• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ತೆಕ್ಕೆಗೆ ಬಿದ್ದೇ ಬಿಡ್ತಾ ಹಾಂಕಾಂಗ್‌? ಅಮೆರಿಕ ಕೊಟ್ಟ ವಾರ್ನಿಂಗ್ ಹೆಂಗಿತ್ತು?

|

ಹಾಂಕಾಂಗ್‌ ವಿಚಾರವಾಗಿ ಅಮೆರಿಕ-ಚೀನಾ ಫೈಟ್ ಮುಂದುವರಿದಿದ್ದು, ಹಾಂಕಾಂಗ್‌ ಆಂತರಿಕ ವಿಚಾರದಲ್ಲಿ ಚೀನಾ ಹಸ್ತಕ್ಷೇಪ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಹಾಂಕಾಂಗ್‌ ಜನಪ್ರತಿನಿಧಿಗಳ ಆಯ್ಕೆಯಲ್ಲಿ ಹಲವು ಬದಲಾವಣೆ ತರಲು ಚೀನಾ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಚುನಾವಣೆ ಕಾನೂನುಗಳ ಬದಲಾವಣೆಗೆ ಚೀನಾ ಪ್ರಚೋದನೆ ನೀಡುತ್ತಿದೆ.

ಇದರಿಂದ ಏಕಪಕ್ಷಿಯ ಆಯ್ಕೆ ನಡೆಯಲಿದೆ ಎಂಬುದು ಈ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಹಾಂಕಾಂಗ್ ನಾಯಕರು ಚೀನಾ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಇದೇ ಸಂದರ್ಭದಲ್ಲೇ ಬೀಜಿಂಗ್ ಹಾಂಕಾಂಗ್‌ನ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ ಚೀನಾ ವಿರುದ್ಧ ದೊಡ್ಡ ಹೋರಾಟ ನಡೆದಿತ್ತು. ಹಾಂಕಾಂಗ್‌ನ ಪ್ರಜಾಪ್ರಭುತ್ವವಾದಿ ನಾಯಕರು ಬಂಧಿಸಲ್ಪಟ್ಟಿದ್ದರು.

ನೂರಾರು ಮಂದಿ ಈಗಲೂ ಕಂಬಿ ಎಣಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಚೀನಾ ಹಾಂಕಾಂಗ್‌ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಮುಂದಾಗಿದೆ ಎಂಬ ಆರೋಪ ಅಮೆರಿಕದ್ದು. ಇದೇ ಕಾರಣಕ್ಕೆ ಚೀನಾ ವಿರುದ್ಧ ಹರಿಹಾಯ್ದಿರುವ ಅಮೆರಿಕ, ಇದು ಹಾಂಕಾಂಗ್‌ ಮೇಲಿನ ನೇರ ಯುದ್ಧಕ್ಕೆ ಸಮ ಎಂದು ಗುಡುಗಿದೆ. ಆದರೆ ವೈಟ್‌ಹೌಸ್‌ನ ಈ ಆರೋಪಕ್ಕೆ ಚೀನಾ ಮಾತ್ರ ಇನ್ನೂ ರೀಪ್ಲೇ ಕೊಟ್ಟಿಲ್ಲ.

ಯುರೋಪ್ ಒಕ್ಕೂಟದ ವಾರ್ನಿಂಗ್..!

ಯುರೋಪ್ ಒಕ್ಕೂಟದ ವಾರ್ನಿಂಗ್..!

