ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತ; ಯುಎಸ್ ಸ್ವಾಗತ
ವಾಷಿಂಗ್ಟನ್, ಜನವರಿ 05: ''ವಿಶ್ವಸಂಸ್ಥೆಯ ಭದ್ರತಾ ಮಂಡಳಿ(UNSC)ಗೆ ಭಾರತ ಸೇರ್ಪಡೆಯನು ಆತ್ಮೀಯವಾಗಿ ಸ್ವಾಗತಿಸುತ್ತೇವೆ.ವಿಶ್ವಸಂಸ್ಥೆಯಲ್ಲಿರುವ ಕಾಯಂ ಭಾರತೀಯ ಮಿಷನ್ ಜತೆಗೆ ಕಾರ್ಯನಿರ್ವಹಿಸುವ ಮೂಲಕ ಹೆಚ್ಚು ಶಾಂತಿಯುತ ಹಾಗೂ ಸುರಕ್ಷಿತ ಇಂಡೋ-ಫೆಸಿಫಿಕ್ ಪ್ರದೇಶ ಮತ್ತು ವಿಶ್ವವನ್ನು ನಿರ್ಮಿಸುವ ಸಮಾನ ಹಿತಾಸಕ್ತಿಯ ನಿಟ್ಟಿನಲ್ಲಿ ಶ್ರಮಿಸಲಿದ್ದೇವೆ'' ಎಂದು ಯುನೈಟೆಡ್ ಸ್ಟೇಟ್ಸ್ ಸ್ವಾಗತ ಕೋರಿದೆ.
ಶಾಂತಿಯುತ ಮತ್ತು ಸುರಕ್ಷಿತ ಇಂಡೋ-ಫೆಸಿಫಿಕ್ ಪ್ರದೇಶ ಸ್ಥಾಪನೆಯ ಸಮಾನ ಹಿತಾಸಕ್ತಿಯ ನಿಟ್ಟಿನಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಅಮೆರಿಕ ಅಧಿಕೃತ ಹೇಳಿಕೆ,( @State_SCA) ಟ್ವೀಟ್ ಮೂಲಕ ತಿಳಿಸಿದೆ.
ವಿಶ್ವಸಂಸ್ಥೆ: ಚೀನಾವನ್ನು ಸೋಲಿಸಿ ಪ್ರತಿಷ್ಠಿತ ಸದಸ್ಯತ್ವ ಪಡೆದ ಭಾರತ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಎಂಟನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವ ಪಡೆದುಕೊಳ್ಳುತ್ತಿದ್ದು, 2021-22ನೇ ಅವಧಿಗೆ ಸದಸ್ಯ ದೇಶವಾಗಿ ಕಾರ್ಯ ನಿರ್ವಹಿಸಲಿದೆ. ಸೋಮವಾರದಂದು ಭಾರತದ ಧ್ವಜವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾಪಿಸಲಾಗುತ್ತದೆ ಎಂದು UNSCಯಲ್ಲಿ ಭಾರತದ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ ಹೇಳಿದರು.
ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ (ಇಸಿಒಎಸ್‌ಒಸಿ) ಪ್ರತಿಷ್ಠಿತ ಭಾಗವಾಗಿರುವ ಸಿಎಸ್‌ಡಬ್ಲ್ಯೂದಲ್ಲಿ ಭಾರತವು 2021ರಿಂದ 2025ರವರೆಗೆ ನಾಲ್ಕು ವರ್ಷ ಸದಸ್ಯ ರಾಷ್ಟ್ರವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
UNSC ಸದಸ್ಯತ್ವ: ಭಾರತ ಅಲ್ಲದೆ, ಮೆಕ್ಸಿಕೋ ಹಾಗೂ ಕೀನ್ಯಾ ದೇಶಗಳಿಗೆ ಈ ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಲಭಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬ್ರಿಟನ್, ಚೀನಾ, ಫ್ರಾನ್ಸ್, ರಷ್ಯಾ ಹಾಗೂ ಅಮೆರಿಕ ಶಾಶ್ವತ ಸದಸ್ಯ ರಾಷ್ಟ್ರಗಳಾಗಿದ್ದು, 10 ತಾತ್ಕಾಲಿಕ ಸದಸ್ಯ ರಾಷ್ಟ್ರಗಳಿರಲಿವೆ. 1950-1951, 1967-1968, 1972-1973, 1977-1978, 1984-1985, 1991-1992 and 2011-2012 ನಂತರ ಮತ್ತೊಮ್ಮೆ ಆಯ್ಕೆಯಾಗುವ ಮೂಲಕ 8ನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವವನ್ನು ಭಾರತ ಪಡೆದುಕೊಂಡಿದೆ.
A new year brings new opportunities to strengthen relationships with old friends and partners. We welcome India to the @UN Security Council and look forward to working with @IndiaUNNewYork to advance our shared interests in a more peaceful, secure Indo-Pacific and world.
— State_SCA (@State_SCA) January 4, 2021
ಬೆಲ್ಜಿಯಂ, ಐವರಿ ಕೋಸ್ಟ್, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್, ದಕ್ಷಿಣ ಆಫ್ರಿಕಾ, ಡೊಮೊನಿಕ್ ರಿಪಬ್ಲಿಕ್, ಈಕ್ವೆಟೋರಿಯಲ್ ಗಿನಿ ತಾತ್ಕಾಲಿಕ ಸದಸ್ಯರಾಷ್ಟ್ರಗಳಾಗಿವೆ.