Viral Video: ಮನೆ ಬಾಡಿಗೆಗೆ ಕೊಡುವ ಮುನ್ನ ಎಚ್ಚರ..! ಹಸಿವಾದ್ರೆ ಗೋಡೆಗಳನ್ನೇ ತಿಂದು ಮುಗಿಸ್ತಾಳೆ ಈಕೆ
ಇತ್ತೀಚಿಗೆ ಆಹಾರವು ಕೂಡ ಮನೋರಂಜನೆಯ ಭಾಗವಾಗಿದೆ. ಹೊಸ ಹೊಸ ರೀತಿಯ ಆಹಾರ ತಯಾರಿಸುವುದು, ಹೊಸ ಹೊಸ ರೀತಿಯ ಆಹಾರದ ರುಚಿ ನೋಡುವುದು ಅದರ ಅನುಭವ ಹಂಚಿಕೊಳ್ಳುವುದು ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿದೆ. ಆಹಾರದ ವಿಚಾರದಲ್ಲೇ ಕೆಲವರಿಗೆ ಕೆಲವೊಂದು ಅಭ್ಯಾಸ ಕೂಡ ಇರುತ್ತದೆ. ವಿಚಿತ್ರ ಕಾಂಬಿನೇಷನ್‌ಗಳನ್ನು ಟ್ರೈ ಮಾಡುವುದು, ತಿನ್ನಲು ಯೋಗ್ಯವಲ್ಲದ ವಸ್ತುಗಳನ್ನು ತಿನ್ನುವುದು ಹೀಗೆ.
ನಾಲಿಗೆ ರುಚಿಎನ್ನುವುದು ಯಾರನ್ನೂ ಬಿಟ್ಟಿಲ್ಲ. ಕೇವಲ ತಿನ್ನಲು ಯೋಗ್ಯವಾದ ಆಹಾರ ಮಾತ್ರವಲ್ಲ. ತಿನ್ನಲು ಯೋಗ್ಯವಲ್ಲದ ಅಥವಾ ಯಾರೂ ತಿನ್ನದ ಕೆಲವು ವಸ್ತುಗಳು ನಾಲಿಗೆಗೆ ರುಚಿ ಎನಿಸಬಹುದು. ಕೊನೆಗೆ ಅದು ಅಭ್ಯಾಸವಾಗಿ ಜೀವನ ಭಾಗ ಕೂಡ ಆಗಬಹುದು. ಇಲೊಬ್ಬಳು ಮಹಿಳೆಗೆ ಇದೇ ರೀತಿಯ ಅಭ್ಯಾಸವೊಂದು ಜೊತೆಯಾಗಿದೆ.

ನೀವು ಆಹಾರ ಪ್ರಿಯರಾ..? ಹಳ್ಳಿಯಿಂದ ದಿಲ್ಲಿವರೆಗೂ ಎಲ್ಲಾ ರೀತಿಯ ಆಹಾರವನ್ನು ಸೇವಿಸಿದ್ದೀರಾ..? ಆದರೆ ಈ ಮಹಿಳೆ ತಿನ್ನುವ ಆಹಾರವನ್ನು ನೀವು ಸೇವಿಸಿರಲು ಸಾಧ್ಯವೇ ಇಲ್ಲ ಬಿಡಿ. ಅಂತಹ ಅಭ್ಯಾಸವೊಂದಕ್ಕೆ ಈ ಮಹಿಳೆ ಬಿದ್ದಿದ್ದು, ಈಕೆ ತಿನ್ನುವ ವಸ್ತು ಕೇಳಿದರೆ ಜನ ಬೆಚ್ಚಿ ಬೀಳುವುದಂತೂ ಗ್ಯಾರಂಟಿ.
ಅಮೆರಿಕದ ಮಿಚಿಗನ್ ನಿವಾಸಿಯಾಗಿರುವ ನಿಕೋಲ್ ಎನ್ನುವ ಮಹಿಳೆ ಗೋಡೆಯನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದಾಳೆ. ತನಗೆ ಹಸಿವಾದಗಲೆಲ್ಲಾ ಈ ಮಹಿಳೆ ಮನೆಯ ಗೋಡೆಗಳನ್ನೇ ಮುರಿದು ತಿನ್ನುತ್ತಾಳಂತೆ. ಮೊದಮೊದಲು ಬಾಯಿ ರುಚಿಗಾಗಿ ಗೋಡೆ ತಿನ್ನಲು ಆರಂಭಿಸಿದ ಈ ಮಹಿಳೆ ಈಗ ಗೋಡೆಯನ್ನೇ ತನ್ನ ಆಹಾರ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ವಿವಿಧ ಖಾದ್ಯ ತಯಾರಿಸಿ ತಿನ್ನುವ ಬದಲು, ಈಕೆ ಮನೆಯ ಬೇರೆ ಬೇರೆ ಮೂಲೆಯ ಗೋಡೆಗಳನ್ನು ಆಯ್ಕೆ ಮಾಡಿಕೊಂಡು ತಿನ್ನುತ್ತಾಳಂತೆ.

