ಶುಭ ಶುಕ್ರವಾರ ಅಮೆರಿಕ ಮತ್ತು ಇರಾನ್ ನಡುವೆ ನ್ಯೂಕ್ಲಿಯರ್ ಮಾತುಕತೆಗೆ ಮುಹೂರ್ತ ಫಿಕ್ಸ್ | USA Military
ಅಮೆರಿಕ ಮತ್ತು ಇರಾನ್ ನಡುವೆ ಎಲ್ಲವೂ ಸರಿಯಾಗುವ ಲಕ್ಷಣ ಈಗ ಗೋಚರಿಸುತ್ತಿದೆ, ಯಾಕೆ ಅಂದ್ರೆ ಪರಮಾಣು ಯುದ್ಧ ಭೀತಿ ಹುಟ್ಟು ಹಾಕಿರುವ ಈ ಇಬ್ಬರ ಜಗಳ ಆದಷ್ಟು ಬೇಗ ಅಂತ್ಯ ಅಗಬೇಕಿದೆ. ಹೀಗಿದ್ದಾಗ ಖುದ್ದು ಮಧ್ಯಪ್ರಾಚ್ಯ ಭಾಗದ ಶ್ರೀಮಂತ ದೇಶಗಳೇ ಮಹತ್ವದ ಹೆಜ್ಜೆ ಇಟ್ಟು ಇಬ್ಬರ ಕಲಹ ತಣ್ಣಗಾಗಿಸಿ, ಶಾಂತಿ ಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಈಗ ಒಮನ್ ದೇಶದಲ್ಲಿ ಅಮೆರಿಕ ಮತ್ತು ಇರಾನ್ ಅಧಿಕಾರಿಗಳ ನಡುವೆ ಪರಮಾಣು ಒಪ್ಪಂದ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದೆ. ಫೆಬ್ರವರಿ 6 ಶುಕ್ರವಾರ ಈ ಸಭೆಗೆ ಮುಹೂರ್ತ ಫಿಕ್ಸ್ ಆಗಿದೆ ಈಗ.
ಇರಾನ್ ಪದೇ ಪದೇ ಪರಮಾಣು ಕಾರ್ಯಕ್ರಮ ಹಮ್ಮಿಕೊಳ್ಳುವುದು, ಮಧ್ಯಪ್ರಾಚ್ಯ ಭಾಗದಲ್ಲಿ ನಿರಂತರ ಕಲಹ ನಡೆಯುತ್ತಿರುವುದು ಅಮೆರಿಕಗೆ ಕೂಡ ತಲೆನೋವು ತರಿಸಿತ್ತು. ಇದನ್ನೆಲ್ಲ ನೋಡಿ ನೋಡಿ ಅಲ್ಲಿನ ಜನರು ಕೂಡ ಬೇಸತ್ತು ಹೋಗಿದ್ದು, ಮುಂದೆ ಏನಾಗುತ್ತೋ ಎಂಬ ಭಯದಲ್ಲೇ ಇದ್ದರು. ಈಗ ಅದನ್ನೆಲ್ಲಾ ದಾರಿಗೆ ತರಲು ಘಟಾನುಘಟಿ ದೇಶಗಳೇ ಮುಂದಾಗಿದ್ದು, ಆದಷ್ಟು ಬೇಗ ಅಮೆರಿಕ ಮತ್ತು ಇರಾನ್ ನಡುವೆ ಪರಮಾಣು ಒಪ್ಪಂದ ಅಂತಿಮ ಹಂತಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿಯೇ ಒಮನ್ ನೆಲದಲ್ಲಿ ಹೈಲೆವೆಲ್ ಮೀಟಿಂಗ್ ಫಿಕ್ಸ್ ಆಗಿದೆ.