ನೋಡಿ ಹಾಂಕಾಂಗ್‌ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ಇದರಿಂದ ಸಂಬಂಧಕ್ಕೆ ಘಾಸಿ ಆಗಬಾರದು ಎಂದು ಯುರೋಪ್ ಒಕ್ಕೂಟ ಚೀನಾಗೆ ಎಚ್ಚರಿಕೆ ನೀಡಿದೆ. ಹಾಂಕಾಂಗ್‌ ವಿಚಾರದಲ್ಲಿ ಈ ಹಿಂದಿನಿಂದಲೂ ಅಮೆರಿಕದ ನಿಲುವಿಗೆ ಬದ್ಧವಾಗಿರುವ ಯುರೋಪ್ ಒಕ್ಕೂಟ, ಈಗಲೂ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಈ ಹಿಂದೆ ಟ್ರಂಪ್ ಆಡಳಿತದಲ್ಲಿ ಯುರೋಪ್ ಹಾಗೂ ಅಮೆರಿಕದ ಸಂಬಂಧ ಹಳಸಿದಾಗ, ಯುರೋಪ್ ಮತ್ತು ಚೀನಾ ನಡುವೆ ಸಂಬಂಧ ಗಟ್ಟಿಯಾಗಿತ್ತು. ಇದೇ ಕಾರಣಕ್ಕೆ ನಮ್ಮ ಸಂಬಂಧಗಳು ಕೆಡಬಾರದೆಂಬ ಅರ್ಥದಲ್ಲೇ ಯುರೋಪ್ ಒಕ್ಕೂಟ ಚೀನಾ ನಾಯಕರಿಗೆ ಎಚ್ಚರಿಕೆಯಿಂದ ವ್ಯವಹರಿಸಲು ಸಲಹೆ ನೀಡಿದೆ.

ಓಡಿ ಹೋದರೂ ಅರೆಸ್ಟ್ ಆಗ್ತಾರೆ..!

ಓಡಿ ಹೋದರೂ ಅರೆಸ್ಟ್ ಆಗ್ತಾರೆ..!

ಹಾಂಕಾಂಗ್‌ನಲ್ಲಿ ನಡೆದ ಚೀನಾ ವಿರೋಧಿ ಹೋರಾಟದಲ್ಲಿ ಭಾಗಿಯಾದವರನ್ನೇ ಟಾರ್ಗೆಟ್ ಮಾಡಲಾಗಿದೆ ಎಂಬ ಆರೋಪವಿದೆ. ಹೀಗಾಗಿ ಚೀನಾ ಕೈಗೆ ಸಿಗದೆ ಓಡಿ ಹೋಗುತ್ತಿದ್ದವರನ್ನೂ ಚೀನಾ ಬಿಡುತ್ತಿಲ್ಲ ಎಂಬುದು ಹೋರಾಟಗಾರರ ಆರೋಪ. ಸಾಕಪ್ಪಾ ಸಾಕು ಚೀನಾ ಸಹವಾಸ ಅಂತಾ ತೈವಾನ್‌ಗೆ ಪಲಾಯನ ಮಾಡುತ್ತಿದ್ದ ಹತ್ತಾರು ಮಂದಿ ಜೈಲು ಸೇರಿದ್ದಾರೆ. ಅಕ್ರಮವಾಗಿ ಗಡಿದಾಟಿದ ಆರೋಪವನ್ನ ಹಾಂಕಾಂಗ್ ಪ್ರಜೆಗಳ ವಿರುದ್ಧ ಹೊರಿಸಲಾಗಿದೆ. ಇದು ಸಹಜವಾಗಿ ಜಗತ್ತಿನ ಗಮನ ಸೆಳೆದಿದೆ. ಹಾಂಕಾಂಗ್ ವಿಚಾರದಲ್ಲಿ ಹೀಗೆ ಮಾಡಬೇಡಿ ಹಾಗೇ ಮಾಡಬೇಡಿ ಅಂತಾ ಜಗತ್ತಿನ ಬಲಾಢ್ಯ ರಾಷ್ಟ್ರಗಳು ಸಲಹೆ ಹಾಗೂ ಎಚ್ಚರಿಕೆ ನೀಡುತ್ತಿವೆ.

ನೆಮ್ಮದಿಯಾಗಿ ಉಸಿರಾಡಲೂ ಆಗುತ್ತಿಲ್ಲ

ನೆಮ್ಮದಿಯಾಗಿ ಉಸಿರಾಡಲೂ ಆಗುತ್ತಿಲ್ಲ

ಅತ್ತ ಚೀನಾ, ಇತ್ತ ಅಮೆರಿಕ. ಈ ಎರಡೂ ದೇಶಗಳ ಮಧ್ಯೆ ಸಿಲುಕಿ ಹಾಂಕಾಂಗ್‌ ಅಪ್ಪಚ್ಚಿಯಾಗಿದೆ. ಇನ್ನೇನು ಹಾಂಕಾಂಗ್ ತನ್ನಿಂದ ದೂರ ಹೋಯಿತು ಎನ್ನುವಷ್ಟರಲ್ಲಿ ರಾಜಕಾರಣಿಗಳನ್ನು ಓಲೈಸಿ, ಪ್ರತಿಭಟನೆ ಹತ್ತಿಕ್ಕಿದೆ ಚೀನಾ ಎಂಬ ಆರೋಪವಿದೆ. ಅಲ್ಲದೆ ಕಳೆದ ವರ್ಷ ಹೊಸ ಕಾನೂನನ್ನು ಕೂಡ ಜಾರಿಗೆ ತಂದಿದೆ. ಈ ಹೊಸ ಕಾನೂನಿನಲ್ಲಿ ಹೋರಾಟ ಹತ್ತಿಕ್ಕುವುದರಿಂದ ಹಿಡಿದು, ಹೋರಾಟಗಾರರ ನೆಮ್ಮದಿ ಕೆಡಿಸುವ ತನಕ ಎಲ್ಲವೂ ಪ್ಲಾನ್ಡ್ ಆಗಿದೆ. ಅದರಂತೆ ಹಾಂಕಾಂಗ್ ನಾಯಕರು ಹೊಸ ಕಾನೂನು ಜಾರಿಗೆ ತಂದಿದ್ದು, ಹಾಂಕಾಂಗ್‌ನಲ್ಲಿ ಖಾಸಗಿ ಮಾಹಿತಿಗಳನ್ನೂ ಸರ್ಕಾರ ಕದಿಯುತ್ತಿದೆ ಎಂಬ ಗಂಭೀರ ಆರೋಪವಿದೆ.

ನೆಮ್ಮದಿಯೇ ಇಲ್ಲದ ದೇಶ ಹಾಂಕಾಂಗ್

ನೆಮ್ಮದಿಯೇ ಇಲ್ಲದ ದೇಶ ಹಾಂಕಾಂಗ್

ಹಲವು ವರ್ಷಗಳ ಕಾಲ ಬ್ರಿಟಿಷರ ಅಡಿಯಾಳಾಗಿದ್ದ ಹಾಂಕಾಂಗ್ ಸ್ವತಂತ್ರಗೊಂಡರೂ ನೆಮ್ಮದಿಯೇ ಇಲ್ಲ. ಏಕೆಂದರೆ ಅಲ್ಲಿ ಚೀನಾ ಎಂಟ್ರಿ ಕೊಟ್ಟಿತ್ತು. ಸ್ವತಂತ್ರ ದೇಶದಂತೆ ಬಾಳಿದ್ದ ಹಾಂಕಾಂಗ್ ಮೇಲೆ ಚೀನಾ ಮೆಲ್ಲಗೆ ಹಿಡಿತ ಸಾಧಿಸಿತ್ತು. ಪರಿಣಾಮ ಜನರಿಗೆ ನೆಮ್ಮದಿ ಇಲ್ಲವಾಗಿದೆ. ಅಷ್ಟೊಂದು ಅಭಿವೃದ್ಧಿ ಹೊಂದಿದ್ದರೂ ಬೇರೆ ದೇಶಗಳು ಹಾಂಕಾಂಗ್ ಜನರನ್ನು ಕಂಟ್ರೋಲ್ ಮಾಡುತ್ತಿವೆ. ಅತ್ತ ತೈವಾನ್ ಮೇಲೂ ಕಣ್ಣಿಟ್ಟು ಕೂತಿರುವ ಚೀನಾಗೆ ಹಾಂಕಾಂಗ್ ಕೂಡ ಬೇಕಾಗಿದೆ. ಇದು ನನಸಾಗದಂತೆ ತಡೆಯಲು ಅಮೆರಿಕ ಶತಾಯಗತಾಯ ದಾಳ ಉರುಳಿಸುತ್ತಿದೆ.

English summary
USA & European Union warns China that allegedly interference in Hong Kong election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X