Iran President: ಇರಾನ್ ಅಧ್ಯಕ್ಷರ ಅಂತ್ಯಕ್ರಿಯೆಗೆ ಭಾರತದ ಉಪರಾಷ್ಟ್ರಪತಿ?
ಇರಾನ್ ವಿಚಾರದಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ, ಒಂದು ಕಡೆ ಇರಾನ್ ಮತ್ತು ಭಾರತದ ದೋಸ್ತಿ ಕಂಡು ಅಮೆರಿಕ ಉರ್ಕೊಂಡಿದ್ರೂ ಭಾರತ ಈ ಬಗ್ಗೆ ಕೇರ್ ಮಾಡುತ್ತಿಲ್ಲ. ಅದರಲ್ಲೂ ಇರಾನ್ ಅಧ್ಯಕ್ಷರ ಸಾವಿನ ವಿಚಾರದಲ್ಲಿ ಭಾರತ ಮಾನವೀಯ ನಿಲುವು ಕೂಡ ತೋರಿಸಿದೆ. ಹೀಗೆ ಇರಾನ್ & ಭಾರತದ ಬಾಂಧವ್ಯ ಇದೀಗ ಮತ್ತಷ್ಟು ಗಟ್ಟಿಯಾಗಿದೆ. ಹೀಗಿದ್ದಾಗ ಭಾರತದ ಉಪರಾಷ್ಟ್ರಪತಿ ಇರಾನ್‌ಗೆ ಹೋಗುತ್ತಿದ್ದಾರಂತೆ!
ಹೆಲಿಕಾಪ್ಟರ್ ದುರಂತಕ್ಕೆ ಬಲಿಯಾದ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆಯ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭಾರತವನ್ನು ಪ್ರತಿನಿಧಿಸುತ್ತಾರೆ ಎನ್ನಲಾಗಿದೆ. ಈ ಮೂಲಕ ಭಾರತವು ಇರಾನ್ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿರುವ ರೀತಿ ಕಾಣುತ್ತಿದೆ. ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಬುಧವಾರ ಇರಾನ್‌ಗೆ ಹೊರಡುವ ಎಲ್ಲ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಹೇಳಿಕೆ ಸರ್ಕಾರದಿಂದ ಹೊರ ಬಿದ್ದಿಲ್ಲ. ಹೀಗಾಗಿ ಈ ಬಗ್ಗೆ ಶೀಘ್ರವೇ ಅಧಿಕೃತ ಮಾಹಿತಿ ಸಿಗಲಿದೆ ಅಂತಾ ಹೇಳಲಾಗುತ್ತಿದೆ.

ಶೋಕಾಚರಣೆ ಘೋಷಿಸಿದೆ ಭಾರತ
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತಪಟ್ಟ ಹಿನ್ನೆಲೆಯಲ್ಲಿ ಭಾರತದಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿದೆ. ಹಾಗೇ ಭಾರತದಿಂದ ಕೂಡ ಉಪರಾಷ್ಟ್ರಪತಿ ಇರಾನ್‌ಗೆ ಹೋಗುತ್ತಾರೆ, ಈ ಮೂಲಕ ಇರಾನ್ ಅಧ್ಯಕ್ಷರ ಸಾವಿಗೆ ಭಾರತ ನೇರವಾಗಿ ಅದೇ ದೇಶಕ್ಕೆ ತೆರಳಿ ಸಂತಾಪ ಸೂಚಿಸಲಿದೆ ಎನ್ನಲಾಗಿದೆ. ಮತ್ತೊಂದು ಕಡೆ 5 ದಿನಗಳ ಕಾಲ ಇರಾನ್‌ನಲ್ಲಿ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಹಾಗೇ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಿದ್ದು, ಪ್ರತಿಭಟನೆ & ಹಿಂಸಾಚಾರ ಭುಗಿಲೇಳದಂತೆ ಇದೀಗ ಇರಾನ್ ದೇಶದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಇರಾನ್ ಅಧ್ಯಕ್ಷರು ಮೃತಪಟ್ಟಿದ್ದು ಹೇಗೆ?
ಅಜೆರ್‌ಬೈಜಾನ್ ಅರಾಸ್ ನದಿಗೆ ನಿರ್ಮಿಸಿದ ಡ್ಯಾಂ ಉದ್ಘಾಟನೆಗೆ ರೈಸಿ ಅತಿಥಿಯಾಗಿ ಹೋಗಿದ್ರು ಆದರೆ ಈ ಸಮಯದಲ್ಲಿ ಭೀಕರ ದುರಂತ ನಡೆದಿರುವುದು ಪರಿಸ್ಥಿತಿ ಆತಂಕಕ್ಕೆ ದೂಡಿದೆ. ಹಾಗೇ ಇರಾನ್ ಸೇನೆ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುತ್ತಾ ಎಂಬ ಪ್ರಶ್ನೆ ಕೂಡ ಮೂಡಿದೆ. ಈ ಬೆನ್ನಲ್ಲೇ ಇರಾನ್ ಈಗ ಇಬ್ರಾಹಿಂ ರೈಸಿ ಜಾಗಕ್ಕೆ ಹಂಗಾಮಿ ಅಧ್ಯಕ್ಷನ ಆಯ್ಕೆ ಮಾಡಿದೆ. ಈ ಮೂಲಕ ಇಸ್ರೇಲ್ ವಿರುದ್ಧ ಇರಾನ್ ಪ್ರತಿಕಾರ ತೀರಿಸಿಕೊಳ್ಳುತ್ತಾ? ಎಂಬ ಪ್ರಶ್ನೆ ಕೂಡ ಇದೀಗ ಉದ್ಭವಿಸಿದೆ.












Click it and Unblock the Notifications