ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆಗಳಿಂದ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಳ

|
Google Oneindia Kannada News

ನವದೆಹಲಿ, ಜೂನ್ 01:ಕೋವಿಡ್ ಲಸಿಕೆಯು ಕೊರೊನಾ ಸೋಂಕಿತರಲ್ಲಿ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಹೊಸ ರೂಪಾಂತರಿಗಳಿಂದಲೂ ರಕ್ಷಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಕಳೆದ ವರ್ಷ ಕೊರೊನಾ ಅಲೆಯ ಸಂದರ್ಭದಲ್ಲಿ 63 ಮಂದಿಯನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು, ಈ ಅಧ್ಯಯನ ಇನ್ನೂ ಉನ್ನತ ತಜ್ಞರಿಂದ ಪರಿಶೀಲನೆಗೆ ಒಳಗಾಗಿಲ್ಲ.

ಸೋಂಕು, ಲಸಿಕೆಯಿಂದ ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ ಉತ್ಪತ್ತಿ ಭರವಸೆ ಸೋಂಕು, ಲಸಿಕೆಯಿಂದ ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ ಉತ್ಪತ್ತಿ ಭರವಸೆ

ಅಮೆರಿಕದ ರಾಕೆಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕರು ಕೋವಿಡ್ ರೋಗಿಗಳ ರಕ್ತದಲ್ಲಿ ಇರುವ ಪ್ರತಿಕಾಯಗಳನ್ನು ವಿಶ್ಲೇಷಿಸಿ, ಈ ವಿಕಾಸವನ್ನು ಪತ್ತೆ ಹಚ್ಚಿದ್ದಾರೆ.

 ಉತ್ಪತ್ತಿಯಾಗುವ ಪ್ರತಿಕಾಯಗಳು

ಉತ್ಪತ್ತಿಯಾಗುವ ಪ್ರತಿಕಾಯಗಳು

ಪ್ರತಿರಕ್ಷಣಾ ವ್ಯವಸ್ಥೆ ಮೆಮೊರಿ ಬಿ ಜೀವಕೋಶಗಳಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ಕೋವಿಡ್‌ಗೆ ಕಾರಣವಾಗುವ ವೈರಾಣುವನ್ನು ತಟಸ್ಥಗೊಳಿಸುವಲ್ಲಿ ನೆರವಾಗುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

 ದೀರ್ಘಕಾಲದ ರಕ್ಷಣೆ

ದೀರ್ಘಕಾಲದ ರಕ್ಷಣೆ

ಕೊರೊನಾ ಲಸಿಕೆಯಿಂದಾಗಿ ಜನರು ವೈರಸ್ ವಿರುದ್ಧ ಸುಧಾರಿತ ಹಾಗೂ ದೀರ್ಘಕಾಲದ ರಕ್ಷಣೆಯನ್ನು ವೃದ್ಧಿಸಿಕೊಳ್ಳುತ್ತಾರೆ, ಒಮ್ಮೆಯೂ ಸೋಂಕಿಗೆ ತುತ್ತಾಗದವರ ಲಸಿಕೆಗಳ ಜತೆಗೆ ಮಸಯಕ್ಕೆ ಸರಿಯಾಗಿ ಇಮ್ಯುನಿಟಿ ಬೂಸ್ಟರ್‌ಗಳು ದೊರೆತರೆ ಹೆಚ್ಚುವರಿ ರಕ್ಷಣೆ ದೊರೆತಂತಾಗುತ್ತದೆ ಎಂದು ಹೇಳಲಾಗಿದೆ.

 ಮಾಡೆರ್ನಾ ಹಾಗೂ ಫೈಜರ್ ಲಸಿಕೆ

ಮಾಡೆರ್ನಾ ಹಾಗೂ ಫೈಜರ್ ಲಸಿಕೆ

ಮಾಡೆರ್ನಾ ಅಥವಾ ಫೈಜರ್ ಲಸಿಕೆಯ ಒಂದು ಡೋಸ್‌ ಪಡೆದಿರುವ 26 ಜನರಲ್ಲಿ ಪ್ರತಿಕಾಯಗಳು ಮತ್ತಷ್ಟು ಹೆಚ್ಚಾಗಿವೆ, ಅಲ್ಲದೆ ಬ್ರಿಟನ್, ದಕ್ಷಿಣ ಆಫ್ರಿಕಾ, ನ್ಯೂಯಾರ್ಕ್ ರೂಪಾಂತರಿ ವೈರಸ್‌ಗಳ ಮೇಲೂ ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ಹೇಳಲಾಗಿದೆ.

 ಶಾಶ್ವತ ರೋಗ ನಿರೋಧಕ ಶಕ್ತಿ

ಶಾಶ್ವತ ರೋಗ ನಿರೋಧಕ ಶಕ್ತಿ

ಕೊರೊನಾ ಸೋಂಕು ಹಾಗೂ ಕೊರೊನಾ ಲಸಿಕೆಯಿಂದ ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ ಇರಲಿದೆ ಎಂದು ಎರಡು ಅಧ್ಯಯನದ ನೀಡಿರುವ ವರದಿಯಿಂದ ತಿಳಿದುಬಂದಿದೆ.

ಒಂದೊಮ್ಮೆ ನಿಮಗೆ ಕೊರೊನಾ ಸೋಂಕು ತಗುಲಿದ್ದರೆ ಅಥವಾ ನೀವು ಕೊರೊನಾ ಲಸಿಕೆ ಪಡೆದಿದ್ದರೆ ಹಲವು ವರ್ಷಗಳ ಕಾಲ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಲಿದೆ.ಡಾ ಅರೋರಾ ಮರು ಸೋಂಕಿನ ಪ್ರಕರಣಗಳು ವಿಜ್ಞಾನಿ ಹಾಗೂ ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ, ಹಾಗೆಯೇ ಸಾರ್ಸ್ ಕೋವ್ 2 ವಿರುದ್ಧದ ರೋಗ ನಿರೋಧಕ ಶಕ್ತಿ ಅಲ್ಪಾವಧಿಯದ್ದೇ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ.

English summary
accination boosts the natural immunity in people infected with the novel coronavirus so much that they are likely to be protected even from the emerging variants, according to a study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X