ಅಮೆರಿಕದಲ್ಲಿ ಮತ್ತೊಬ್ಬ ಭಾರತ ಮೂಲದ ಮಹಿಳೆ 'ಕಮಾಲ್': ಅಮೆರಿಕ ರಾಜಕೀಯದಲ್ಲಿ ಅವರ ಸಾಧನೆ ತಿಳಿಯಿರಿ

Usha Vance: ಅಮೆರಿಕದ ಅಧ್ಯಕ್ಷಿಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರು 277 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು 224 ಮತಗಳನ್ನು ಪಡೆಯುವ ಸೋಲನುಭವಿಸಿದ್ದಾರೆ. ಬಳಿಕ ಟ್ರಂಪ್‌ ಫ್ಲೋರಿಡಾದ ಪಾಮ್ ಬೀಚ್ ಕೌಂಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾಷಣದ ವೇಳೆ ಭಾರತೀಯ ಮೂಲದ ಉಷಾ ಚಿಲುಕುರಿಯನ್ನು ಹೊಗಳಿದ್ದಾರೆ.

ಸಾಮಾನ್ಯವಾಗಿ ಮಹಿಳೆಯರಿಗೆ ಟ್ರಂಪ್‌ ಆಡಳಿತದಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಕೊಡುವುದು ಬಹುತೇಕ ಡೌಟ್‌. ಆದರೂ ಅವರು ಭಾಷಣದಲ್ಲಿ ಭಾರತೀಯ ಮೂಲದ ಉಷಾ ಚಿಲುಕುರಿಯನ್ನು ಹೊಗಳಿ ಇದೀಗ ಕುತೂಹಲ ಸೃಷ್ಟಿಸಿದ್ದಾರೆ. ಯಾಕೆಂದರೆ ಜೆಡಿ ವಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಅವರು ವಕೀಲೆಯಾಗಿದ್ದಾರೆ. ಅಲ್ಲದೆ, ಎಲ್ಲಾ ಕ್ಷೇತ್ರಗಳ ಬಗ್ಗೆ ತಿಳಿದುಕೊಂಡವರಾಗಿದ್ದಾರೆ. ಆದ್ದರಿಂದ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Usha Vance set to become the first Indian-origin woman in the US Senate Political milestones await

ಒಂದು ವೇಳೆ ಸ್ಥಾನ ನೀಡಿದರೆ, ಜೆಡಿ ವಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ವಾನ್ಸ್ ಅವರು ಯುನೈಟೆಡ್ ಸ್ಟೇಟ್ಸ್‌ನ ಮೊದಲ ಭಾರತೀಯ ಮೂಲದ ಎರಡನೇ ಮಹಿಳೆಯಾಗಲಿದ್ದಾರೆ. ಆಕೆಯುವ ಮೂಲತಃ ಭಾರತದ ಆಂಧ್ರಪ್ರದೇಶದವರಾಗಿದ್ದಾರೆ. ಇನ್ನು ಚುನಾವಣೆಯ ಕಣದಲ್ಲಿದ್ದ ಕಮಲಾ ಹ್ಯಾರಿಸ್ ಭಾರತೀಯ ಮೂಲದವರು.

ಕೆಲವು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಓಹಿಯೋ ಸೆನೆಟರ್ ಜೆಡಿ ವಾನ್ಸ್ ಅವರನ್ನು ರಿಪಬ್ಲಿಕ್‌ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಜೆಡಿ ವ್ಯಾನ್ಸ್ ಭಾರತೀಯ ಮೂಲದವರಲ್ಲ. ಇವರ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್ ಭಾರತೀಯ ಮೂಲದವರಾಗಿದ್ದು, ಈ ಮೂಲಕ ಅವರು ಭಾರತದೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದ್ದಾರೆ.

ಉಷಾ ಚಿಲುಕುರಿ ವ್ಯಾನ್ಸ್ ಅವರು ಪ್ರಖ್ಯಾತ ವಕೀಲೆಯಾಗಿದ್ದಾರೆ. ಇನ್ನು ಅವರ ಪತಿ ಜೆಡಿ ವ್ಯಾನ್ಸ್ ಅವರು ಟ್ರಂಪ್ ಅವರ ಚುನಾವಣಾ ಪ್ರಚಾರದಲ್ಲಿ ಉಪಾಧ್ಯಕ್ಷ ಅಭ್ಯರ್ಥಿಯಾಗಿದ್ದರು. ಇದೀಗ ವೇದಿಕೆ ಭಾಷಣದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಇವರಿಬ್ಬರನ್ನು ಹೊಗಳುವ ಮೂಲಕ ಗಮನ ಸೆಳೆದಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಸ್ವತಃ ಭಾರತೀಯ ಮೂಲದವರೇ ಆಗಿರುವುದು ಕಾಕತಾಳೀಯ. ಅವರ ತಾಯಿ ಭಾರತದಿಂದ ಬಂದವರು. ಮತ್ತೋರ್ವ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹವರ್ತಿ, ಉಪರಾಷ್ಟ್ರಪತಿ ಅಭ್ಯರ್ಥಿ ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ವಾನ್ಸ್ ಆಂಧ್ರಪ್ರದೇಶದ ಮೂಲದವರಾಗಿದ್ದಾರೆ.

