Vijay Mallya: ವಿಜಯ್ ಮಲ್ಯ ಮಗನ ಮದುವೆ; ಸಿದ್ಧಾರ್ಥ್ ಕೈಹಿಡಿಯುತ್ತಿರುವ ಹುಡುಗಿ ಯಾರು?
ಖ್ಯಾತ ಉದ್ಯಮಿ ವಿಜಯ್ ಮಲ್ಯ ಅವರ ಮಗ ಮದುವೆಯಾಗಲು ಸಜ್ಜಾಗಿದ್ದಾರೆ. ಸಿದ್ಧಾರ್ಥ್ ಮಲ್ಯ ತನ್ನ ಗೆಳತಿಯನ್ನು ಮದುವೆಯಾಗಲು ಸಿದ್ಧತೆ ಆರಂಭಿಸಿದ್ದು, ಅವರ ಮದುವೆ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ.
ಸಿದ್ಧಾರ್ಥ್ ಮಲ್ಯ ತನ್ನ ಗೆಳತಿ ಜಾಸ್ಮಿನ್ ಅವರನ್ನು ವರಿಸಲಿದ್ದಾರೆ. ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಸಿದ್ಧಾರ್ಥ್ ಮಲ್ಯ ಅವರು ಜಾಸ್ಮಿನ್ ಜೊತೆಗಿನ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿದ್ಧಾರ್ಥ್ ಮಲ್ಯ ಅವರಿಗೆ ಬೆಂಬಲಿಗರು ಮತ್ತು ಸಾಮಾಜಿಕ ಮಾಧ್ಯಮ ಹಿಂಬಾಲಕರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಸಿದ್ಧಾರ್ಥ್ ಮಲ್ಯ ಇನ್‌ಸ್ಟಾಗ್ರಾಂ ಪೋಸ್ಟ್
ಮದುವೆಯ ವಾರ ಪ್ರಾರಂಭವಾಗಿದೆ ಎಂದು ಸಿದ್ಧಾರ್ಥ್ ಮಲ್ಯ ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ, ಇದರಲ್ಲಿ ಅವರು ಬಿಳಿ ಸೂಟ್ ಮತ್ತು ಹೂವಿನ ಬಿಳಿ ಉಡುಪಿನಲ್ಲಿ ಮಿಂಚಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಸಿದ್ಧಾರ್ಥ್ ಮಲ್ಯ ಅವರು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದರು. ಹ್ಯಾಲೋವೆನ್ 2023 ರ ಸಂದರ್ಭದಲ್ಲಿ ಜಾಸ್ಮಿನ್‌ಗೆ ಮದುವೆಯ ಪ್ರಸ್ತಾಪ ಮಾಡಿದ್ದರು. ಅದಾದ ಬಳಿಕ ಈಗ ಮದುವೆಯಾಗಲು ಸಜ್ಜಾಗಿದ್ದಾರೆ.
ಮಾಟಗಾತಿಯ ವೇಷಭೂಷಣ ತೊಟ್ಟಿದ್ದ ಜಾಸ್ಮಿನ್‌ಗೆ ಮಂಡಿಯೂರಿ ಕುಳಿತು ಪ್ರಪೋಸ್ ಮಾಡುತ್ತಿದ್ದ. ಎರಡನೇ ಫೋಟೋ ಜಾಸ್ಮಿನ್ ಅವರ ನಿಶ್ಚಿತಾರ್ಥದ ಉಂಗುರವನ್ನು ತೋರಿಸುವ ಸಂತೋಷದ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ನಟ ಮತ್ತು ಮಾಡೆಲ್ ಸಿದ್ಧಾರ್ಥ್ ಮಲ್ಯ
ಸಿದ್ಧಾರ್ಥ್ ಮಲ್ಯ ನಟ ಮತ್ತು ಮಾಡೆಲ್ ಆಗಿದ್ದು, ಅವರ ತಂದೆ ವಿಜಯ್ ಮಲ್ಯ ಯುಬಿ ಗ್ರೂಪ್‌ನ ಮಾಜಿ ಅಧ್ಯಕ್ಷರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಸಿದ್ಧಾರ್ಥ ಲಂಡನ್ ಮತ್ತು ಯುಎಇಯಲ್ಲಿ ಬೆಳೆದರು ಮತ್ತು ಲಂಡನ್‌ನ ವೆಲ್ಲಿಂಗ್‌ಟನ್ ಕಾಲೇಜು ಮತ್ತು ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು.
ರಾಯಲ್ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮಾದಲ್ಲಿ ವ್ಯಾಸಂಗ ಮಾಡಿದರು ಮತ್ತು ಮಾಡೆಲ್ ಮತ್ತು ನಟರಾಗಿ ಕೆಲಸ ಮಾಡುತ್ತಿದ್ದಾರೆ.
ಯಾರು ಈ ಜಾಸ್ಮಿನ್?
ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿರುವ ಜಾಸ್ಮಿನ್, ತನ್ನ ಇನ್‌ಸ್ಟಾಗ್ರಾಮ್ ಫೀಡ್‌ನಲ್ಲಿ ತನ್ನ ಪ್ರಯಾಣದ ಸಾಹಸಗಳನ್ನು ಮತ್ತು ಪ್ರಕೃತಿಯ ಮೇಲಿನ ಪ್ರೀತಿಯನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ.
ನಾಗರಿಕ ಹಕ್ಕುಗಳ ಕದನ ವಿರಾಮ ಕೇಂದ್ರವನ್ನು ಜಾಸ್ಮಿನ್ ಬೆಂಬಲಿಸಿದ್ದಾರೆ.
ಜಾಸ್ಮಿನ್ ಮತ್ತು ಸಿದ್ಧಾರ್ಥ ಅವರು ಅಕ್ಟೋಬರ್ 2023 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇಬ್ಬರು ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದರು. ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.












Click it and Unblock the Notifications