Us Elections: ಅಮೆರಿಕ ಚುನಾವಣೆಯಲ್ಲಿ ಭಾರತೀಯರದ್ದೇ ಸದ್ದು, ಉಪಾಧ್ಯಕ್ಷ ಭಾರತದ ಅಳಿಮಯ್ಯ!
US election: ಅಮೆರಿಕ ಅಧ್ಯಕ್ಷೀಯ ಚುನಾವಣೆ ಮಹಾ ಸಮರ ಮುಕ್ತಾಯವಾಗಿದೆ. ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಗದ್ದುಗೆ ಹೇರುತ್ತಿದ್ದಾರೆ. ಈ ಬಾರಿಯ ರಿಪಬ್ಲಿಕನ್ ಪಕ್ಷದ ಗೆಲುವು ಭಾರತದಲ್ಲೂ ಸಂತೋಷಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ ಕರ್ನಾಟಕದ ನೆರೆಯ ರಾಜ್ಯದ ನಂಟೊಂದು ಬೆಸೆದುಕೊಂಡಿದೆ. ಇದು ಸಹಜವಾಗಿಯೇ ಭಾರತೀಯರಲ್ಲೂ ಸಂತೋಷವನ್ನು ಉಂಟು ಮಾಡಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭಾರತದ ಅಳಿಯ ಎನ್ನುವುದು ಇದಕ್ಕೆ ಕಾರಣವಾಗಿದೆ.
ಹೌದು, ಅಮೆರಿಕದಲ್ಲಿ ಭಾರತೀಯರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ದಕ್ಷಿಣ ಭಾರತೀಯ ಹಾಗೂ ತೆಲುಗು ಭಾಷಿಕರ ಸಂಖ್ಯೆ ಹೆಚ್ಚಳವಾಗ್ತಿದೆ ಎನ್ನುತ್ತದೆ ಅಂಕಿ - ಅಂಶ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅಧ್ಯಕ್ಷರಿಗೆ ಅನಾರೋಗ್ಯ ಅಥವಾ ಅಕಾಲಿಕ ನಿಧನ ಇಲ್ಲವೇ ಮತ್ಯಾವುದೋ ತುರ್ತು ಪರಿಸ್ಥಿತಿಗಳು ಎದುರಾದರೆ, ಆ ಸಂದರ್ಭದಲ್ಲಿ ಅಧ್ಯಕ್ಷರ ಸ್ಥಾನವನ್ನು ಉಪಾಧ್ಯಕ್ಷರು ತುಂಬುತ್ತಾರೆ. ಅಂದರೆ, ಅಧ್ಯಕ್ಷರ ಜವಾಬ್ದಾರಿಗಳನ್ನು ಉಪಾಧ್ಯಕ್ಷರು ನಿರ್ವಹಿಸುತ್ತಾರೆ.

ಈ ಬಾರಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಸ್ಪರ್ಧೆ ಮಾಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಡಿ ವ್ಯಾನ್ಸ್ ಅವರು ಸ್ಪರ್ಧೆ ಮಾಡಿದ್ದರು. ಈಗ ಅವರು ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೆ.ಡಿ ವ್ಯಾನ್ಸ್ ಅವರು ಆಂಧ್ರಪ್ರದೇಶದ ಅಳಿಯ! ಅವರ ಪತ್ನಿ ಉಷಾ ಚಿಲುಕುರಿ ತೆಲುಗು ದಂಪತಿ (ವಲಸಿಗರ) ಮಗಳು.
ಆಂಧ್ರಪ್ರದೇಶದಲ್ಲಿ ಸಂಭ್ರಮಾಚರಣೆ: ಜೆ.ಡಿ ವ್ಯಾನ್ಸ್ ಅವರು ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಆಂಧ್ರಪ್ರದೇಶದಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ. ಚಿಲುಕುರಿ ಕುಟುಂಬದವರು ಆಂಧ್ರಪ್ರದೇಶದ ಪಶ್ವಿಮ ಗೋದಾವರಿ ಜಿಲ್ಲೆಯ ವಡ್ಲೂರಿಗೆ ಸೇರಿದವರು ಎಂದು ಹೇಳಲಾಗಿದೆ. ಇದೀಗ ಆಂಧ್ರಪ್ರದೇಶದಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ.
My hearty congratulations to President-elect @RealDonaldTrump for a historic triumph as he takes charge as the 47th President of the United States.
— Lokesh Nara (@naralokesh) November 6, 2024
This is a very special moment for the people of Andhra Pradesh, esp. West-Godavari district, as @JDVance is elected…
ಉಪಾಧ್ಯಕ್ಷ ಹುದ್ದೆಗೆ ವ್ಯಾನ್ಸ್ ಅವರು ಆಯ್ಕೆಯಾದ ಬೆನ್ನಲ್ಲೇ ಈ ದಂಪತಿಗಳ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಡೊನಾಲ್ಡ್ ಟ್ರಂಪ್ ಅವರು ಈ ಪೋಟೊಗಳನ್ನು ವ್ಯಾಪಕವಾಗಿ ಹಂಚಿಕೊಂಡಿದ್ದರು.
ಅಭಿನಂದನೆ: ಆಂಧ್ರಪ್ರದೇಶದ ಐ.ಟಿ ಸಚಿವ ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮಗ, ನಾರಾ ಲೋಕೇಶ್ ಅವರು ಡೊನಾಲ್ಡ್ ಟ್ರಂಪ್ ಹಾಗೂ ವ್ಯಾನ್ಸ್‌ಗೆ ಶುಭಕೋರಿದ್ದಾರೆ. ವ್ಯಾನ್ಸ್ ಆಂಧ್ರಪ್ರದೇಶದ ಅಳಿಯ ಎನ್ನುವುದು ವಿಶೇಷ. ಇದು ಆಂಧ್ರಪ್ರದೇಶದ ಜನತೆಗೆ ವಿಶೇಷ ದಿನವಾಗಿದೆ ಎಂದು ಲೋಕೇಶ್ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಆಂಧ್ರಪ್ರದೇಶದಲ್ಲಿ ತೆಲುಗು ಭಾಷಿಕರ ಸಂಖ್ಯೆ ಹೆಚ್ಚಳ
ಇನ್ನು ಆಂಧ್ರಪ್ರದೇಶದಲ್ಲಿ ತೆಲುಗು ಭಾಷಿಕರ ಸಂಖ್ಯೆ ಇತ್ತೀಇನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ 8 ವರ್ಷಗಳಲ್ಲಿ 12.3 ಲಕ್ಷಕ್ಕೂ ಹೆಚ್ಚು ತೆಲುಗು ಭಾಷಿಕರು ಅಲ್ಲಿದ್ದಾರೆ. ತೆಲುಗು ಈಗ ಅಮೆರಿಕದಲ್ಲಿ ಹೆಚ್ಚು ಮಾತನಾಡುವ 11ನೇ ವಿದೇಶಿ ಭಾಷೆಯಾಗಿದೆ. ಅಲ್ಲದೇ ತೆಲುಗು ಅಮೆರಿಕದಲ್ಲಿ ಮೂರನೇ ಅತಿ ಹೆಚ್ಚು ಮಾತನಾಡುವ ಭಾರತೀಯ ಭಾಷೆಯಾಗಿದೆ.












Click it and Unblock the Notifications