US vs Venezuela: ಅಮೆರಿಕಾದ ಖತರ್ನಾಕ್ ಡೆಲ್ಟಾ ಫೋರ್ಸ್: ಶತ್ರುಗಳ ಮೈ ನಡುಗಿಸುವ ಸೇನೆ
ಅಮೆರಿಕಾದ ಸೇನಾ ವೆನೆಜುವೆಲಾ ಮೇಲೆ ಕೆಲವೇ ಗಂಟೆಗಳಲ್ಲಿ ದಾಳಿ ಮಾಡಿ, ಅಲ್ಲಿನ ಅಧ್ಯಕ್ಷರನ್ನು ಬಂಧನ ಮಾಡಿದ ಬೆನ್ನಲ್ಲೇ ಅಮೆರಿಕಾದ ಸೇನಾ ಕಾರ್ಯಾಚರಣೆಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಅದರಲ್ಲೂ ಅಮೆರಿಕಾದ ಡೆಲ್ಟಾ ಫೋರ್ಸ್ ಇದೀಗ ಶತ್ರು ರಾಷ್ಟ್ರಗಳ ಎದೆಯಲ್ಲಿ ನಡುಕವನ್ನುಂಟು ಮಾಡಿದೆ. ಅಮೆರಿಕ ಸೇನೆಯ ಅತ್ಯಂತ ರಹಸ್ಯ ಮತ್ತು ಶಕ್ತಿಶಾಲಿ ಫೋರ್ಸ್ ಅಂತಲೇ ಡೆಲ್ಟಾ ಫೋರ್ಸ್ ಅನ್ನು ಪರಿಗಣಿಸಲಾಗುತ್ತದೆ.
ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗಳಲ್ಲಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಸೆರೆಹಿಡಿದು ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ. ಇದರೊಂದಿಗೆ ಡೆಲ್ಟಾ ಫೋರ್ಸ್ ಹೆಸರಿನ ಬಗ್ಗೆ ಮತ್ತೊಮ್ಮೆ ಪ್ರಪಂಚದಾದ್ಯಂತ ಭಾರೀ ಚರ್ಚೆ ನಡೆದಿದೆ. ಡೆಲ್ಟಾ ಫೋರ್ಸ್ ಎಂದರೇನು, ಈ ಫೋರ್ಸ್ ಕಾರ್ಯಾಚರಣೆ ಹೇಗಿರುತ್ತದೆ ಎನ್ನುವುದು ಸೇರಿದಂತೆ ಕುತೂಹಲಕಾರಿ ವಿಷಯಗಳ ವಿವರ ಇಲ್ಲಿದೆ. ಅಮೆರಿಕದ ಸೇನೆಯಲ್ಲಿ ಅಧಿಕೃತವಾಗಿ ಇದನ್ನು 1ನೇ ವಿಶೇಷ ಪಡೆಗಳ ಕಾರ್ಯಾಚರಣೆ ಡಿಟ್ಯಾಚ್‌ಮೆಂಟ್-ಡೆಲ್ಟಾ (1 ನೇ SFOD-D) ಎಂದು ಕರೆಯಲಾಗುತ್ತದೆ. ಆದರೆ ಇದನ್ನು ಅಧಿಕೃತವಾಗಿ ಡೆಲ್ಟಾ ಫೋರ್ಸ್ ಎಂದು ಕರೆಯಲಾಗುತ್ತದೆ.

ಡೆಲ್ಟಾ ಫೋರ್ಸ್ ಯಾವಾಗ ರಚಿಸಲಾಯಿತು
1. 1970 ರ ದಶಕದಲ್ಲಿ ಪ್ರಪಂಚದಾದ್ಯಂತ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿದ್ದ ಸಂದರ್ಭದಲ್ಲಿ ಅವುಗಳನ್ನು ಎದುರಿಸಲು ವಿಶೇಷ ಪಡೆ ಅಗತ್ಯವಿದೆ ಎಂದು ಅಮೆರಿಕ ಭಾವಿಸಿತು.
2. 1977 ರಲ್ಲಿ ಕರ್ನಲ್ ಚಾರ್ಲ್ಸ್ ಬೆಕ್‌ವಿತ್ ನೇತೃತ್ವದಲ್ಲಿ ಈ ಫೋರ್ಸ್ ರಚನೆ ಮಾಡಲಾಯಿತು. ಇದರ ತರಬೇತಿ ಮತ್ತು ತಂತ್ರಗಳು ಬ್ರಿಟಿಷ್ ವಾಯು ಸೇವೆಯ (SAS)ಂತೆಯೇ ಇರುತ್ತವೆ.
ಡೆಲ್ಟಾ ಫೋರ್ಸ್‌ನ ಮುಖ್ಯ ಜವಾಬ್ದಾರಿಗಳೇನು
1. ಭಯೋತ್ಪಾದನಾ ನಿಗ್ರಹ: ಪ್ರಪಂಚದ ಎಲ್ಲಿಯಾದರೂ ಅಮೆರಿಕದ ಹಿತಾಸಕ್ತಿಗಳಿಗೆ ಬೆದರಿಕೆ ಹಾಕುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವುದು.
