ಅಪಹೃತ ಭಾರತೀಯನಿಗಾಗಿ ಯುಎಸ್ ಹುಡುಕಾಟ
ಕಾಬೂಲ್, ಜೂ.4: ಅಫ್ಘಾನಿಸ್ತಾನದ ಹೆರಾತ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿಗೆ ಸರಿಯಾಗಿ 10 ದಿನಗಳ ನಂತರ ಭಾರತ ಮೂಲದ ಧರ್ಮಗುರು ಅಲೆಕ್ಸಿನ್ ಪ್ರೇಮ್ ಕುಮಾರ್ ಎಂಬುವರ ಅಪಹರಣವಾಗಿದೆ. ಮದುರೈನ ಧರ್ಮಗುರು ಅಲೆಕ್ಸಿಸ್ ಪ್ರೇಮ್‌ಕುಮಾರ್ ಅವರನ್ನು ಅಪಹರಿಸಿದ್ದು ಇದುವರೆವಿಗೂ ಸುಳಿವು ಸಿಕ್ಕಿಲ್ಲ.
ಪ್ರೇಮ್ ಕುಮಾರ್ ಅವರ ಪತ್ತೆಗೆ ಅಗತ್ಯ ನೆರವು ನೀಡಲಾಗುತ್ತಿದೆ, ಭಾರತ ಹಾಗೂ ಅಫ್ಘಾನಿಸ್ತಾನಸರ್ಕಾರದ ಜತೆ ಮಾತುಕತೆ ನಡೆಸಲಾಗಿದೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.
One person arrested in connection with the abduction of Indian aid worker Alexis Prem Kumar: Afghan authorities convey to India.
— Press Trust of India (@PTI_News) June 4, 2014 ಪ್ರೇಮ್ ಕುಮಾರ್ ಅವರನ್ನು ಅಪಹರಿಸಿದ್ದು ತಾಲಿಬಾನ್ ಉಗ್ರರೇ ಎಂಬ ವಿಚಾರ ಖಚಿತವಾಗಿದೆ. ಸುದ್ದಿವಾಹಿನಿಯೊಂದು ಮಂಗಳವಾರ ವರದಿ ಮಾಡಿದೆ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಪ್ರಕರಣದ ಬಗ್ಗೆ ಅಫ್ಘಾನಿಸ್ತಾನದ ಅಧಿಕಾರಿಗಳ ಜತೆ ಶೀಘ್ರವೇ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಲಾಗಿದೆ.

ಈ ನಡುವೆ ತಮಿಳುನಾಡಿನ ಮದುರೈನಲ್ಲಿರುವ ಪ್ರೇಮ್‌ಕುಮಾರ್ ತಂದೆ ಮಾತನಾಡಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಪಹರಣಕ್ಕೆ ಒಳಗಾಗಿರುವ ಪುತ್ರನನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಬಗ್ಗೆ ಯತ್ನಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ನಿಟ್ಟಿನಲ್ಲಿ ಎಂಡಿಎಂಕೆ ಮುಖ್ಯಸ್ಥ ವೈಕೋ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಅಫ್ಘಾನಿಸ್ತಾನದಲ್ಲಿನ ಭಾರತೀಯ ರಕ್ಷಣೆಗೆ ಕೋರಿ, ಪ್ರೇಮ್ ಕುಮಾರ್ ಪತ್ತೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.
ಕಾಬೂಲ್‌ನಲ್ಲಿ ಅಪಹರಣ ಪ್ರಕರಣಕ್ಕೆ ಯಾವುದೇ ಖಚಿತ ಸುಳಿವು ಲಭ್ಯವಾಗಿಲ್ಲ ಎಂದು ಅಫ್ಘಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಯಭಾರ ಕಚೇರಿ ಅಫ್ಘಾನಿಸ್ತಾನ ಸರ್ಕಾರದ ಜತೆ ನಿಕಟ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಯಾವುದೇ ಯೋಜನೆಯಲ್ಲಿ ಪ್ರೇಮ್‌ಕುಮಾರ್ ಕೆಲಸ ಮಾಡುತ್ತಿರಲಿಲ್ಲ. ಬದಲಾಗಿ ಅವರು ಎನ್‌ಜಿಒ ಜತೆಗೆ ಕೆಲಸ ಮಾಡುತ್ತಿದ್ದುದಾಗಿ ನವದೆಹಲಿಯಲ್ಲಿ ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ.
Jesuit Refugee Service ಜತೆ ಕಾರ್ಯ ನಿರ್ವಹಿಸುತ್ತಿದ್ದ 47 ವರ್ಷ ವಯಸ್ಸಿನ ಪ್ರೇಮ್ ಕುಮಾರ್ ಅವರು ನಿರಾಶ್ರಿತರಿಗೆ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದರು. ಈ ಹಿಂದೆ ಶ್ರೀಲಂಕಾ ನಿರಾಶ್ರಿತರಿಗೆ ನೆರವು ನೀಡಿದ ಅನುಭವ ಪ್ರೇಮ್ ಅವರಿಗಿದೆ.
ಹೆರಾತ್ ನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಶಿಬಿರದಲ್ಲಿ ಶಾಲೆ ನಡೆಸಲಾಗುತ್ತಿತ್ತು. ಮೇ23 ರಂದು ಅಪಹರಣಕಾರರನ್ನು ತಡೆಗಟ್ಟಲು ಯತ್ನಿಸಿದ ಭದ್ರತಾ ಪಡೆ ಸಿಬ್ಬಂದಿಯನ್ನು ಅಪಹರಣಕಾರರು ಹೊಡೆದುರುಳಿಸಿದ್ದಾರೆ.
ಜೆಆರ್ ಎಸ್ 2008ರಿಂದ ಅಫ್ಘಾನಿಸ್ತಾನದ ಹೆರಾತ್, ಕಾಬೂಲ್, ಬಮಿಯಾನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪಾಕಿಸ್ತಾನ, ಇರಾನ್ ಮುಂತಾಡೆದೆಯಿಂದ ಬಂದ ನಿರಾಶ್ರಿತರಿಗೆ ಶಿಕ್ಷಣ ಹಾಗೂ ಆರೋಗ್ಯ ಸೇವೆ ಒದಗಿಸುತ್ತಿದೆ.(ಪಿಟಿಐ)












Click it and Unblock the Notifications