ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ನೃತ್ಯ ನೋಡಿದ್ದೀರಾ?
ನೈರೋಬಿ, ಜು. 27: ಗಂಗ್ನಂ ಸ್ಟೈಲ್, ಉಪ್ಪಿ ಸ್ಟೈಲ್, ಪ್ರಭುದೇವ ಶೈಲಿ ಡ್ಯಾನ್ಸ್ ಪ್ರಕಾರಗಳನ್ನು ನೋಡಿದ್ದೇವೆ. ಇದೀಗ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸ್ಟೈಲ್ ಲಿಗೂ ಒಂದು ಹೆಜ್ಜೆ ಹಾಕಿ ಬರೋಣ.
ಕೀನ್ಯಾ ಪ್ರವಾಸದಲ್ಲಿರುವ ಒಬಾಮಾ ಡಿನ್ನರ್ ಪಾರ್ಟಿಯೊಂದರಲ್ಲಿ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಕೀನ್ಯಾದ ಪಾಪ್ ಗ್ರೂಪ್ ವೊಂದು ಈ ಒಬಾಮಾ ಡ್ಯಾನ್ಸ್ ವಿಡಿಯೋವನ್ನು ಅಂತರ್ಜಾಲಕ್ಕೆ ಹಾಕಿದ್ದು ಕ್ಷಣಮಾತ್ರದಲ್ಲಿ ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ.[ಭಾರತೀಯ ಕುವರಿಯ ಅಡುಗೆಗೆ ಒಬಾಮಾ ದಂಪತಿ ಫಿದಾ]

ಕೀನ್ಯಾದಲ್ಲೇ ಹೆಸರುವಾಸಿಯಾದ ಆಫ್ರೋ ಪಾಪ್ ಹಿಟ್ಸ್ ಗೆ ಒಬಾಮಾ ನೃತ್ಯ ಮಾಡಿದ್ದಾರೆ. ಒಬಾಮಾ ನೃತ್ಯ ಮಾಡಿರುವುದು ಇದೇ ಮೊದಲೇನಲ್ಲ. 2009 ರಲ್ಲಿ ಲ್ಯಾಟಿನ್ ಪಾಪ್ ಸ್ಟಾರ್ ಥಾಲಿಯಾ ಜತೆ ವೈಟ್ ಹೌಸ್ ನಲ್ಲಿ ಹೆಜ್ಜೆ ಹಾಕಿದ್ದರು.
ಕೀನ್ಯಾಕ್ಕೆ ಭೇಟಿ ನೀಡಿದ್ದು ನನಗೆ ಬಹಳ ಸಂತಸ ತಂದಿದೆ. ಕೀನ್ಯಾಕ್ಕೆ ಭೇಟಿ ಇತ್ತ ಅಮೆರಿಕದ ಮೊದಲ ಅಧ್ಯಕ್ಷ ಎಂದು ಕರೆಸಿಕೊಳ್ಳಲು ಹೆಮ್ಮೆಯಾಗುತ್ತಿದೆ. ನನ್ನ ತಂದೆ ಇದೇ ಭಾಗದಿಂದ ಬಂದವರು ಎಂಬುದನ್ನು ಅಷ್ಟೇ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಒಬಾಮಾ ಭೇಟಿ ವೇಳೆ ಹೇಳಿದ್ದಾರೆ. ಒಬಾಮಾ ತಂದೆ ಬರಾಕ್ ಸೀನಿಯರ್ 1982 ರಲ್ಲಿ ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಆಗ ಒಬಾಮಾ ಅವರಿಗೆ ಕೇವಲ ಎರಡು ವರ್ಷ ವಯಸ್ಸು.[ಒಬಾಮಾ ಉಡುಗೊರೆ ನೀಡಿದ್ದ ಶಾಲೆಗೆ ಬೀಗ ಬಿದ್ದಿದೆ!]
ತಮ್ಮ ಎಲ್ಲ ರಾಜಕೀಯ ಜಂಜಾಟಗಳನ್ನು ಮರೆತು ಒಬಾಬಾ ಹೆಜ್ಜೆ ಹಾಕಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ಒಬಾಮಾ ಭೇಟಿ ನೀಡಿದ್ದರು.












Click it and Unblock the Notifications