ಒತ್ತೆಯಾಳು ರಕ್ಷಣೆ: ವಿದೇಶದಲ್ಲಿ ಅಪಹರಿಸಲ್ಪಟ್ಟ ಅಮೆರಿಕನ್ನರನ್ನು ರಕ್ಷಿಸುವುದು.
2. ಪ್ರಭಾವಿಗಳಿಗೆ ಶತ್ರುಗಳಿಗೆ ಬಲೆ: ಶತ್ರು ರಾಷ್ಟ್ರಗಳ ನಾಯಕರನ್ನು ಅಥವಾ ಪ್ರಭಾವಿ ಭಯೋತ್ಪಾದಕರನ್ನು ಸೆರೆಹಿಡಿಯುವುದು ಅಥವಾ ನಿರ್ಮೂಲನೆ ಮಾಡುವುದು.
3. ಅತ್ಯಂತ ರಹಸ್ಯ ಕಾರ್ಯಾಚರಣೆಗಳು: ಇನ್ನು ಡೆಲ್ಟಾ ಅತ್ಯಂತ ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತದೆ. ಈ ಫೋರ್ಸ್‌ನ ಕಾರ್ಯಾಚರಣೆ ಅಮೆರಿಕದ ಅಧ್ಯಕ್ಷರು ಮತ್ತು ಉನ್ನತ ಅಧಿಕಾರಿಗಳನ್ನು ಹೊರತುಪಡಿಸಿ ಯಾರಿಗೂ ಗೊತ್ತಾಗುವುದಿಲ್ಲ.
ತರಬೇತಿ ಹೇಗಿರುತ್ತದೆ ?
ಡೆಲ್ಟಾ ಫೋರ್ಸ್‌ಗೆ ಸೇರುವುದು ವಿಶ್ವದ ಅತ್ಯಂತ ಕಷ್ಟಕರವಾದ ಕೆಲಸ. ಸಾಮಾನ್ಯ ಸೈನಿಕರು ಇದಕ್ಕೆ ಸೇರಲು ಸಾಧ್ಯವಿಲ್ಲ. ಆರ್ಮಿ ರೇಂಜರ್ಸ್ ಅಥವಾ ಗ್ರೀನ್ ಬೆರೆಟ್ಸ್ ನಂತಹ ವಿಶೇಷ ಪಡೆಗಳಲ್ಲಿ ಈಗಾಗಲೇ ಅನುಭವ ಹೊಂದಿರುವವರು ಮಾತ್ರ ಇದರಲ್ಲಿ ಸ್ಥಾನ ಪಡೆಯುತ್ತಾರೆ. ತರಬೇತಿಯ ಒಂದು ಭಾಗವು 40 ಕೆಜಿ ಭಾರದ ವಸ್ತುವಿನೊಂದಿಗೆ ಪರ್ವತಗಳಲ್ಲಿ ಮೈಲುಗಳಷ್ಟು ನಡೆಯುವುದು ಮತ್ತು ಬಹಳ ಕಡಿಮೆ ಆಹಾರವನ್ನು ಸೇವಿಸಿ ದಿನಗಳನ್ನು ಕಳೆಯುವುದನ್ನು ಒಳಗೊಂಡಿದೆ. ಆಯ್ಕೆಯಾದವರಲ್ಲಿ ಸುಮಾರು 90% ಸೈನಿಕರು ಮಧ್ಯದಲ್ಲಿ ತರಬೇತಿಯನ್ನು ಕೈಬಿಡುತ್ತಾರೆ ಇದು ಅವರ ತರಬೇತಿ ಎಷ್ಟು ಭಯಾನಕವಾಗಿರುತ್ತದೆ ಎನ್ನುವುದಕ್ಕೆ ಸಣ್ಣ ಉದಾಹರಣೆ.
ಮದುರೊ ಬಂಧನದ ಹಿಂದೆ ಡೆಲ್ಟಾ ಫೋರ್ಸ್
ಇನ್ನು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಸೆರೆಹಿಡಿದು, ನ್ಯೂಯಾರ್ಕ್‌ಗೆ ಕರೆದುಕೊಂಡು ಬರುವುದರಲ್ಲಿ ಅಮೆರಿಕಾದ ಡೆಲ್ಟಾ ಪೋರ್ಸ್ ಕಾರ್ಯಾಚರಣೆ ಇತ್ತು ಎಂದು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡುತ್ತಿವೆ. ಡೆಲ್ಟಾ ಫೋರ್ಸ್ ಮಾತ್ರ ಅಧ್ಯಕ್ಷರ ಹೈ-ಸೆಕ್ಯುರಿಟಿ ಕಾಂಪೌಂಡ್‌ಗೆ ಎಂಟ್ರಿ ಕೊಟ್ಟು ಅಧ್ಯಕ್ಷರನ್ನು ವಶಪಡಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?












Click it and Unblock the Notifications