• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಡೋನೇಷಿಯಾ ಸುನಾಮಿಗೆ ಅಗ್ನಿಪರ್ವತ, ಹುಣ್ಣಿಮೆ ಸೆಳೆತ ಕಾರಣ!

|

ಜಕಾರ್ತ, ಡಿಸೆಂಬರ್ 23: ಇಲ್ಲಿನ ಜಾವಾ ಸುಮಾತ್ರ ದ್ವೀಪದ ನಡುವೆ ಇರುವ ಕ್ರಕಟೋವಾ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಸುನಾಮಿ ಉಂಟಾಗಿದೆ.

ಸುನಾಮಿ ಅಬ್ಬರಕ್ಕೆ ತತ್ತರಿಸಿದ ಸುಂದಾ ಜಲಸಂಧಿ, ಕನಿಷ್ಠ 43 ಮಂದಿ ಸಾವು

ಹುಣ್ಣಿಮೆ ದಿನವಾದ್ದರಿಂದ ಶನಿವಾರ ರಾತ್ರಿ ಸಮುದ್ರದ ಏರಿಳಿತ ಹೆಚ್ಚಳವಾಗಿರುವುದು ಕೂಡಾ ಸುನಾಮಿಗೆ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸುಮಾತ್ರದ ದಕ್ಷಿಣ ಲಂಪುಂಗ್, ಜಾವಾದ ಸೆರಾಂಗ್, ಪಂಡೆಗ್ಲಾಂಗ್ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ ದಾಖಲಾಗಿದೆ. ಸುನಾಮಿಗೆ ಸಿಲುಕಿ ಕನಿಷ್ಟ 43 ಮಂದಿ ಸಾವನ್ನಪ್ಪಿದ್ದು, 600ಕ್ಕೂ ಹೆಚ್ಚಿನ ಮಂದಿಗೆ ಗಾಯವಾಗಿರುವ ಘಟನೆ ನಡೆದಿದೆ. ಹಲವಾರು ಕಟ್ಟಡಗಳು ನೆಲಸಮವಾಗಿವೆ.

ವಿಪತ್ತು ನಿರ್ವಹಣಾ ತಂಡಗಳು ಎಲ್ಲೆಡೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಅನೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗುತ್ತಿದ್ದು,ತೀರ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯುವ ಕಾರ್ಯ ನಡೆಯುತ್ತಿದೆ.

English summary
At least 43 people have been killed and 165 injured after a tsunami hit the coast around Indonesia's Sunda Strait, government officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X