ನಿಕೋಲ್ ಈಗಾಗಲೇ ತನ್ನ ಮನೆಯ ಅರ್ಥ ಗೋಡೆಯನ್ನು ತಿಂದು ಮುಗಿಸಿದ್ದಾಳಂತೆ. ಹೀಗಾಗಿ ಈಕೆಯ ಈ ವಿಚಿತ್ರ ಅಭ್ಯಾಸದ ಬಗ್ಗೆ ಕೇಳಿದ ಅಕ್ಕಪಕ್ಕದ ಮನೆಯವರು ಹಾಗೂ ಸಂಬಂಧಿಕರು ತಮ್ಮ ಮನೆಗೆ ಬರಲೇ ಬೇಡ ಎಂದು ನಿಕೋಲ್ ಬಳಿ ಮನವಿ ಮಾಡಿದ್ದಾರಂತೆ. ನಿಕೋಲ್ ಮನೆಯ ಗೋಡೆಗಳ ಸ್ಥಿತಿ ಹಾಗೂ ಆಕೆ ಗೋಡೆಗಳನ್ನು ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ವೈರಲ್ ಆದ ಈ ವಿಡಿಯೋದಲ್ಲಿ ನಿಕೋಲ್ ಮನೆಯ ಗೋಡೆಗಳನ್ನು ತಿಂದು ಅವುಗಳ ರುಚಿಗಳನ್ನು ಸಹ ವರ್ಣಿಸುತ್ತಾಳೆ. ಚಾಕೋಲೇಟ್, ಐಸ್‌ಕ್ರೀಮ್‌ನಂತೆ ಆಕೆ ಮನೆಯ ಗೋಡೆಗಳನ್ನು ಆಸ್ವಾಧಿಸಿ ತಿನ್ನುತ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೆರಗಾಗಿದ್ದು, ಒಬ್ಬ ಮನುಷ್ಯ ಗೋಡೆಗಳನ್ನು ತಿಂದು ಬದುಕಲು ಸಾಧ್ಯಾನಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿದ್ದು, ಕಷ್ಟಪಟ್ಟು ಮನೆ ಕಟ್ಟಿ ಇಂತವರಿಗೆ ಬಾಡಿಗೆಗೆ ಕೊಟ್ಟರೆ ಕಥೆ ಮುಗಿಯಿತು ಎಂದಿದ್ದಾರೆ. ತನ್ನ ಮನೆ ಗೋಡೆ ಮುಗಿದ ಮೇಲೆ ಈಕೆ ಏನು ಮಾಡುತ್ತಾಳೆ..? ಬಾಡಿಗೆಗೆ ಮನೆ ಕೊಡುವ ಮುನ್ನ ಎಚ್ಚರ ನಾವು ಕಷ್ಟಪಟ್ಟು ಕಟ್ಟಿದ ಮನೆಯನ್ನು ಈಕೆ ತಿಂಡಿ ರೂಪದಲ್ಲಿ ತಿಂದು ಮುಗಿಸಿದರೆ ಹೇಗೆ ಎಂದು ನೆಟ್ಟಿಗರು ವಿವಿಧ ತರದಲ್ಲಿ ಕಮೆಂಟ್ ಮಾಡಿದ್ದಾರೆ.












Click it and Unblock the Notifications