Food Diet: ಯುವತಿಯ ಸಾವಿಗೆ ಕಾರಣವಾಯ್ತಾ ಡಯೆಟ್ ಅಭ್ಯಾಸ?

ಮಾಸ್ಕೊ: ಇದು ಡಯೆಟ್ ಜಮಾನ, ಇಲ್ಲಿ ಜನರು ತಿನ್ನುವ ಪ್ರತಿ ಗ್ರಾಂ ಆಹಾರಕ್ಕೂ ಲೆಕ್ಕ ಇಡ್ತಾರೆ. ಹಾಗೇ ತಿಂದ ಪ್ರತಿ ತುತ್ತು ಅನ್ನವನ್ನೂ ಕರಗಿಸಲು ಯತ್ನಿಸುತ್ತಾರೆ. ಆದರೆ ಹೀಗೆ ಮಾಡಲು ಹೋಗಿ ಅದೆಷ್ಟೋ ಜನ ಜೀವ ಕಳೆದುಕೊಂಡ ಉದಾಹರಣೆಯೂ ಇದೆ. ಇದೀಗ ಊಟವನ್ನೇ ಬಿಟ್ಟು ಬರೀ ಹಸಿ ತರಕಾರಿ, ಹಣ್ಣು ತಿಂದು ಬದುಕುತ್ತಿದ್ದ ರಷ್ಯಾದ ಯುವತಿ ಹಸಿವಿನಿಂದ ಮೃತಪಟ್ಟಿದ್ದಾಳಂತೆ.

ಹೌದು, ಅತಿಯಾದರೆ ಅಮೃತ ಕೂಡ ವಿಷ ಅನ್ನೋದು ಮತ್ತೆ ಸಾಬೀತಾಗಿದೆ. ಸಂಪೂರ್ಣ ಸಸ್ಯಾಹಾರಿ ಆಹಾರ ಸೇವಿಸುತ್ತಾ ಡಯೆಟ್‌ ಮಾಡುತ್ತಿದ್ದ ಝನ್ನಾ ಸ್ಯಾಮ್ಸೊನೋವಾ ಎಂಬ 39 ವರ್ಷ ವಯಸ್ಸಿನ ಯುವತಿ ಮೃತಪಟ್ಟಿದ್ದಾಳೆ. ಮೃತ ಯುವತಿ ಹತ್ತಾರು ವರ್ಷದಿಂದ ಹಸಿಯಾದ ತರಕಾರಿ & ಹಣ್ಣುಗಳನ್ನ ಮಾತ್ರ ತಿಂದು ಬದುಕುತ್ತಿದ್ದಳು ಅಂತಾ ಹೇಳಲಾಗಿದೆ. ಹಾಗೇ ಸಾಮಾಜಿಕ ಜಾಲತಾಣದಲ್ಲಿ ಡಯೆಟ್‌ ಟಿಪ್ಸ್‌ ಪೋಸ್ಟ್‌ ಮಾಡುವ ಮೂಲಕ ಫೇಮಸ್ ಆಗಿದ್ದಳು ಝನ್ನಾ ಸ್ಯಾಮ್ಸೊನೋವಾ. ಹೀಗಿದ್ದಾಗಲೇ ಆಕೆಗೆ ಆರೋಗ್ಯವೂ ಕೈಕೊಟ್ಟಿತ್ತು.

