ಫಿಲಿಪೈನ್ಸ್ ನಲ್ಲಿ 'ಉಸ್ಮಾನ್' ರೌದ್ರ ನರ್ತನಕ್ಕೆ ಹತ್ತಾರು ಮಂದಿ ಸಾವು
ಕ್ರಿಸ್ ಮಸ್ ದಿನ ಫಿಲಿಪೈನ್ಸ್ ಪ್ರವೇಶಿಸಿದ 'ಉಸ್ಮಾನ್' ಚಂಡಮಾರುತಕ್ಕೆ ಈ ವರೆಗೆ ಕನಿಷ್ಠ ಹದಿನಾರು ಮಂದಿ ಸಾವನ್ನಪ್ಪಿದ್ದಾರೆ. ಈ ಚಂಡಮಾರುತದಿಂದ ಇಲ್ಲಿನ ಹಲವು ಪ್ರಾಂತ್ಯಗಳಲ್ಲಿ ಹಾನಿಯಾಗಿದ್ದು, ಪ್ರವಾಹ ಹಾಗೂ ಭೂ ಕುಸಿತ ಸಂಭವಿಸಿದೆ. ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.
ಲುಜಾನ್ ದ್ವೀಪದ ಬಿಕೊಲ್ ಭಾಗದಲ್ಲಿ ಕನಿಷ್ಠ ಹದಿನೇಳು ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ. ಅಲ್ಬಯ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮಸ್ಭೇಟ್ ನಲ್ಲಿ ಏಳು ಮಂದಿ ಮೃತಪಟ್ಟಿದ್ದು, ಬಹುತೇಕರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಸೊರ್ಸೋಗೊನ್, ಕಾಮರೀನ್ ಸುರ್ ಪ್ರಾಂತ್ಯದಲ್ಲಿ ಆರು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಡಿಸೆಂಬರ್ ಇಪ್ಪತ್ತೇಳರಿಂದ ಇಪ್ಪತ್ತೊಂಬತ್ತರ ಮಧ್ಯೆ ಹನ್ನೆರಡಕ್ಕೂ ಹೆಚ್ಚು ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ವಿವಿಧ ಬಂದರುಗಳಲ್ಲಿ ಆರು ಸಾವಿರದ ಐನೂರಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ. ಪ್ರತಿ ವರ್ಷ ಇಪ್ಪತ್ತು ಚಂಡಮಾರುತಗಳು ಫಿಲಿಫೈನ್ಸ್ ದೇಶವನ್ನು ಹಾದುಹೋಗುತ್ತವೆ.












Click it and Unblock the Notifications