ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಇರಾನ್-ಇರಾಕ್ ಭೀಕರ ಭೂಕಂಪದ ಎದೆನಡುಗಿಸುವ ದೃಶ್ಯ

|
Google Oneindia Kannada News

Recommended Video

ಇರಾನ್ ಹಾಗು ಇರಾಕ್ ಭೀಕರ ಭೂಕಂಪ | ವೀಡಿಯೋ ವೈರಲ್ | Oneindia Kannada

ತೆಹ್ರೇನ್, ನವೆಂಬರ್ 13: ಇರಾನ್ ಮತ್ತು ಇರಾಕ್ ಗಡಿಯಲ್ಲಿ ನ.12 ರಂದು ಸಂಭವಿಸಿದ ಭೀಕರ ಭೂಕಂಪದಲ್ಲಿ 320 ಜನ ಮೃತರಾಗಿದ್ದು, ಸಾವಿರಾರು ಜನ ಗಂಭೀರ ಗಾಯಗೊಂಡಿದ್ದಾರೆ.

ಇರಾನ್ -ಇರಾಕ್ ಗಡಿಯಲ್ಲಿ ಭೂಕಂಪ, 100 ಮಂದಿ ಸಾವುಇರಾನ್ -ಇರಾಕ್ ಗಡಿಯಲ್ಲಿ ಭೂಕಂಪ, 100 ಮಂದಿ ಸಾವು

ರಿಕ್ಟರ್ ಮಾಪನದಲ್ಲಿ 7.3 ತೀವ್ರತೆ ದಾಖಲಾಗಿದ್ದು, ಇತ್ತೀಚೆಗೆ ಸಂಭವಿಸಿದ ಅತ್ಯಂತ ಭೀಕರ ಭೂಕಂಪ ಇದಾಗಿದೆ. ಬರ್ತಡೇ ಆಚರಿಸುತ್ತಿದ್ದ ಮಕ್ಕಳು ಇದ್ದಕ್ಕಿದ್ದಂತೆ ಭುಕಂಪದ ಸುಳಿಯಲ್ಲಿ ಸಿಕ್ಕಿ ನರಳಿದ್ದು, ಕಾಫಿ ಶಾಪ್ ನಲ್ಲಿ ವಿರಾಮದಲ್ಲಿ ಕುಳಿತವರೆಲ್ಲ ಇದ್ದಕ್ಕಿದ್ದಂತೆ ಸಂಭವಿಸಿದ ಭೂಕಂಪಕ್ಕೆ ನಲುಗಿಹೋಗಿದ್ದು, ರಿಟೇಲ್ ಶಾಪ್ ವೊಂದರಲ್ಲಿ ಒಪ್ಪವಾಗಿಟ್ಟಿದ್ದ ಸಾಮಗ್ರಿಗಳೆಲ್ಲ ಪಟಪಟನೇ ಉದುರಿಬಿದ್ದಿದ್ದು, ಮಾಲ್ ನಲ್ಲಿದ್ದ ಜನರೆಲ್ಲ ಪ್ರಾಣ ಉಳಿಸಿಕೊಳ್ಳೋದಕ್ಕಾಗಿ ಎದ್ದೆನೋ, ಬಿದ್ದೆನೋ ಎಂದು ಓಟಕಿತ್ತಿದ್ದು... ಇಂಥ ಹಲವು ವಿಡಿಯೋಗಳು ಇರಾನ್-ಇರಾಕ್ ಭೂಕಂಪದ ತೀವ್ರತೆಯನ್ನು ತೋರಿಸಿಕೊಟ್ಟಿವೆ.

ಟ್ವಿಟ್ಟರ್ ನಲ್ಲೂ ಈ ವಿಡಿಯೋಗಳು ವೈರಲ್ ಆಗಿ ಹರಿದಾಡುತ್ತಿವೆ. ಭೀಕರ ಭೂಕಂಪಕ್ಕೆ ಬಂಧುಗಳನ್ನು ಕಳೆದುಕೊಂಡು ಅನಾಥರಾದ, ಮನೆ ಕಳೆದುಕೊಂಡು ನಿರಾಶ್ರಿತರಾಗಿ ಬೀದಿಯಲ್ಲಿ ನಿಂತ ಹಲವರ ಚಿತ್ರಗಳು ಕಣ್ಣೆವೆಗಳನ್ನು ತುಂಬಿಸುತ್ತವೆ.

ಜನ್ಮದಿನದ ಸಂಭ್ರಮಕ್ಕೆ ಭೂಕಂಪದ ಸೂತಕ!

ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಪುಟ್ಟ ಪುಟ್ಟ ಮಕ್ಕಳು, ಇದ್ದಕ್ಕಿದ್ದಂತೆ ಸಂಭವಿಸಿದ ಭೂಕಂಪಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯದೆ ಕಿರುಚಾಡಿ, ಓಡಿದ ವಿಡಿಯೋ ಕರುಳು ಕಿವುಚುತ್ತದೆ.

ಅಲುಗಾಡಿತು ಕಾಫಿ ಶಾಪ್..!

ಕಾಫಿ ಶಾಪ್ ನಲ್ಲಿ ಕುಳಿತು ಉಭಯಕುಶಲೋಪರಿ ಹಂಚಿಕೊಳ್ಳುತ್ತಿದ್ದ ಹತ್ತಾರು ಜನರು ಇದ್ದಕ್ಕಿದ್ದಂತೆ ಅಲುಗಾಡತೊಡಗಿದ ಕಾಫಿಶಾಪ್ ಅನ್ನು ಕಂಡು ಹೌಹಾರಿ, ಸಮಯಪ್ರಜ್ಞೆಯಿಂದ ಆಚೆ ಓಡಿಬಂದ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ರಿಟೇಲ್ ಶಾಪ್ನಲ್ಲಿ ಭೂಕಂಪದ ದುಃಸ್ವಪ್ನ!

ರಿಟೇಲ್ ಶಾಪ್ ವೊಂದರಲ್ಲಿ ಒಪ್ಪವಾಗಿ ಜೋಡಿಸಿಟ್ಟಿದ್ದ ಹಸ್ತುಗಳು ಭೂಕಂಪದ ತೀವ್ರತೆಗೆ ಪಟಪಟನೆ ಉದುರಿದವು. ಒಳಗಿದ್ದ ಜನರೆಲ್ಲ ಎದ್ದೆನೋ, ಬಿದ್ದೆನೋ ಎನ್ನುತ್ತ ಪ್ರಅಣಿ ಉಳಿಸಿಕೊಳ್ಳಲು ಬಯಲು ಪ್ರದೇಶಕ್ಕೆ ಓಡಿದರು.

ಮಾಲ್ ಅನ್ನೂ ಅಲುಗಾಡಿಸಿತು ಭೂಕಂಪ!

ಇಲ್ಲಿನ ಎರಬಿಲ್ಸ್ ಪ್ಯಾಮಿಲಿ ಮಾಲ್ ಅಲುಗಾಡುವುದಕ್ಕೆ ಶುರುಮಾಡಿದಾಗ ಅದರೊಳಗಿದ್ದ ನೂರಾರು ಜನ ಭೂಕಂಪದ ಅರಿವಾಗಿ ತಕ್ಷಣವೇ ಮಾಲಿನ ಆಚೆ ಬಂದು ಪ್ರಾಣ ಉಳಿಸಿಕೊಂಡರು.

English summary
A massive earthquake of magnitude 7.3 struck Iraq and iran on Nov 12th, More than 320 people died. Here are viral videos of the earthquake on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X