ವೈರಲ್ ವಿಡಿಯೋ: ಚಪ್ಪಾಳೆ ಗಿಟ್ಟಿಸಿದ ರಾಹುಲ್ ಮಾತಿನ ವೈಖರಿ

Posted By:
Subscribe to Oneindia Kannada
   ರಾಹುಲ್ ಗಾಂಧಿ ಸಿಂಗಪೂರ್ ನಲ್ಲಿ ಮಾಡಿದ ಭಾಷಣಕ್ಕೆ ಚಪ್ಪಾಳೆ ಸುರಿಮಳೆ | Oneindia Kannada

   ಸಿಂಗಪುರ, ಮಾರ್ಚ್ 09: ಸಿಂಗಪುರ ಪ್ರವಾಸದಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂವಾದ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

   ಏಷ್ಯಾ ರೀಬಾರ್ನ್ ಎಂಬ ಪುಸ್ತಕದ ಲೇಖಕ ಪ್ರಸೇನ್ ಜಿತ್ ಕೆ.ಬಸು ಎಂಬುವವರು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿಯವರು ನೀಡಿದ ಉತ್ತರಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಹರಿದುಬರುತ್ತಿದೆ.

   ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ಪ್ರಸೇನ್ ಜಿತ್ ಬಸು ಅವರು, 'ನಿಮ್ಮ ಕುಟುಂಬ ಭಾರತವನ್ನು ಎಷ್ಟೊ ದಶಕಗಳ ಕಾಲ ಆಳಿದ್ದರೂ, ಭಾರತದ ತಲಾದಾಯ ಹೆಚ್ಚಾಗಲಿಲ್ಲ. ಆದರೆ ನಿಮ್ಮ ಕುಟುಂಬ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಭಾರತದ ತಲಾದಾಯ ವಿಶ್ವದ ಆರ್ಥಿಕತೆಗೆ ಸ್ಪರ್ಧೆ ನೀಡುವಂತೆ ಬೆಳೆಯಿತು. ಈ ಬಗ್ಗೆ ಏನೆನ್ನುತ್ತೀರಿ' ಎಂದು ಪ್ರಶ್ನಿಸಿದರು.

   ಎರಡೇ ಸೀಟು ಗೆದ್ದು ಸರ್ಕಾರ ರಚಿಸಲು ಹೊರಟ ಬಿಜೆಪಿ: ರಾಹುಲ್ ತಪರಾಕಿ!

   ಇದೇ ಸಮಯದಲ್ಲಿ ವ್ಯಕ್ತಿಯೊಬ್ಬರು ಎದ್ದುನಿಂತು "ನಾನು ನಿಮ್ಮ ಮುತ್ತಾತ ಜವಾಹರಲಾಲ್ ನೆಹರು ಅವರ ಅಭಿಮಾನಿ. ಭಾರತದಲ್ಲಿ ಏನೆಲ್ಲ ಅಭಿವೃದ್ಧಿಯಾಗಿದೆಯೋ ಅದಕ್ಕೆಲ್ಲ ಕಾರಣ ನಿಮ್ಮ ಕುಟುಂಬ. ನಾನು ನಿಮ್ಮ ಕುಟುಂಬಕ್ಕೆ ಆಭಾರಿ" ಎಂದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, 'ನೀವಿಬ್ಬರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಮಾತನಾಡುತ್ತಿದ್ದೀರಿ. ಒಬ್ಬರು, ಎಲ್ಲ ಸಮಸ್ಯೆಗೂ ನಾನೇ ಕಾರಣ ಎಂದರೆ, ಇನ್ನೊಬ್ಬರು ಎಲ್ಲ ಪರಿಹಾರಕ್ಕೂ ನಾನೇ ಕಾರಣ ಎನ್ನುತ್ತಿದ್ದೀರಿ' ಎಂದು ಹಾಸ್ಯ ಚಟಾಕಿ ಹಾರಿಸಿದರು.

   ಚಪ್ಪಾಳೆ ಗಿಟ್ಟಿಸಿದ ರಾಹುಲ್ ಮಾತಿನ ವೈಖರಿ!