Vegan Influencer Zhanna Samsonova incident creating storm

ಏಕಾಏಕಿ ಕೈಕೊಟ್ಟ ಯುವತಿ ಆರೋಗ್ಯ

ಅಂದಹಾಗೆ ಕೆಲ ತಿಂಗಳ ಹಿಂದೆ ಲಂಕಾ ಪ್ರವಾಸ ಕೈಗೊಂಡಿದ್ದಾಗ ಸ್ಯಾಮ್ಸೊನೋವಾ ಸುಸ್ತು, ಕಾಲು ನೋವಿನಿಂದ ಬಳಲಿದ್ದಳು ಎನ್ನಲಾಗಿದೆ. ಹೀಗೆ ಅಲ್ಲಿಂದ ವಾಪಸ್ ಬಂದು ಝನ್ನಾ ಸ್ಯಾಮ್ಸೊನೋವಾ ಚಿಕಿತ್ಸೆ ಪಡೆಯುತ್ತಿದ್ದರು ಅಂತಾ ಮೃತ ಯುವತಿಯ ಸ್ನೇಹಿತೆ ಮಾಹಿತಿ ನೀಡಿದ್ದಾರೆ. ಹೀಗಿದ್ದಾಗಲೇ ಆರೋಗ್ಯ ಕೈಕೊಟ್ಟಿದ್ದರಿಂದ ಯುವತಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಝನ್ನಾ ಸ್ಯಾಮ್ಸೊನೋವಾ ಅವರ ತಾಯಿ ಹೇಳುವಂತೆ, ಯುವತಿ ಕಾಲರಾಗೆ ಹೋಲುವ ಸೋಂಕಿನಿಂದ ಮೃತಪಟ್ಟಿದ್ದಾಳೆ ಅಂತಿದ್ದಾರೆ. ಇಷ್ಟೆಲ್ಲಾ ನಡೆದರೂ ರಷ್ಯಾ ಯುವತಿಯ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಏನು ತಿಂದು ಬದುಕುತ್ತಿದ್ದಳು ಯುವತಿ?

ಅಷ್ಟಕ್ಕೂ 7 ವರ್ಷಗಳಿಂದಲೂ ಮೃತ ಯುವತಿ, ಸಿಹಿ ಹಲಸು ಸೇರಿ ಸೂರ್ಯಕಾಂತಿ ಬೀಜದ ಸ್ಮೂಥಿ, ಫ್ರೂಟ್ ಜ್ಯೂಸ್ & ಡುರಿಯನ್‌ ಹಣ್ಣು ಸೇರಿ ಕೆಲವು ಆಯ್ದ ತರಕಾರಿಗಳನ್ನು ಮಾತ್ರ ಸೇವನೆ ಮಾಡುತ್ತಿದ್ದಳು ಎನ್ನಲಾಗಿದೆ. ತನ್ನ ಸ್ನೇಹಿತರ ಬಳಿ ತನ್ನ ಆಹಾರ ಕ್ರಮದ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಳು ಝನ್ನಾ ಸ್ಯಾಮ್ಸೊನೋವಾ. ಹಾಗೇ ತನ್ನ ಆಹಾರ ಪದ್ಧತಿ ಬದಲಿಸುವುದಿಲ್ಲ ಎಂಬ ಹಠ ಕೂಡ ಝನ್ನಾಗೆ ಇತ್ತು ಎನ್ನಲಾಗಿದೆ. ಇದೆಲ್ಲವೂ ಯುವತಿ ದೇಹವನ್ನು ಬಳಲುವಂತೆ ಮಾಡಿರಬಹುದು ಎಂಬ ಚರ್ಚೆ ಶುರುವಾಗಿದೆ. ಆದ್ರೆ ಯುವತಿಗೆ ಆಗಿದ್ದು ಏನು? ಎಂಬ ಪ್ರಶ್ನೆಗೆ ಇನ್ನೂ ಅಧಿಕೃತವಾಗಿ ಉತ್ತರ ಸಿಗುತ್ತಿಲ್ಲ.

Vegan Influencer Zhanna Samsonova incident creating storm

ಒಟ್ಟಾರೆ ಹೇಳೋದಾದರೆ ಡಯೆಟ್ ಜೀವನಕ್ಕೆ ಎಷ್ಟು ಮುಖ್ಯವೋ ಅತಿಯಾದ ಕಾಳಜಿಯು ಅಷ್ಟೇ ಅಪಾಯಕಾರಿ ಅನ್ನೋದು ಮತ್ತೆ ಸಾಬೀತಾಗಿದೆ. ತನ್ನ ಆಹಾರ ಕ್ರಮದಿಂದ ಇನ್ನೂ ಬಾಳಿ ಬದುಕಬೇಕಿದ್ದ ಯುವತಿ ಮೃತಪಟ್ಟಿದ್ದಾಳೆ, ಅದಕ್ಕೆ ಅತಿಯಾದ ಡಯೆಟ್ ಮೋಹ ಕಾರಣ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆಲ್ಲಾ ಸೂಕ್ತ ಉತ್ತರ ತನಿಖೆಯ ಬಳಿಕವೇ ಬಯಲಾಗಲಿದೆ. ಆದರೆ ಝನ್ನಾ ಸ್ಯಾಮ್ಸೊನೋವಾ ಸಾವು ಮಾತ್ರ ಜಗತ್ತಿನ ಡಯೆಟ್ ಪ್ರಿಯ ಜನರಿಗೆ ಶಾಕ್ ನೀಡಿರುವುದು ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+