ಅಮೆರಿಕದಲ್ಲಿ ಶುರುವಾಯ್ತು ಉಗ್ರ ಹೋರಾಟ: ಕಂಡ ಕಂಡ ಕಾರುಗಳಿಗೆ ಬೆಂಕಿ, ಹೈ - ಅಲರ್ಟ್!

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಕಠಿಣ ವಲಸೆ ನೀತಿಯು ಅವರಿಗೆ ಮುಳುವಾಗಿ ಪರಿಣಮಿಸಿದೆ. ವಲಸೆ ನೀತಿಯನ್ನು ವಿರೋಧಿಸಿ ಅಮೆರಿಕದ ಹಲವು ಭಾಗದಲ್ಲಿ ಉಗ್ರ ಪ್ರತಿಭಟನೆಗಳು ನಡೆದಿದ್ದು. ಪ್ರತಿಭಟನಾಕಾರರು ಕಾರುಗಳಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡೊನಾಲ್ಡ್‌ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಮೇಲೆ ಅಮೆರಿಕ ಮೊದಲು ಎನ್ನುವ ನೀತಿಯನ್ನು ಜಾರಿ ಮಾಡುತ್ತಿದ್ದಾರೆ. ಈ ಆಡಳಿತದ ಭಾಗವಾಗಿ ಅಮೆರಿಕದಲ್ಲಿ ಅಕ್ರಮವಾಗಿ ವಲಸೆ ಬಂದಿರುವವರನ್ನು ಅಮೆರಿಕದಿಂದ ಓಡಿಸುವುದು ಅಥವಾ ಅವರ ದೇಶಕ್ಕೆ ವಾಪಸ್ ಕಳುಹಿಸುವುದು ಮೊದಲ ಭಾಗವಾಗಿದೆ. ಎರಡನೇಯದು ಆರ್ಥಿಕ & ತೆರಿಗೆ ನೀತಿಯಾಗಿದೆ. ಇದೀಗ ಡೊನಾಲ್ಡ್‌ ಟ್ರಂಪ್ ಅವರ ವಲಸೆ ನೀತಿಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಅಮೆರಿಕ ಹೊತ್ತಿ ಉರಿಯುತ್ತಿದೆ. ಸಿಕ್ಕ ಸಿಕ್ಕ ಕಾರುಗಳಿಗೆ ಬೆಂಕಿ ಹಾಕಲಾಗುತ್ತಿದೆ.

ಅಕ್ರಮ ವಲಸೆ ನೀತಿಯು ಅಮೆರಿಕದಲ್ಲಿ ಉಗ್ರ ಪ್ರತಿಭಟನಾ ಸ್ವರೂಪವನ್ನು ಪಡೆದುಕೊಂಡಿದೆ. ಅಮೆರಿಕದಲ್ಲಿ ಈ ಹಿಂದೆಂದೂ ನಡೆಯದಷ್ಟು ಭೀಕರ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಕ್ರಮ ವಲಸಿಗರನ್ನು ದೇಶದಿಂದ ಬಲವಂತವಾಗಿ ಕಳುಹಿಸಬಾರದು ಹಾಗೂ ಅಕ್ರಮ ವಲಸೆ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಈ ಪ್ರತಿಭಟನೆಯನ್ನು ತಡೆಯುವುದಕ್ಕೆ ಅಮೆರಿಕ ನ್ಯಾಷನಲ್ ಗಾರ್ಡ್ ಬಳಕೆ ಮಾಡುತ್ತಿದೆ. ವಿಶೇಷ ಮಿಲಿಟರಿ ಪಡೆಗಳನ್ನು ಬಳಸಿ ಪ್ರತಿಭಟನೆಯನ್ನು ತಡೆಯುವುದಕ್ಕೆ ಪ್ರಯತ್ನಿಸುತ್ತಿದ್ದರೂ ಈ ಪ್ರತಿಭಟನೆಯನ್ನು ತಡೆಯುವುದಕ್ಕೆ ಅಮೆರಿಕ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ.

Violent protests against illegal immigration policy in America Cars on fire everywhere high alert

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕಳೆದ ಎರಡು ದಿನಗಳ ಹಿಂದೆ ಪ್ರಾರಂಭವಾದ ಪ್ರತಿಭಟನೆಯು ಉಗ್ರ ಸ್ವರೂಪ ಪಡೆದುಕೊಂಡಿದೆ. ಟ್ರಂಪ್ ಸರ್ಕಾರವು ಕ್ಯಾಲಿಫೋರ್ನಿಯಾ ನ್ಯಾಷನಲ್‌ ಗಾರ್ಡ್ ಯೋಧರನ್ನು ಇಲ್ಲಿ ನಿಯೋಜನೆ ಮಾಡಿದೆ. ಈ ಪ್ರತಿಭಟನೆಯ ಸಭೆಯನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ.

ಅಕ್ರಮ ವಲಸೆ ನೀತಿ ಅಧಿಕೃತ ಸಹಿ: ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಅಕ್ರಮ ವಲಸೆ ನೀತಿಯ ಬಗ್ಗೆ ಮಾತನಾಡುತ್ತಿದ್ದರು. ಇದೀಗ ಅಧಿಕೃತವಾಗಿ ಸಹಿ ಹಾಕಿದ ಮೇಲೆ ಈ ಸಮಸ್ಯೆ ಎದುರಾಗಿದೆ. ಪ್ರತಿಭಟನೆಯು ಉಗ್ರಸ್ವರೂಪವನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ 2,000 ರಾಷ್ಟ್ರೀಯ ಗಾರ್ಡ್‌ಗಳ ನಿಯೋಜನೆ ಮಾಡಲಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಲಸೆ ನೀತಿಗೆ ಅಧಿಕೃತವಾಗಿ ಸಹಿ ಹಾಕಿದ ಮೇಲೆ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಶ್ವೇತಭವನದ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+