ತಾಯಿಯ ಶವವನ್ನು 44 ದಿನಗಳ ಕಾಲ ಬೆಡ್‌ಶೀಟಿನೊಳಗೆ ಸುತ್ತಿಟ್ಟಿದ್ದ ಮಗಳು

ಇದೊಂದು ವಿಚಿತ್ರ ಘಟನೆ, ಸಾಮಾನ್ಯವಾಗಿ ವ್ಯಕ್ತಿ ಮೃತಪಟ್ಟರೆ ಅವರವರ ಧಾರ್ಮಿಕ ಆಚರಣೆಯಂತೆ ಅಂತ್ಯಕ್ರಿಯೆ ಮಾಡುವುದು ಸಾಮಾನ್ಯ.

ಆದರೆ ಇಲ್ಲೊಬ್ಬ ಮಗಳು ತಾಯಿ ಮೃತಪಟ್ಟ ಮೇಲೆ ಆಕೆಯ ಶವವನ್ನು 44 ದಿನಗಳ ಕಾಲ ಬೆಡ್‌ಶೀಟಿನೊಳಗೆ ಸುತ್ತಿ ಬಚ್ಚಿಟ್ಟಿದ್ದ ವಿಚಿತ್ರ ಘಟನೆ ವಾಷಿಂಗ್‌ಟನ್‌ನಲ್ಲಿ ನಡೆದಿದೆ. ವರ್ಜೀನಿಯಾ ಮೂಲದ ಮಹಿಳೆ ಜೋ-ವಿಟ್ನಿ ಔಟ್‌ಲ್ಯಾಂಡ್ ತನ್ನ ತಾಯಿ ರೋಸ್‌ಮೆರಿ(78) ಮೃತದೇಹವನ್ನು 54 ಬೆಡ್‌ಶೀಟುಗಳಿಂದ 44 ದಿನಗಳ ಕಾಲ ಸುತ್ತಿಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೊಂದು ವಿಚಿತ್ರ ಮಾನಸಿಕ ಸ್ಥಿತಿಯಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಔಟ್‌ಲ್ಯಾಂಡ್ ಅವರ ತಾಯಿ ಡಿಸೆಂಬರ್ 29ರಂದು ಮೃತಪಟ್ಟಿದ್ದರು.ಬಳಿಕ ಆಕೆಯನ್ನು ಬೆಡ್‌ಶೀಟಿನೊಳಗೆ ಸುತ್ತಿಟ್ಟಿದ್ದಳು, ಯಾರೇ ಸ್ನೇಹಿತರು ಅಥವಾ ಸಂಬಂಧಿಕರು ಮನೆಯೊಳಗೆ ಬಂದರೂ ಆ ಕೋಣೆಗೆ ಹೋಗಲು ಬಿಡುತ್ತಿರಲಿಲ್ಲ. ಶರೀರ ಕೊಳೆತರೂ ವಾಸನೆ ಹೊರಗೆ ಬರದಂತೆ ತಡೆಯಲು 62 ರೂಮ್ ಫ್ರಷ್ನರ್‌ಗಳನ್ನು ಬಳಕೆ ಮಾಡಿದ್ದಳು.

US Woman Arrested For Hiding Her Mothers Body Under Blankets For 44 Days

ಸಾಕಷ್ಟು ಕೊಲೆ, ಆತ್ಮಹತ್ಯೆ ಇನ್ನಿತರೆ ಪ್ರಕರಣಗಳನ್ನು ನೋಡಿದ್ದೇನೆ ಆದರೆ ಇಂತಹ ಪ್ರಕರಣ ನೋಡುತ್ತಿರುವುದು ಇದೇ ಮೊದಲು, ಸಂಬಂಧಿಕರು ಅವರ ನಂಬರ್‌ಕೆ ಎಷ್ಟೇ ಕಾಲ್ ಮಾಡಿದರೂ ರಿಸೀವ್ ಮಾಡದಿದ್ದ ಕಾರಣ ಅವರ ಸಂಬಂಧಿ ಮನೆಯನ್ನು ಹತ್ತಿ ಕಿಟಕಿಯಿಂದ ನೋಡಿದಾಗ ಸತ್ತಿರುವ ಯಾವುದೇ ಸುಳಿವು ಕಾಣಿಸಲಿಲ್ಲ.

ಕೆಲವರು ವಿಟ್ನಿ ಅವರ ತಾಯಿ ಮೃತ ಪಟ್ಟ ಮೇಲೆ ತಾಯಿಯ ಜೊತೆ ಅದೇ ಮನೆಯಲ್ಲಿದ್ದರು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರೂ ಇಲ್ಲ ಇಲ್ಲ ಅವರು ಸಂಬಂಧಿಕರ ಮನೆಯಲ್ಲಿರುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಔಟ್‌ಲ್ಯಾಂಡ್‌ನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಫೆ.28ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+