ಪ್ರತಿಭಟನೆಗೆ ನಲುಗಿ ಹೋಗಿದ್ದ ಇರಾನ್
ಕಳೆದ ತಿಂಗಳು ಇರಾನ್ ತನ್ನದೇ ದೇಶದಲ್ಲಿ ಭೀಕರ ಪ್ರತಿಭಟನೆ ಹಾಗೂ ಹಿಂಸಾಚಾರ ನೋಡಿತ್ತು. ಅದರಲ್ಲೂ ಬರೋಬ್ಬರಿ 6,000ಕ್ಕೂ ಹೆಚ್ಚು ಜನರು ಈ ಹಿಂಸಾಚಾರದಲ್ಲಿ ಬಲಿಯಾಗಿದ್ದಾರೆ ಎಂಬ ಆರೋಪ ಇದೆ. ಈ ಘಟನೆ ನಂತರ ಅಮೆರಿಕ ಮತ್ತು ಇರಾನ್ ನಡುವೆ ನೇರವಾಗಿಯೇ ಗಲಾಟೆ ಶುರುವಾಗಿ, ಇರಾನ್ ನೆಲದಲ್ಲಿ ಹಿಂಸಾಚಾರ ನಡೆಯಲು ಅಮೆರಿಕ ಕಾರಣ ಎಂಬ ಆರೋಪವನ್ನ ಇರಾನ್ ಮಾಡಿತ್ತು. ಕೊನೆಗೆ ಇಬ್ಬರೂ ತಿಕ್ಕಾಟ ನಡೆಸಿ, ನಡೆಸಿ ಅಮೆರಿಕದ ಸೇನೆ ಇರಾನ್ ಬಳಿ ಬಂದು ನಿಂತಿದೆ. ಇಂತಹ ಸ್ಥಿತಿಯಲ್ಲಿ ಇಬ್ಬರೂ ಯುದ್ಧ ಮಾಡಬಾರದು ಎಂಬ ಕಾರಣಕ್ಕೆ ಈಗ ಶಾಂತಿ ಒಪ್ಪಂದ ಮಾಡಿಸಲು ಹಲವು ದೇಶಗಳು ಮುಂದಾಗಿವೆ.
ಜಗಳ ನಿಲ್ಲಿಸಲು ತುರ್ತು ಸಭೆ
ಅಮೆರಿಕ ಜೊತೆಗಿನ ಪರಮಾಣು ಮಾತುಕತೆ & ಒಪ್ಪಂದದ ಬಗ್ಗೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾಹಿತಿ ನೀಡಿದ್ದು, ಶೀಘ್ರವೇ ಎರಡೂ ದೇಶಗಳು ಒಂದು ನಿರ್ಧಾರಕ್ಕೆ ಬರುವ ಮುನ್ಸೂಚನೆ ಕೊಟ್ಟಿದ್ದು ಆಗಿದೆ. ಹಾಗೇ ಇನ್ನೊಂದು ಕಡೆ ಇರಾನ್ ಸರ್ವಾಧಿಕಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಎಚ್ಚರಿಕೆ ಸಂದೇಶ ನೀಡಿದ್ದು, ಇರಾನ್ ಈಗ ತಡಮಾಡದೆ ಬಂದು ಅಮೆರಿಕ ಜೊತೆಗೆ ಪರಮಾಣು ಒಪ್ಪಂದ ಮಾಡಿಕೊಳ್ಳಬೇಕು ಎಂಬ ಭಾರಿ ದೊಡ್ಡ ಡಿಮ್ಯಾಂಡ್ ಇಟ್ಟಿದ್ದಾರೆ. ಇದೇ ಕಾರಣಕ್ಕೆ ಇಬ್ಬರ ನಡುವಿನ ಜಗಳ ಮತ್ತೆ ಹೆಚ್ಚಾಗದಂತೆ ಮಾಡಲು ತುರ್ತು ಸಭೆಯನ್ನು ಈಗ ಒಮನ್ ನೆಲದಲ್ಲಿ ಏರ್ಪಡಿಸಲಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಸಾಗಿವೆ.












Click it and Unblock the Notifications