ಲಂಡನ್ ಥಿಯೇಟರ್ ನಲ್ಲಿ ಭೂತ ಕಾಣಿಸ್ತು!
ಲಂಡನ್, ಜು.30: ಇತ್ತೀಚೆಗಷ್ಟೇ ಪ್ರೇತ ಕಾಟಕ್ಕೆ ಹೆದರಿ ಇಂಗ್ಲೆಂಡ್ ಕ್ರಿಕೆಟರ್ಸ್ ಪಂಚತಾರಾ ಹೊಟೇಲ್ ನ ರೂಮ್ ಬದಲಿಸಿದ ಸುದ್ದಿ ಬಂದಿತ್ತು. ಈಗ ಲಂಡನ್ನಿನ ಥಿಯೇಟರ್ ನಲ್ಲಿ ಭೂತ ಕಾಣಿಸಿಕೊಂಡ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆ ಆಗಿದೆ.
ಲಂಡನ್ನಿನ ಥಿಯೇಟರ್ ನಲ್ಲಿ ಭೂತವೊಂದು ಸಂಚರಿಸುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾಲೀಕರು ಬೆಚ್ಚಿಬೀಳುವಂತೆ ಮಾಡಿದೆ. ರೋಮ್ 'ಫೋರ್ಡ್'ನ ಎಸ್ಸೆಕ್ಸ್ ಥಿಯೇಟರ್ ನಲ್ಲಿ ಸಿನಿಮಾ ಪ್ರದರ್ಶನ ಮುಗಿದ ಬಳಿಕ ಎಲ್ಲರೂ ಮನೆಗೆ ತೆರಳಿದ್ದರು. ಆದರೆ, ರಾತ್ರಿ ಕುರ್ಚಿ, ಟೇಬಲ್ ಗಳು ಚಲಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿನಿಮಾ ಪ್ರದರ್ಶನ ಮುಗಿದ ಒಂದು ಗಂಟೆ ಬಳಿಕ ಈ ಚಲನೆ ಕಂಡುಬಂದಿದ್ದು, ಇದು ಭೂತಗಳ ಚೇಷ್ಟೆ ಎನ್ನಲಾಗುತ್ತಿದೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮ್ಯಾನೇಜರ್ ಜೈ ಸೆಪ್ಪಲ್, ಪ್ರತಿದಿನದಂತೆ ಅಂದು ಸಿಸಿಟಿವಿ ವಿಡಿಯೋ ತುಣುಕುಗಳನ್ನು ಪರೀಕ್ಷಿಸಿದ ನನಗೆ ಅಚ್ಚರಿ ಕಾದಿತ್ತು. ಕುರ್ಚಿ ಮೇಲೆ ಯಾರೋ ಕುಳಿತು ಆ ಕಡೆ ಈ ಕಡೆ ಜರುಗಿದಂತೆ, ಟೀಬಲ್ ಅಲುಗಾಡುತ್ತಿದ್ದ ದೃಶ್ಯಗಳ ಕಂಡುಬಂದವು. ಇದು ದೆವ್ವಗಳ ಚೇಷ್ಟೆಯಲ್ಲದೆ ಮತ್ತೇನೂ ಅಲ್ಲ ಎಂದಿದ್ಧಾರೆ.
ಈ ಬಗ್ಗೆ ಪರೀಕ್ಷಿಸಲು ರಾಯ್ ರಾಬರ್ಟ್ ಆಗಮಿಸಿದರು. ಅವರು ಇದು ನಾನು ಈ ವರೆಗೆ ಪ್ರೇತಗಳ ಸಂಚಾರದ ಬಗ್ಗೆ ಕಂಡ ಅದ್ಭುತ ವಿಡಿಯೋ ತುಣುಕಾಗಿದೆ ಎಂದು ಉದ್ಗರಿಸಿದ್ದಾರೆ. ನನಗೆ ಈ ಘಟನೆ ನಂತರ ನಗಬೇಕೋ, ಅಳಬೇಕೋ ಗೊತ್ತಿಲ್ಲ ಎಂದು ಮ್ಯಾನೇಜರ್ ಜೈ ಸೆಪ್ಪೆಲ್ ಹೇಳಿದ್ದಾರೆ. ಇದೇನು ಭೂತ ಚೇಷ್ಟೆಯೋ ಅಲ್ಲವೋ ವಿಡಿಯೋ ನೋಡಿ ನೀವೇ ನಿರ್ಧರಿಸಿ
ಇತ್ತೀಚೆಗೆ ಲಂಡನ್ನಿನ ಪುರಾತನ ಹೋಟೆಲ್ ನಲ್ಲಿ ಭೂತಚೇಷ್ಟೆ ಬಗ್ಗೆ ವೇಗಿ ಸ್ಟುವರ್ಟ್ ಬ್ರಾಡ್ ಹೇಳಿದ್ದರು. ಇದ್ದಕ್ಕಿದ್ದಂತೆ ಬಾತ್‌ರೂಮ್‌ನ ನಲ್ಲಿ ಆನ್ ಆಗುತ್ತಿತ್ತು. ನಾನು ಲೈಟ್ ಹಾಕಿದಾಗ ನಲ್ಲಿ ಆಫ್ ಆಗುತ್ತಿತ್ತು. ನಾನು ಲೈಟ್ ಆಫ್ ಮಾಡಿದಾಗ ನಲ್ಲಿ ಆನ್ ಆಗುತ್ತಿತ್ತು. ಒಮ್ಮೆ ಮಧ್ಯರಾತ್ರಿ ನನಗೆ ಎಚ್ಚರವಾದಾಗ ರೂಮ್‌ನಲ್ಲಿ ಯಾರೋ ಮಲಗಿದ್ದಂತೆ ಕಂಡುಬಂದಿತ್ತು. ಇದರಿಂದ ಹೆದರಿದ್ದ ನಾನು ರೂಮ್ ಬದಲಾಯಿಸಿದ್ದೆ ಎನ್ನುವ ಮೂಲಕ ಬೆಚ್ಚಿ ಬೀಳುವ ಸಂಗತಿ ಹೊರ ಹಾಕಿದ್ದರು. [ಕ್ರಿಕೆಟರ್ ಗೆ ಭೂತ ಪ್ರೇತ ಕಾಟ!]












Click it and Unblock the Notifications