ವಿಡಿಯೋ: ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ ಮೂರ್ಛೆ ನಾಟಕವಾಡಿದ ಅಧಿಕಾರಿ
ಅಬುಜಾ, ಜುಲೈ 04: ಜಗತ್ತಿನಲ್ಲಿ ಭ್ರಷ್ಟಾಚಾರ, ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಕೊರತೆಯಿಲ್ಲ. ಈ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಕಪ್ಪು ಹಣವನ್ನು ಮರೆಮಾಡಲು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಮತ್ತು ನೈಜೀರಿಯಾದಲ್ಲಿ ಅಂತಹ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಹಿರಿಯ ಅಧಿಕಾರಿಯೊಬ್ಬರು ತಮ್ಮ ಕಪ್ಪು ಹಣವನ್ನು ಮರೆಮಾಡಲು ಪ್ರಜ್ಞಾಹೀನರಂತೆ ನಟಿಸಿದ್ದಾರೆ. ಆದರೆ ಈತನ ಗಿಮಿಕ್ ಕ್ಯಾಮೆರಾದಲ್ಲಿ ದಾಖಲಾಗುತ್ತಿದ್ದು, ಇದೀಗ ಆ ಗಿಮಿಕ್ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿದೆ.
ಸೂರ್ಯ ಚಂದ್ರ ಇದ್ದಲ್ಲೆಲ್ಲಾ ಕಪ್ಪು ಹಣ ಇದೆ ಅನ್ನುವಷ್ಟು ಸಹಜವಾಗಿ ಹೋಗಿದೆ ಈ ಕಪ್ಪು ಹಣ. ಬಹು ದೊಡ್ಡ ಸಂಸ್ಥೆಯ ಮುಖ್ಯಸ್ಥನಿರಬಹುದು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಕಸ ಗುಡಿಸುವನಿರಬಹದು ಎಲ್ಲರಿಗೂ ನಾಳಿನ ಬದುಕಿಗೆ ಒಂದಷ್ಟು ಶೇಖರಿಸಿಡಬೇಕು ಎನ್ನುವ ಹಪಾಹಪಿ ಇದ್ದದ್ದೇ. ಹಣದ ಉಗಮಕ್ಕೆ ಮುಂಚೆ ಒಂದಷ್ಟು ಶೇಖರಣೆಗೆ ಸೀಮಿತವಾಗಿದ್ದ ಆಸೆ, ಹಪಾಹಪಿಕೆಯಿಂದ ಲಾಗಾಮಿಲ್ಲದೆ ಕುದುರೆಯಂತಾಗಿದೆ. ಮುಂದಿನ ಪೀಳಿಗೆಗೆ ಎಂದು ಕೂಡಿಡುವ ಹುಚ್ಚು ಮನುಷ್ಯನನ್ನ ಆವರಿಸಿದೆ. ಹೀಗಾಗಿ ತಕ್ಷಣಕ್ಕೇ ಯಾವುದೇ ಶ್ರಮವಿಲ್ಲದೇ ಹಣವನ್ನ ಗಳಿಕೆ ಮಾಡಲು ಹಲವಾರು ದಾರಿಗಳನ್ನು ಕಂಡುಕೊಳ್ಳಲಾಗುತ್ತದೆ. ಒಂದೊಮ್ಮೆ ಈ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದರೆ ಅವರ ಜೀವನ ನಾಶವಾಗುವುದನ್ನು ತಪ್ಪಿಸಲು ಹಲವಾರು ಮಾರ್ಗಗಳನ್ನೂ ಹುಡುಕಲಾಗುತ್ತದೆ. ಅದಕ್ಕೆ ಈ ಘಟನೆಯೇ ಸಾಕ್ಷಿ.