ಜೆಡಿ ವ್ಯಾನ್ಸ್ ಅವರು ಈ ಹಿಂದೆ ಟ್ರಂಪ್‌ನ ವಿರೋಧಿಗಳಾಗಿದ್ದರು. ಆದರೆ, ಕಾಲ ಕ್ರಮೇಣ ಅವರು ಟ್ರಂಪ್‌ಗೆ ಹತ್ತಿರ ಆಗಿದ್ದು, ಅವರ ವಿಶ್ವಾಸವನ್ನು ಗಳಿಸಿದರು. ಗೆಲುವು ಸಾಧಿಸಿದ ಬಳಿಕ ವೇದಿಕೆ ಭಾಷಣದಲ್ಲಿ ಮಾತನಾಡಿದ ಡೊನಾಲ್ಡ್‌ ಟ್ರಂಪ್‌ ಅವರು, "ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಇತಿಹಾಸದಲ್ಲಿ ನಾವು ಮತ್ತ ಅಧಿಕಾರಕ್ಕೆ ಮರಳಿದ್ದೇವೆ. ಉಷಾ ವಾನ್ಸ್ ಅವರ ಯುಕ್ತಿಯನ್ನು ಬಹಿರಂಗಪಡಿಸುವ ಸಮಯ ಇದಾಗಿದೆ," ಎಂದು ಹೊಗಳಿದರು.

ಉಷಾ ವಾನ್ಸ್‌ ಅವರ ಇಂಟರೆಸ್ಟಿಂಗ್‌ ಸಂಗತಿಗಳು

* ಯುನೈಟೆಡ್ ಸ್ಟೇಟ್ಸ್‌ನ ಮೊದಲ ಭಾರತೀಯ ಮೂಲದ ಎರಡನೇ ಮಹಿಳೆಯಾಗಲಿರುವ ಉಷಾ ವಾನ್ಸ್ ಅವರು ಪ್ರಖ್ಯಾತ ವಕೀಲೆಯಾಗಿದ್ದಾರೆ.

* ಆಕೆಯು ಮೂಲತಃ ಭಾರತದ ಆಂಧ್ರಪ್ರದೇಶದವರಾಗಿದ್ದು, 1986ರಲ್ಲಿ ಅಮೆರಿಕಕ್ಕೆ ಆಗಮಿಸಿದ್ದರು.

* ಉಷಾ ವಾನ್ಸ್‌ ಅವರು ಸ್ಯಾನ್ ಡಿಯಾಗೋದಲ್ಲಿ ಜನಿಸಿದ್ದು, ಎಲ್ಲಾ ರೀತಿಯ ವರ್ಗದ ಜನರ ಬಗ್ಗೆ ತಿಳಿದುಕೊಂಡವರಾಗಿದ್ದಾರೆ.

* ಯೇಲ್ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣವನ್ನು ಪಡೆದರು ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

* ಉಷಾ ವಾನ್ಸ್ ಅವರು ಕಾನೂನು ಕ್ಷೇತ್ರಕ್ಕೆ ಕಾಲಿಡುವ ಮೊದಲು ನಾಲ್ಕು ವರ್ಷಗಳ ಕಾಲ ಯೇಲ್ ವಿಶ್ವವಿದ್ಯಾಲಯದಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿದ್ದರು.

* ಉಷಾ ವ್ಯಾನ್ಸ್ ಮತ್ತು ಓಹಿಯೋ ಸೆನೆಟರ್ ಜೆಡಿ ವ್ಯಾನ್ಸ್ ಅವರ ಮೊದಲ ಭೇಟಿ ಸ್ಥಳವೆಂದರೆ ಯೇಲ್ ಕಾನೂನು ಶಾಲೆಯಾಗಿದ್ದು, ಇವರು 2014ರಲ್ಲಿ ಕೆಂಟುಕಿಯಲ್ಲಿ ವಿವಾಹವಾದರು.

* ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಫಿಲಾಸಫಿ ಪದವಿಯನ್ನು ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+