ಹಫೀಜ್ ಸಯೀದ್ ನ ಬಂಧಿಸಿ, ಶಿಕ್ಷಿಸಿ: ಪಾಕ್ ಗೆ ಅಮೆರಿಕ ತಾಕೀತು

Posted By:
Subscribe to Oneindia Kannada

ವಾಷಿಂಗ್ಟನ್, ನವೆಂಬರ್ 24: 26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ನನ್ನು ಪಾಕಿಸ್ತಾನ ಬಂಧಿಸಬೇಕು. ಆತನ ಅಪರಾಧಗಳಿಗೆ ಶಿಕ್ಷೆಯಾಗಬೇಕು ಎಂದು ಶುಕ್ರವಾರ ಅಮೆರಿಕ ಹೇಳಿದೆ. ಪಾಕಿಸ್ತಾನವು ಭಯೋತ್ಪಾದಕರನ್ನು ಶಿಕ್ಷಿಸುವ ವಿಚಾರದಲ್ಲಿ ಗಂಭೀರವಾಗಿಲ್ಲ ಎಂದು ಭಾರತ ಆರೋಪಿಸಿತ್ತು.

ಉಗ್ರ ಹಫೀಜ್ ಬಿಡುಗಡೆ : ಕಾಶ್ಮೀರದಲ್ಲಿ ಹೈ ಅಲರ್ಟ್

ಕಳೆದ ಜನವರಿಯಲ್ಲಿ ಹಫೀಜ್ ಸಯೀದ್ ಗೆ ಗೃಹಬಂಧನ ವಿಧಿಸಲಾಗಿತ್ತು. ಈ ವಾರ ಅದನ್ನು ಅಲ್ಲಿನ ಕೋರ್ಟ್ ಕೊನೆಗೊಳಿಸಿತ್ತು. ಆ ನಂತರ ಲಾಹೋರ್ ನಲ್ಲಿ ಭಾಷಣ ಮಾಡಿದ ಆತ ಭಾರತದ ವಿರುದ್ಧ ಮಾತನಾಡಿದ್ದಾನೆ. ಕೆಲ ವರ್ಷಗಳ ಕಾಲ ಆತನ ಬಂಧನಕ್ಕೆ ಮಾಹಿತಿ ನೀಡುವವರಿಗೆ ಒಂದು ಕೋಟಿ ಅಮೆರಿಕ ಡಾಲರ್ ಬಹುಮಾನ ಇಟ್ಟಿತ್ತು.

US Says Pakistan Must Arrest Terrorist Hafiz Saeed

ಪಾಕಿಸ್ತಾನದಲ್ಲಿ ದಾನ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಜಮಾತ್-ಉದ್-ದವಾಗೆ ಮುಖ್ಯಸ್ಥನಾಗಿರುವ ಹಫೀಜ್ ಸಯೀದ್ ಆರಾಮವಾಗಿ ಓಡಾಡಿಕೊಂಡಿದ್ದಾನೆ. "ಭಾರತ ಸೇರಿದಂತೆ ಜಾಗತಿಕ ಸಮುದಾಯ ಭಯೋತ್ಪಾದಕ ಎಂದು ಸಾರಿರುವ, ದುಷ್ಟ ಆಲೋಚನೆಗಳು ಹೊಂದಿರುವ ವ್ಯಕ್ತಿಯನ್ನು ಆರಾಮಾಗಿ ಓಡಾಡಿಕೊಂಡಿರುವುದಕ್ಕೆ ಬಿಟ್ಟಿರುವುದು ಸರಿಯಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಪಾಕಿಸ್ತಾನಿ ಸರಕಾರ ಹಫೀಜ್ ಸಯೀದ್ ನ ಗೃಹಬಂಧನವನ್ನು ಇನ್ನೂ ಮೂರು ತಿಂಗಳು ವಿಸ್ತರಿಸುವಂತೆ ಮನವಿ ಮಾಡಿದೆ. ಆದರೆ ಅದಕ್ಕೆ ಪೂರಕವಾದ ವಾದ ಮಂಡಿಸಲು ವಿಫಲವಾಗಿದೆ ಎಂದು ಹೇಳಿದ್ದ ಅಲ್ಲಿನ ಕೋರ್ಟ್, ಮನವಿಯನ್ನು ತಿರಸ್ಕರಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
26/11 mastermind Hafiz Saeed must be arrested by Pakistan and charged for his crimes, the United States said today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