   ಇದು ಧ್ರುವೀಕರಣವನ್ನು ತೋರಿಸುತ್ತದೆ. ಒಬ್ಬರು ಹೇಳುತ್ತಾರೆ, ಕಾಂಗ್ರೆಸ್ ಪಕ್ಷ ಏನೂ ಮಾಡಿಲ್ಲ ಎಂದು. ಇನ್ನೊಬ್ಬರು ಹೇಳುತ್ತಾರೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಮಾಡಿದೆ ಎಂದು! ಭಾರತದ ಯಶಸ್ಸಿಗೆ ಕಾರಣ ಭಾರತದ ಜನರು. ಈ ಯಶಸ್ಸಿನ ಹಿಂದೆ ಕಾಂಗ್ರೆಸ್ ಪಕ್ಷವಿಲ್ಲ ಎಂದು ಯಾರಾದರೂ ಭಾವಿಸುವುದಾದರೆ, ಸ್ವಾತಂತ್ರ್ಯ ಹೋರಾಟದ ಹಿಂದೆ, ಹಸಿರು ಕ್ರಾಂತಿ, ದೂರ ಸಂಪರ್ಕ ಕ್ರಾಂತಿ, ಉದಾರೀಕರಣ ಇವೆಲ್ಲವೂ ಆ ಯಶಸ್ಸಿನ ಭಾಗವಲ್ಲ ಎಂದು ಯಾರಾದರೂ ಹೇಳುವುದಾದರೆ ಅಂಥವರು ಮತ್ತೊಂದು ಪುಸ್ತಕ ಬರೆಯಬೇಕು!' ಎಂದು ಪ್ರಸೇನ್ ಜಿತ್ ಕೆ.ಬಸು ಅವರಿಗೆ ಟಾಂಗ್ ನೀಡಿದರು.

   ಮೋದಿ ಬಳಿ ಹೀಗೆ ಹೇಳಲು ನಿಮಗೆ ಸಾಧ್ಯವಿರಲಿಲ್ಲ!

   ಮೋದಿ ಬಳಿ ಹೀಗೆ ಹೇಳಲು ನಿಮಗೆ ಸಾಧ್ಯವಿರಲಿಲ್ಲ!

   ಪ್ರತಿಯೊಬ್ಬರನ್ನೂ, ನನ್ನ ವಿರೋಧಿಗಳನ್ನೂ ಪ್ರೀತಿಸುವುದನ್ನು ಕಲಿತವನು ನಾನು. ನಾನು ಏನನ್ನೂ ಸಾಧಿಸಿಲ್ಲ ಎಂದು ನೀವು ಹೇಳಿದರೂ ನನಗೆ ಬೇಸರವಿಲ್ಲ. ನಾನು ನಿಮ್ಮನ್ನು ಗೌರವಿಸುತ್ತೇನೆ. ನಮ್ಮ ಸಿದ್ಧಾಂತಗಳು ಬೇರೆ ಇದ್ದಿರಬಹುದು. ಆದರೂ ನಿಮ್ಮೊಂದಿಗೆ ಚರ್ಚೆ ನಡೆಸಲು ನಾನು ಸಿದ್ಧ. ಆದರೆ ಇದೇ ಮಾತನ್ನು ನೀವು ಪ್ರಧಾನಿ ಮೋದಿಯವರ ಬಳಿ ಹೇಳಲು ಸಾಧ್ಯವಿರಲಿಲ್ಲ. ಅದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಇದೇ ವ್ಯತ್ಯಾಸ. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನಾನು ನಿಮ್ಮನ್ನು ಒಮ್ಮೆ ತಬ್ಬಿಕೊಳ್ಳುತ್ತೇನೆ. ಏಕೆಂದರೆ ನನಗೆ ನೀವು ಮುಖ್ಯ. ನೀವು ಒಂದು ಅಭಿಪ್ರಾಯವನ್ನು ಪ್ರತಿನಿಧಿಸುತ್ತಿದ್ದೀರಿ. ಆದ್ದರಿಂದಲೇ ನನಗೆ ನೀವು ಮುಖ್ಯ" ಎಂದು ರಾಹುಲ್ ಗಾಂಧಿ ಹೇಳಿದರು.

   ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

   ರಾಹುಲ್ ಗಾಂಧಿಯವರು ಮೋಡಿ ಮಾಡುವಂತೆ ಮಾತನಾಡಿದ ಈ ವಿಡಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಷ್ಟು ದಿನ ಅವರು ಆಡಿದ್ದನ್ನೆಲ್ಲ ಅಪ್ರಬುದ್ಧ ಹೇಳಿಕೆ ಎನ್ನುತ್ತಿದ್ದ ಜನರಿಗೆ ಈ ವಿಡಿಯೋ ದಿಗ್ಭ್ರಮೆ ಮೂಡಿಸಿದ್ದರೆ ಅಚ್ಚರಿಯಿಲ್ಲ. ಈ ಕುರಿತು ಟ್ವಿಟ್ಟರ್ ನಲ್ಲೂ #RGinSingapore #IndiaAt70 ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಈ ಕುರಿತು ಪತ್ರಕರ್ತೆ ಸಾಗರಿಕಾ ಘೋಷ್ ಟ್ವೀಟ್ ಮಾಡಿ, 'ರಾಹುಲ್ ಗಾಂಧಿಯವರ ಮುತ್ತಾತ ಇಲ್ಲದಿದ್ದರೆ, ಪ್ರಸೇನ್ ಜಿತ್ ಬಸು ಅಂಥವರು ಸಿಂಗಪುರಕ್ಕೆ ಹೋಗುತ್ತಲೇ ಇರಲಿಲ್ಲ, ಇಂಗ್ಲಿಷ್ ಮಾತುನಾಡುತ್ತಲೇ ಇರಲಿಲ್ಲ, ಇಂಗ್ಲಿಷಿನಲ್ಲಿ ಒಂದು ಪುಸ್ತಕ ಬರೆಯುತ್ತಲೂ ಇರಲಿಲ್ಲ. ಎಲ್ಲೋ ಸಗಣಿ ತಟ್ಟುತ್ತ, ಗೋಮೂತ್ರ ಕುಡಿಯುತ್ತಿರುತ್ತಿದ್ದರು' ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಈಗ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

   ಕಾಲೆಳೆತಕ್ಕೂ ಚೌಕಾಸಿಯಿಲ್ಲ!

   ಒಂದೆಡೆ ರಾಹುಲ್ ಗಾಂಧಿಯನ್ನು ಹೊಗಳುವವರಿದ್ದರೆ, ಇನ್ನೊಂದೆಡೆ thankstonehru ಎಂಬ ಹ್ಯಾಶ್ ಟ್ಯಾಗ್ ಸೃಷ್ಟಿಸಿ, ಕಾಲೆಳೆವ ಕೆಲಸವೂ ನಡೆಯುತ್ತಿದೆ. ನೆಹರು ಅವ್ರಿಗೆ ಧನ್ಯವಾದ. ಏಕೆಂದರೆ ಭಾರತರತ್ನವನ್ನು ತಾವೇ ಪರಿಚಯಿಸಿ, ತಾವೇ ಪಡೆದುಕೊಂಡ ಏಕೈಕ ವ್ಯಕ್ತಿ ಅವರು ಎಂದು ಒಬ್ಬರು ಕಾಲೆಳೆದಿದ್ದಾರೆ. ಕಾಶ್ಮೀರದಲ್ಲಿ ಲಕ್ಷಾಂತರ ಪಂದಿತರ ಮಾರಣಹೋಮವಾಯ್ತು, ಕೋಮುಗಲಭೆ ನಡೆಯಿತು, ಚೀನಾದೊಂದಿಗೆ ಸೋತೆವು, ಪಾಕಿಸ್ತಾನದೊಂದಿಗೆ ಕಾಶ್ಮೀರಕ್ಕಾಗಿ ದಿನಾ ಏಗಬೇಕಾಯಿತು, ಕಾಂಗ್ರೆಸ್ ದೇಶವನ್ನು ಲೂಟಿಹೊಡೆಯಿತು. ಅದಕ್ಕಾಗಿ ನೆಹರು ಅವರಿಗೆ ಧನ್ಯವಾದ ಎಂದು ಕಾಲೆಳೆದ್ದಾರೆ ಇನ್ನೊಬ್ಬರು.

   "ಕಾರ್ತಿ ಬಂಧನವಾಗುತ್ತಿದ್ದಂತೆ ರಾಹುಲ್ ಗಾಂಧಿಗೆ ಅಜ್ಜಿ ನೆನಪಾದರು!"

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   "With political discourse hitting new lows everyday, Congress President Rahul Gandhi shows how to gracefully handle detractors and call their bluff" Congress tweeted. Here it posted a video in which Congress president Rahul Gandhi reacts an in interaction in Singapore.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