10 ಕೋಟಿ ಹಗರಣ
ನೈಜೀರಿಯಾದ ಅಧಿಕಾರಿಯೊಬ್ಬರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಸಂಸತ್ ಅಧಿವೇಶನದಲ್ಲಿ 'ಹಣ ಕಾಣೆಯಾಗಿದೆ' ಎಂದು ಕೇಳಿದ ನಂತರ ಅಧಿಕಾರಿ ಪ್ರಜ್ಞಾಹೀನರಾದಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಯ ನಟನೆಯು ಎಷ್ಟು ಅದ್ಭುತವಾಗಿದೆ ಎಂದರೆ ಅವರು ಗಿಮಿಕ್ ಮಾಡುತ್ತಿದ್ದಾನೆ ಎಂದು ಜನರಿಗೆ ತಿಳಿದಿರಲಿಲ್ಲ. ಈ ವೇಳೆ ಅಧಿಕಾರಿ ನಿಜವಾಗಿಯೂ ಪ್ರಜ್ಞಾಹೀನರಾಗಿದ್ದಾರೆಂದು ಭಾವಿಸಿ ಅಧಿವೇಶದಲ್ಲಿನ ಜನರು ಅವನನ್ನು ಪ್ರಜ್ಞೆಯಿಂದ ಹೊರಗೆ ತರಲು ಪ್ರಯತ್ನಿಸಿದರು. ಈ ನಟಯ ಅಧಿಕಾರಿ ನೈಜರ್ ಡೆಲ್ಟಾ ಡೆವಲಪ್‌ಮೆಂಟ್‌ನ (ಎನ್‌ಡಿಡಿಸಿ) ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರ ಹೆಸರು ಕೆಮೆಬ್ರಾಡಿಕುಮೊ ಪೊಂಡೈ.

ಹಗರಣದ ಬಗ್ಗೆ ಕೇಳುತ್ತಿದ್ದಂತೆ ಮೂರ್ಛೆ ನಾಟಕ
ನೈಜರ್ ಡೆಲ್ಟಾ ಡೆವಲಪ್‌ಮೆಂಟ್ ಕಮಿಷನ್ (ಎನ್‌ಡಿಡಿಸಿ) ಎಕ್ಸಿಕ್ಯೂಟಿವ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರೊಫೆಸರ್ ಕೆಮೆಬ್ರಾಡಿಕುಮೊ ಪಾಂಡೆ ಅವರು ಭಾರಿ ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ. ಈ ಅಧಿಕಾರಿಯನ್ನು ಸಂಸತ್ತಿನ ಅಧಿವೇಶನದಲ್ಲಿ ವಿಚಾರಣೆಗೆ ಕರೆಯಲಾಯಿತು. ಅವರು ಸುಮಾರು 536 ಮಿಲಿಯನ್ ಅಂದರೆ ಸುಮಾರು 10 ಕೋಟಿ ರೂ. ವಂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಂಬಾಬ್ವೆಯ ಆನ್‌ಲೈನ್ ಪೋರ್ಟಲ್ ಇಹರಾರೆ ವರದಿಯ ಪ್ರಕಾರ, "ಸೇವ್ ಲೈವ್ಸ್ ಆಫ್ ನೈಜರ್ ಡೆಲ್ಟಾ ಪೀಪಲ್" ಎಂಬ ಮಾನವೀಯ ಸಂಸ್ಥೆಗೆ ಲಿಂಕ್ ಮಾಡಿದ ಗುಂಪಿಗೆ ಪಾವತಿ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಯನ್ನು ಪ್ರಶ್ನಿಸಲಾಗಿದೆ. ಈ ಸಮಯದಲ್ಲಿ ಪೋಂಡೈ ಮೂರ್ಛೆ ಹೋದಂತೆ ನಾಟಕವಾಡಿದ್ದಾರೆ.
