀಳುತ್ತಾ ಬ್ರೇಕ್
Middle East War UN reaction: ಇರಾನ್ ಮೇಲೆ ಮೊದಲು ಇಸ್ರೇಲ್ ನಂತರ ಯುಎಸ್ ನಡೆಸಿದ ವೈಮಾನಿಕ ದಾಳಿಯು ಜಾಗತಿಕವಾಗಿ ಗಮನ ಸೆಳೆದಿದೆ. ಈ ಯುದ್ಧವು ಕೇವಲ ಮೂರು ರಾಷ್ಟ್ರಗಳಿಗೆ ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ವಿಶ್ವಸಂಸ್ಥೆ (United Nation) ಇಂದಿನ ಬೆಳವಣಿಗೆಯನ್ನು ಖಂಡಿಸಿ ತುರ್ತು ಸಭೆ ಕರೆದಿದೆ. ತಡವಾದರೂ ಸಹಿತ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಕರೆದಿದೆ.
ಯುಕೆ ಸಮಯ ಪ್ರಕಾರ ಇಂದು 21:00 ಗಂಟೆಗೆ ತುರ್ತು ಸಭೆ ಕರೆದಿದೆ. ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ "ಮಧ್ಯಪ್ರಾಚ್ಯದಲ್ಲಿ ಇಂದಿನ ಮಿಲಿಟರಿ ಕ್ರಮ"ವನ್ನು ಖಂಡಿಸಿದ್ದಾರೆ. ಬಳಿಕ ತುರ್ತು ಸಭೆ ಕರೆದಿದ್ದಾರೆ. ಮಹತ್ವ ವಿಚಾರಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ. ಸಭೆಯ ಸಂಪೂರ್ಣ ಮಾಹಿತಿ ಭಾನುವಾರ ಹೊರ ಬರುವ ಸಾಧ್ಯತೆ ಇದೆ.

ಜಾಗತಿಕ ಮಟ್ಟದಲ್ಲಿ ಶಾಂತಿ-ಭದ್ರತೆ ಹಾಳು
ಇಸ್ರೇಲ್ ಹಾಗೂ ಯುಎಸ್ ಇರಾನ್ ಮೇಲೆ ನಡೆಸಿದ ಜಂಟಿ ಯುದ್ಧ ಹಾಗೂ ಪ್ರತಿ ದಾಳಿಯಂತಹ ಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಹಾಳು ಮಾಡುತ್ತವೆ. ಈ "ಹಗೆತನವನ್ನು ತಕ್ಷಣವೇ ನಿಲ್ಲಿಸಲು" ವಿಶ್ವಸಂಸ್ಥೆ ಕರೆ ನೀಡಿದೆ. ಪ್ರಮುಖ ಅಂತಾರಾಷ್ಟ್ರೀಯ ಬಿಕ್ಕಟ್ಟುಗಳ ಸಮಯದಲ್ಲಿ ಭದ್ರತಾ ಮಂಡಳಿಯ ತುರ್ತು ಸಭೆ ಹೆಚ್ಚಿನ ಮಹತ್ವ ಪಡೆಯುತ್ತದೆ. ಯುದ್ಧ ಮುಂದುವರಿದರೆ ಅದರಿಂದ ಜಾಗತಿಕವಾಗಿ ಉಂಟು ಮಾಡುವ ಪರಿಣಾಮಕ್ಕೆ ಅನುಗುಣವಾಗಿ ರಾಜತಾಂತ್ರಿಕ ದೃಷ್ಟಿಯಿಂದ ಈ ಸಭೆ ಕರೆದಿದೆ.
ಶಾಶ್ವತ ಸದಸ್ಯರ ನಡುವಿನ ವಿಭಜನೆಯಿಂದಾಗಿ ತ್ವರಿತ ಕಾರ್ಯಾಚರಣೆಯು ಕೆಟ್ಟ ಫಲಿತಾಂಶಗಳನ್ನು ನೀಡುತ್ತವೆ. ಯುದ್ಧ ಕುರಿತ ಔಪಚಾರಿಕ ಹೇಳಿಕೆಗಳು, ರಾಜತಾಂತ್ರಿಕ ಒತ್ತಡ ಮತ್ತು ಸಂಭಾವ್ಯ ನಿರ್ಣಯಗಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ತಿಳಿಸಿದೆ. ಈ ಮೂಲಕ ಯುದ್ಧಕ್ಕೆ ಬ್ರೇಕ್ ಹಾಕಲು ವಿಶ್ವಸಂಸ್ಥೆ ಮುಂದಾಗಿರುವುದು ಇಂದಿನ ಸಭೆಯಿಂದ ಸ್ಪಷ್ಟವಾಗಿದೆ.
ಇರಾನ್‌ನ ಇಬ್ಬರು ಬಲಿಷ್ಠ ನಾಯಕರ ಸಾವು
ಇರಾನ್ ಮೇಲೆ ಇಂದಿನ ಇಸ್ರೇಲ್ ಮತ್ತು ಯುಎಸ್ ಜಂಟಿ ವೈಮಾನಿಕ ದಾಳಿಯಿಂದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಮೊಹಮ್ಮದ್ ಪಕ್ಪೌರ್ ಹಗೂ ಇರಾನ್ ರಕ್ಷಣಾ ಸಚಿವ ಮೇಜರ್ ಜನರಲ್ ಅಮೀರ್ ಹತಾಮಿ ಅವರು ಬಲಿಯಾಗಿದ್ದಾರೆ. ಇದರಿಂದ ಇರಾನ್ ಮತ್ತಷ್ಟು ಕೆರಳಿದೆ. ಒಂದೆಡೆ ಇರಾನ್ ಪ್ರತಿ ದಾಳಿ ಮುಂದುವರಿಸಿದೆ. ಇನ್ನೊಂದೆಡೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ವೈಮಾನಿಕ ದಾಳಿಯಿಂದ ಹಿಂದೆ ಸರಿಯುವ ಬಗ್ಗೆ ಸ್ಪಷ್ಟತೆ ಇಲ್ಲ. ಯುದ್ಧ ಹೀಗೆ ಮುಂದುವರಿದೆ ಭಾರೀ ಬೆಲೆ ತೆರಬೇಕಾಗುತ್ತದೆ. ಈ ಕಾರಣದಿಂದಾಗಿ ಯುದ್ಧ ಜಾಗತಿಕವಾಗಿ ತೀವ್ರ ಹಾನಿ ಉಂಟು ಮಾಡುವ ಸಂಭವವಿದೆ. ಇದರಿಂದ ಭಾರತದ ಮೇಲೂ ತನ್ನದೇ ಆದ ರೀತಿಯಲ್ಲಿ ಪರಿಣಾಮ ಉಂಟಾಗಲಿದೆ. ಹೀಗಾಗಿ ಭಾರತ ಶಾಂತಿಯಿಂದಿರಲು ಮೂರು ರಾಷ್ಟ್ರಗಳಿಗೂ ಕರೆ ನೀಡಿದೆ. ಈ ಮೂಲಕ ಭಾರತ ಜಾಗತಿಕ ಮೆಚ್ಚುಗೆಗೆ ಕಾರಣವಾಗಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications