Putin India Visit: ಭಾರತಕ್ಕೆ ಬರಲಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್!
ಭಾರತ & ರಷ್ಯಾದ ನಡುವೆ ಅತ್ಯುತ್ತಮ ಸಂಬಂಧ ಇದ್ದು, ಎರಡೂ ದೇಶಗಳು ಸಾವಿರಾರು ವರ್ಷಗಳಿಂದ ವ್ಯಾಪಾರ ಸಂಬಂಧ ಹೊಂದಿವೆ. ಅದರಲ್ಲೂ ಆಧುನಿಕ ಕಾಲದಲ್ಲಿ ಭಾರತ & ರಷ್ಯಾ ಸಹೋದರ ದೇಶಗಳೇ ಆಗಿವೆ. ಹೀಗಿದ್ದಾಗ, ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿದ ನಂತರ ಭಾರಿ ದೊಡ್ಡ ಸಮಸ್ಯೆ ಎದುರಾಗಿತ್ತು. ರಷ್ಯಾ ವಿಲವಿಲ ಒದ್ದಾಡುವ ಈ ಸಮಯದಲ್ಲೇ ಭಾರತ ದೊಡ್ಡ ಮಟ್ಟದ ಸಹಾಯ ಮಾಡುತ್ತಿದೆ. ಇಷ್ಟೆಲ್ಲದರ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಬರುವುದು ಗ್ಯಾರಂಟಿ ಆಗಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ನಂತರ, ವ್ಲಾದಿಮಿರ್ ಪುಟಿನ್ ಅವರ ಜೀವಕ್ಕೂ ಕಂಟಕ ಎದುರಾಗಿದೆ. ನೇರವಾಗಿ ವ್ಲಾದಿಮಿರ್ ಪುಟಿನ್ ಅವರ ಸರ್ಕಾರಿ ನಿವಾಸದ ಮೇಲೇ ದಾಳಿ ಮಾಡಿ ಹತ್ಯೆ ಮಾಡಲು ಪ್ರಯತ್ನ ಮಾಡಿದ್ದ ಆರೋಪ ಉಕ್ರೇನ್ ವಿರುದ್ಧ ಇದೆ. ಈ ಕಾರಣಕ್ಕೇ ವ್ಲಾದಿಮಿರ್ ಪುಟಿನ್ ರಷ್ಯಾ ಬಿಟ್ಟು ಹೊರಗೆ ಎಲ್ಲೂ ಬಂದಿರಲಿಲ್ಲ. ಹಾಗೇ ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್ ಕೂಡ ಬಂಧನ ವಾರಂಟ್ ನೀಡಿತ್ತು. ಇದೆಲ್ಲವನ್ನೂ ಅಳೆದು ತೂಗಿ ವ್ಲಾದಿಮಿರ್ ಪುಟಿನ್ ರಷ್ಯಾ ಬಿಟ್ಟು ಹೊರಗೆ ಕಾಲಿಟ್ಟಿಲ್ಲ. ಆದರೆ ಇದೀಗ ಅವರು ಭಾರತಕ್ಕೆ ಬರಲು ಸಿದ್ಧತೆ ನಡೆಸಿದ್ದಾರೆ.

ವ್ಲಾದಿಮಿರ್ ಪುಟಿನ್ ಭಾರತಕ್ಕೆ ಎಂಟ್ರಿ!
ಭಾರತದ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಆಹ್ವಾನ ನೀಡಿದ್ದರು. 2024ರ ಜುಲೈ ತಿಂಗಳಲ್ಲಿ ರಷ್ಯಾಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಷ್ಯಾ ಅಧ್ಯಕ್ಷರ ಜೊತೆ ಮಹತ್ವದ ಚರ್ಚೆ ನಡೆಸಿದ್ದರು. ಅಲ್ಲದೆ ಇದೇ ಸಮಯದಲ್ಲಿ, ಭಾರತಕ್ಕೆ ಬನ್ನಿ ಎಂದು ಆಹ್ವಾನ ಕೂಡ ನೀಡಿದ್ದರು. ಹೀಗೆ ಭಾರತದ ಪ್ರಧಾನಿ ನೀಡಿರುವ ಆಹ್ವಾನ ಸ್ವೀಕಾರ ಮಾಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಿಲಿದ್ದಾರಂತೆ.
ರಷ್ಯಾ ವಿದೇಶಾಂಗ ಸಚಿವರು ಹೇಳಿದ್ದೇನು?
ವ್ಲಾದಿಮಿರ್ ಪುಟಿನ್ ಈಗ ಭಾರತಕ್ಕೆ ಬರುವ ವಿಚಾರವನ್ನು ಖುದ್ದಾಗಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಕನ್ಫರ್ಮ್ ಮಾಡಿದ್ದಾರೆ. ರಷ್ಯಾ & ಭಾರತದ ದ್ವಿಪಕ್ಷೀಯ ಸಂಬಂಧ ಕುರಿತಾದ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್, ಭಾರತಕ್ಕೆ ಬರಲು ವ್ಲಾದಿಮಿರ್ ಪುಟಿನ್ ಅವರಿಗೆ ಆಹ್ವಾನ ಸಿಕ್ಕಿದೆ. ಈ ಕಾರಣಕ್ಕೆ ಪುಟಿನ್ ಅವರ ಭಾರತ ಭೇಟಿಗಾಗಿ ಎಲ್ಲಾ ರೀತಿ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಆದರೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿರುವ ದಿನಾಂಕ ಇನ್ನೂ ಫೈನಲ್ ಆಗಿಲ್ಲ.












Click it and Unblock the Notifications