|
ಅಧಿಕಾರಿ ಮೂರ್ಛೆ ವಿಡಿಯೋ ವೈರಲ್
ವಿಡಿಯೋದಲ್ಲಿ ಸಂಸತ್ತಿನ ಸ್ಪೀಕರ್ ಪೊಂಡೈ ಅವರನ್ನು "ಮೇ 31 ರಿಂದ ಇಂದಿನವರೆಗೆ ನೀವು ಏನು ಖರ್ಚು ಮಾಡಿದ್ದೀರಿ ಎಂದು ನಿಮಗೆ ತಿಳಿದಿದೆಯೇ?" ಎಂದು ಕೇಳುತ್ತಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಅಧಿಕಾರಿಯ ಸುತ್ತಲಿನ ಜನರು ಏನೋ ತಪ್ಪಾಗಿದೆ ಎಂದು ಅರ್ಥವಾಯಿತು. ಇದ್ದಕ್ಕಿದ್ದಂತೆ ಪೊಂಡೈ ಮೇಜಿನ ಮೇಲೆ ಭಾಗ ತೊಡಗಿದರು. ಮೇಜಿನ ಮೇಲೆ ಮಡಚಿ ಕೈಗಳಿಂದ ಮುಂದಕ್ಕೆ ಬಾಗಿ ಮಲಗುತ್ತಿದ್ದಂತೆ ಸುತ್ತಲ ಜನ ಗಾಬರಿಗೊಳ್ಳುತ್ತಾರೆ. ಅವರಿಗೆನೋ ಆಗಿದೆ ಎಂಬ ಭಾವನೆ ಮೂಡುತ್ತದೆ. ಆಗ ಜನರೆಲ್ಲರೂ ಅಧಿಕಾರಿಯ ಬಳಿಗೆ ಓಡಿಬಂದು ಅವರನ್ನು ನೋಡಲು ಪ್ರಾರಂಭಿಸಿದರು. ಅವರಿಗೆ ಏನಾಗುತ್ತಿದೆ? ಎಂದು ನೋಡಲು ಅಧಿಕಾರಿಯ ಹಿಂದೆ ಕುಳಿತಿದ್ದ ಒಬ್ಬ ವ್ಯಕ್ತಿ ಜಿಗಿದು ಅವರನ್ನು ಪರೀಕ್ಷಿಸಲು ಅವನ ಬಳಿಗೆ ಹೋದರು. ಆದರೆ ಪಾಂಡೆ ಪ್ರತಿಕ್ರಿಯಿಸಲಿಲ್ಲ. ಅವರು ಮೂರ್ಛೆ ಹೋದಂತೆ ತೋರುತ್ತಿತ್ತು. ಆದರೆ ಅವನ ಕಣ್ಣುಗಳು ವಿಶಾಲವಾಗಿ ತೆರೆದಿದ್ದವು.

ಇದೆಂತ ಮೂರ್ಛೆ ಎಂದು ಜನ ಶಾಕ್
ಅಧಿಕಾರಿ ಹಠಾತ್ತನೆ ಅಸ್ವಸ್ಥಗೊಂಡಿರುವುದನ್ನು ನೋಡಿದ ಸದನದ ಇತರ ಅಧಿಕಾರಿಗಳು ಅವರ ಬಳಿಗೆ ಬಂದು ಪೊಂಡೈ ಅವರನ್ನು ಪ್ರಜ್ಞೆಗೆ ತರಲು ಪ್ರಯತ್ನಿಸಿದರು. ಅಲ್ಲಿ ನೆರೆದಿದ್ದವರು ಆ ಅಧಿಕಾರಿಯ ಮೂರ್ಛೆ ನಿವಾರಣೆಯಾಗಲಿ ಎಂದು ಬಾಯಿಗೆ ಬಾಯಿ ಇಟ್ಟು ಊದಲು ಪ್ರಯತ್ನಿಸಿದರು. ಆಗ ಅಧಿಕಾರಿ ತನ್ನ ಗಿಮಿಕ್ ಈಗ ಗಂಭೀರವಾಗುತ್ತಿದೆ ಎಂದು ಅರಿವಿಗೆ ಬಂದಿದ್ದರಿಂದ ಪ್ರಜ್ಞೆ ಬರುವಂತೆ ವರ್ತಿಸತೊಡಗಿದ. ಅಧಿಕಾರಿ ಕೈ ಎತ್ತಿ ಪ್ರಜ್ಞೆ ಬಂದವರಂತೆ ವರ್ತಿಸತೊಡಗಿದರು. ಆದರೆ ಅವರು ಸಂಪೂರ್ಣ ಗಿಮಿಕ್ ಮಾಡುತ್ತಿದ್ದು, ಸಂಸತ್ತಿನ ಕಲಾಪವನ್ನು ಯಾವುದಾದರೂ ರೀತಿಯಲ್ಲಿ ಮುಂದೂಡಬೇಕು ಎಂಬುದು ಅವರ ಗಿಮಿಕ್ ನ ಉದ್ದೇಶವಾಗಿತ್ತು ಎನ್ನಲಾಗುತ್ತಿದೆ.












Click it and Unblock the Notifications